ಗುಂಪು ಹತ್ಯೆಯಲ್ಲಿ ತಪ್ಪು ಮಾಹಿತಿ ನೀಡಿದ ಠಾಣಾಧಿಕಾರಿ ಅಮಾನತಿಗೆ ಪತ್ರ: ಹರೀಶ್‌ ಕುಮಾರ್‌

| Published : May 01 2025, 12:47 AM IST

ಗುಂಪು ಹತ್ಯೆಯಲ್ಲಿ ತಪ್ಪು ಮಾಹಿತಿ ನೀಡಿದ ಠಾಣಾಧಿಕಾರಿ ಅಮಾನತಿಗೆ ಪತ್ರ: ಹರೀಶ್‌ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುಡುಪು ಸಮೀಪ ಕ್ರಿಕೆಟ್‌ ಆಟದ ವೇಳೆ ಗುಂಪು ಹತ್ಯೆ ನಡೆದಿರೋದು ಬಿಜೆಪಿ ಕಾರ್ಯಕರ್ತರಿಂದ. ಸ್ಥಳೀಯ ಬಿಜೆಪಿ ಕಾರ್ಯಕರ್ತ ಈ ಗುಂಪು ಹತ್ಯೆಯ ನೇತೃತ್ವ ವಹಿಸಿದ್ದ. ಮೈದಾನದಲ್ಲಿದ್ದ ಯುವಕರಿಗೆ ಪ್ರಚೋದನೆ ನೀಡಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಗೃಹ ಸಚಿವರಿಗೆ ಪತ್ರ ಕಾಂಗ್ರೆಸ್‌ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ

ಕನ್ನಡಪ್ರಭ ವಾರ್ತೆ ಮಂಗಳೂರು

ಮೃತಪಟ್ಟ ವ್ಯಕ್ತಿಯ ಮೈಪೂರ್ತಿ ಗಾಯಗಳಿದ್ದರೂ ಠಾಣಾ ಇನ್ಸ್‌ಪೆಕ್ಟರ್‌ ಗಾಯವಾಗಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಶವಾಗಾರಕ್ಕೆ ಸಾಗಿಸಿದ್ದರು. ಶವಾಗಾರಕ್ಕೆ ಹೋಗಿ ನೋಡಿದಾಗ ಇಡೀ ಮೈಯಲ್ಲಿ ಗಾಯಗಳಾಗಿರುವುದು ಗೊತ್ತಾಗಿದೆ. ತಪ್ಪು ಮಾಹಿತಿ ನೀಡಿದ ಅಧಿಕಾರಿಯನ್ನು ಸಸ್ಪೆಂಡ್‌ ಮಾಡಲು ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡುಪು ಸಮೀಪ ಕ್ರಿಕೆಟ್‌ ಆಟದ ವೇಳೆ ಗುಂಪು ಹತ್ಯೆ ನಡೆದಿರೋದು ಬಿಜೆಪಿ ಕಾರ್ಯಕರ್ತರಿಂದ. ಸ್ಥಳೀಯ ಬಿಜೆಪಿ ಕಾರ್ಯಕರ್ತ ಈ ಗುಂಪು ಹತ್ಯೆಯ ನೇತೃತ್ವ ವಹಿಸಿದ್ದ. ಮೈದಾನದಲ್ಲಿದ್ದ ಯುವಕರಿಗೆ ಪ್ರಚೋದನೆ ನೀಡಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದರು.

ಕ್ರಿಕೆಟ್‌ ಆಟದ ಸಂದರ್ಭ ಕೇರಳದ ಯುವಕ ಮೈದಾನಕ್ಕೆ ಬಂದಾಗ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಯುವಕರು ಬ್ಯಾಟ್‌, ಕಲ್ಲಿನಿಂದ ಹೊಡೆದು ಮರ್ಮಾಂಗಕ್ಕೆ ಗುದ್ದಿ, ಸ್ಮೃತಿ ತಪ್ಪಿ ಬಿದ್ದ ನಂತರ ದೇಹವನ್ನು ಪಕ್ಕಕ್ಕೆ ಹಾಕಿದ್ದರು. ಗಂಭೀರ ಗಾಯಗೊಂಡ ವ್ಯಕ್ತಿಗೆ ಸ್ವಲ್ಪ ಹೊತ್ತಿನ ಬಳಿಕ ಪ್ರಜ್ಞೆ ಬಂದಾಗ ಮತ್ತೆ ಹೊಡೆದಿದ್ದಾರೆ. ಇದು ಭಯೋತ್ಪಾದಕ ಕೃತ್ಯ ಅಲ್ವಾ ಎಂದು ಪ್ರಶ್ನಿಸಿದರು.

ಕ್ರಿಕೆಟ್‌ ಆಟವಾಡಲು ಹೋಗಿದ್ದ ಸ್ಥಳೀಯ ಯುವಕರಿಗೆ ಪ್ರಚೋದನೆ ನೀಡಿದ್ದರಿಂದಲೇ ಕೊಲೆ ಕೃತ್ಯ ನಡೆದಿದೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಶುಭೋದಯ ಆಳ್ವ, ಶಾಹುಲ್‌ ಹಮೀದ್‌, ಟಿಕೆ ಸುಧೀರ್‌, ಪ್ರಕಾಶ್‌ ಸಾಲ್ಯಾನ್‌, ವಿಶ್ವಾಸ್‌ದಾಸ್‌, ನವಾಝ್‌, ಸುಹೈಲ್‌ ಕಂದಕ್‌, ಲಾರೆನ್ಸ್‌ ಡಿಸೋಜ, ಹೊನ್ನಯ್ಯ ಮತ್ತಿತರರು ಇದ್ದರು.