ಹೆಣ್ಣು ಹುಟ್ಟಿದರೆ ಬೇಡೆನ್ನುವ ಮನಸ್ಥಿತಿ ಬದಲಾಗಲಿ

| Published : Mar 21 2025, 12:31 AM IST

ಸಾರಾಂಶ

ಹೆಣ್ಣು ತಾಯಿ, ಹೆಂಡತಿ, ಅಕ್ಕ, ತಂಗಿಯಾಗಿ ಇಡೀ ಕುಟುಂಬ ನಿರ್ವಹಣೆಯಲ್ಲಿ ಆಕೆಯ ಪಾತ್ರ ಅಮೋಘವಾಗಿದೆ. ಇಷ್ಟೇಲ್ಲ ಕಷ್ಟ, ಕಾರ್ಪಣ್ಯ ಸಹಿಸಿಕೊಂಡು ತ್ಯಾಗಮಯ ಜೀವನ ನಡೆಸುತ್ತಿದ್ದರೂ ಈ ಸಮಾಜ ಹೆಣ್ಣು ಮಗು ಹುಟ್ಟಿದರೆ ಬೇಡ ಎನ್ನುವ ಮನಸ್ಥಿತಿ ಬದಲಾಗಬೇಕು.

ಯಲಬುರ್ಗಾ:

ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆಗೈದು ಸ್ವಾವಲಂಬಿ ಜೀವನ ನಡೆಸುವ ಮೂಲಕ ಮಾದರಿಯಾಗಿದ್ದಾಳೆ ಎಂದು ಜಿಲ್ಲಾ ಮಹಿಳಾ ಪಂಚಮಸಾಲಿ ಸಮಾಜದ ಅಧ್ಯಕ್ಷೆ ಸುಮಂಗಲಾ ಹಂಚಿನಾಳ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಬುಧವಾರ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಮಂಚಮಸಾಲಿ ಸಮಾಜ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹೆಚ್ಚು ಶಿಕ್ಷಣವಂತರಾಗಬೇಕು. ಇನ್ನಷ್ಟು ಕ್ಷೇತ್ರಗಳಲ್ಲಿ ಮಹಿಳೆಯರು ಗಣನೀಯ ಸಾಧನೆ ಮಾಡುವ ಮೂಲಕ ತನ್ನ ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಬೇಕು ಎಂದರು.

ಹೆಣ್ಣು ತಾಯಿ, ಹೆಂಡತಿ, ಅಕ್ಕ, ತಂಗಿಯಾಗಿ ಇಡೀ ಕುಟುಂಬ ನಿರ್ವಹಣೆಯಲ್ಲಿ ಆಕೆಯ ಪಾತ್ರ ಅಮೋಘವಾಗಿದೆ. ಇಷ್ಟೇಲ್ಲ ಕಷ್ಟ, ಕಾರ್ಪಣ್ಯ ಸಹಿಸಿಕೊಂಡು ತ್ಯಾಗಮಯ ಜೀವನ ನಡೆಸುತ್ತಿದ್ದರೂ ಈ ಸಮಾಜ ಹೆಣ್ಣು ಮಗು ಹುಟ್ಟಿದರೆ ಬೇಡ ಎನ್ನುವ ಮನಸ್ಥಿತಿ ಬದಲಾಗಬೇಕು. ಕೇವಲ ಗಂಡು ಅಷ್ಟೇ ಮುಖ್ಯವಲ್ಲ. ಮನೆಯನ್ನು ದೀಪದಂತೆ ಬೆಳಗುವ ಹೆಣ್ಣು ಮೊದಲು ಇರಲಿ ಎನ್ನುವ ಮನೋಭಾವ ನಮ್ಮೆಲ್ಲರಲ್ಲಿ ಬರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಂಚಸಾಲಿ ಸಮಾಜದ ತಾಲೂಕಾಧ್ಯಕ್ಷೆ ಗೀತಾ ನಿಂಗೋಜಿ, ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಶೈಕ್ಷಣಿಕ ಸಾಧನೆ ಮಾಡಬೇಕೆಂದು ಕರೆ ನೀಡಿದರು.

ಇನ್ನರ್‌ ವೀಲ್‌ ಕ್ಲಬ್ ತಾಲೂಕಾಧ್ಯಕ್ಷೆ ಶಕುಂತಲಾಮ್ಮ ಮಾಲಿಪಾಟೀಲ ಮಾತನಾಡಿದರು. ಈ ವೇಳೆ ರಾಜ್ಯ ಮಹಿಳಾ ಪಂಚಮಸಾಲಿ ಉಪಾಧ್ಯಕ್ಷೆ ಶಾಂತಾ ತೊಂಡಿಹಾಳ, ಕಾರ್ಯದರ್ಶಿ ರಾಜೇಶ್ವರಿ ಬನ್ನಪ್ಪಗೌಡ್ರ, ಇನ್ನರ್‌ ವೀಲ್‌ ಕ್ಲಬ್ ಕಾರ್ಯದರ್ಶಿ ಚನ್ನಮ್ಮ ಪಾಟೀಲ, ನೀಲಮ್ಮ ಹುಬ್ಬಳ್ಳಿ, ಶೋಭಾ ಬೇಲೇರಿ, ಮಂಜುಳಾ ಸುರೇಶಗೌಡ, ಜಯಶ್ರೀ ರಾಂಪುರ, ರೇಖಾ ಬೇಲೇರಿ, ಅನು ಅಣ್ಣಗೌಡ್ರ, ಲತಾ ಕಲ್ಯಾಣಿ, ಜ್ಯೋತಿ ಪಲ್ಲೇದ, ಭುವನೇಶ್ವರಿ ಅಧಿಕಾರಿ ಇದ್ದರು.