ಸಾರಾಂಶ
ಮುಂಡರಗಿ:
ಕನ್ನಡ ಭಾಷೆ, ಕಲೆ, ನೆಲ, ಜಲದ ಬಗ್ಗೆ ಹೆಮ್ಮೆ ಪಡುತ್ತಾ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಷ್ಕೃತ ಶಿಕ್ಷಕ ಡಾ. ನಿಂಗು ಸೊಲಗಿ ಹೇಳಿದರು.ತಾಲೂಕಿನ ಡೋಣಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮತ್ತು ವಿಶ್ವ ಪರಿಸರ ಹಾಗೂ ಕಪ್ಪತಗುಡ್ಡ ಪರಿಸರ ಸಂರಕ್ಷಣಾ ವೇದಿಕೆ, ಗ್ರಾಮ ಪಂಚಾಯಿತಿ ಡೋಣಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭುವನೇಶ್ವರಿ ವೃತ್ತ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವದ ಈ ದಿನ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಮನತುಂಬಿ ಆಚರಿಸುವುದರೊಂದಿಗೆ ಕನ್ನಡ ಉಳಿಸಿ, ಬಳಸಿ, ಬೆಳೆಸುವ ಕಾರ್ಯ ಮಾಡಬೇಕು. ಕರ್ನಾಟಕದ ಏಕೀಕರಣದ ರೂವಾರಿಗಳ ಆಶಯಗಳನ್ನು ಸಾಕಾರಗೊಳಿಸಬೇಕೆಂದರು.ವಿಶ್ರಾಂತ ಪ್ರಾಚಾರ್ಯ ಸಿ.ಎಸ್. ಅರಸನಾಳ, ಉಪನ್ಯಾಸಕ ರಮಾಕಾಂತ ದೊಡ್ಡಮನಿ ಮತ್ತು ವಕೀಲ ಬಿ.ಎಸ್. ಕೆರಿ ಮಾತನಾಡಿ, ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆ ಗೌರವಿಸುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಕರ್ನಾಟಕ ಅಸ್ತಿತ್ವಕ್ಕೆ ಬಂದು 70 ವರ್ಷ ಕಳೆದಿವೆ. ಇಂದು ರಾಜ್ಯದ ಸಾಧನೆಗಳ ಸಿಂಹಾವಲೋಕನ ಮಾಡಲು, ಮುಂದಿನ ಗುರಿಗಳನ್ನು ಸ್ಪಷ್ಟಪಡಿಸಲು ಶ್ರಮಿಸಬೇಕು ಎಂದರು.
ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು. ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮತ್ತು ನಿಂಗಪ್ಪ ಗುಡ್ಡದ ಹಾಡು ಹಾಡಿದರು. ಭಾಗ್ಯಾ ಹಳ್ಳಿಕೇರಿಮಠ ಸ್ವರಚಿತ ಕವನ ವಾಚಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಮಾರುತಿ ಜೊಗದಂಡಕರ, ಬಿ.ಎಸ್. ಜಾಧವ, ವಿ.ಎಂ. ಪಾಟೀಲ, ಲಕ್ಷ್ಮಣ ತಳವಾರ, ಮುತ್ತಣ್ಣ ಬಳ್ಳಾರಿ, ಜಗದೀಶ ಮೈನಳ್ಳಿ, ಕಾಶಣ್ಣ ಅಳವುಂಡಿ, ಪರಸಪ್ಪ ಬೆಳ್ಳಿ, ಬಸಪ್ಪ ಪುರದ, ಮಳ್ಳಪ್ಪ ಜೊಂಡಿ, ಸಿದ್ದನಗೌಡ ಪಾಟೀಲ, ಶಂಕರಗೌಡ ಜಾಯನಗೌಡ್ರ, ಗ್ರಾಪಂ ಸದಸ್ಯರು, ಗದಗ ಜಿಲ್ಲಾ ಕರವೇ ಕುಟುಂಬ ಉಪಸ್ಥಿತರಿದ್ದರು.
ಕರವೇ ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಜಿಲ್ಲಾ ಕರವೇ ಉಪಾಧ್ಯಕ್ಷ ಭರಮಪ್ಪ ಕಿಲಾರಿ ಮತ್ತು ವಿನಾಯಕ ಬೆಳ್ಳಿ ಸ್ವಾಗತಿಸಿ, ನಿರೂಪಿಸಿದರು. ಮುತ್ತಣ್ಣ ಬಳ್ಳಾರಿ ವಂದಿಸಿದರು.;Resize=(128,128))
;Resize=(128,128))