ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ವಿದ್ಯಾರ್ಥಿಗಳ, ಜನರ ಜ್ಞಾನ ಹಸಿವು ನೀಗಿಸುವಲ್ಲಿ ಗ್ರಂಥಾಲಯಗಳು ಪೂರಕವಾಗಿವೆ ಎಂದು ಗ್ರಂಥಪಾಲಕಿ ಅಂಜನಾ ಮುಂಡಾಸ ಹೇಳಿದರು. ಪಟ್ಟಣದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನದ ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮಹಾನ್ ವ್ಯಕ್ತಿಗಳಲ್ಲಿ ಡಾ.ಎಸ್.ಆರ್.ರಂಗನಾಥನ್ ಅವರು ಒಬ್ಬರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ವಿದ್ಯಾರ್ಥಿಗಳ, ಜನರ ಜ್ಞಾನ ಹಸಿವು ನೀಗಿಸುವಲ್ಲಿ ಗ್ರಂಥಾಲಯಗಳು ಪೂರಕವಾಗಿವೆ ಎಂದು ಗ್ರಂಥಪಾಲಕಿ ಅಂಜನಾ ಮುಂಡಾಸ ಹೇಳಿದರು.

ಪಟ್ಟಣದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಞಾನದ ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮಹಾನ್ ವ್ಯಕ್ತಿಗಳಲ್ಲಿ ಡಾ.ಎಸ್.ಆರ್.ರಂಗನಾಥನ್ ಅವರು ಒಬ್ಬರು. ಅವರ ವಿಶೇಷ ಪ್ರಯತ್ನದಿಂದ ಗ್ರಂಥಾಲಯಗಳು ಮುನ್ನೆಲೆಗೆ ಬಂದವು. ಶಿಯಾಲಿ ರಾಮಾಮೃತ ರಂಗನಾಥನ ಅವರು ಆ.12, 1892 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಇವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಬಿ.ಎ., ಎಂ.ಎ ಪದವಿಯನ್ನು ಪಡೆದರು. 1923ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯವು ಸಂಘಟಿತಗೊಂಡಿದ್ದ ಪುಸ್ತಕಗಳ ಮೇಲ್ವಿಚಾರಣೆ ಮಾಡಲು ವಿಶ್ವವಿದ್ಯಾಲಯದಲ್ಲಿ ಗ್ರಂಥ ಪಾಲಕ ಎಂಬ ಹುದ್ದೆಯನ್ನು ಸೃಷ್ಟಿಸಿ ಇವರನ್ನು ನೇಮಕ ಮಾಡಿತು. ಅಲ್ಲಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಗ್ರಂಥಾಲಯಕ್ಕೆ ಜೀವ ತುಂಬಿದರು. ಈ ಪ್ರಯತ್ನದ ಫಲವಾಗಿ ದೇಶಾದ್ಯಂತ ಗ್ರಂಥಾಲಯಗಳು ವಿದ್ಯಾರ್ಥಿಗಳಾದಿಯಾಗಿ ವೃದ್ಧರವರೆಗೆ ಜ್ಞಾನದ ಹಸಿವು ನೀಗಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಭಿಪ್ರಾಯ ಪಟ್ಟರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವಿ.ಸೂರ್ಯವಂಶಿ ಮಾತನಾಡಿ, ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯಬೇಕು, ಗ್ರಂಥಾಲಯಗಳು ವಿದ್ಯಾರ್ಥಿಗಳನ್ನು ದಡ ಮುಟ್ಟಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತವೆ. ವಿದ್ಯಾರ್ಥಿಗಳಿಗೆ ನಿಜವಾದ ಸ್ನೇಹಿತವೆಂದರೆ ಗ್ರಂಥಾಲಯ ಎಂದರು.ಈ ಕಾರ್ಯಕ್ರಮದಲ್ಲಿ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಸಿ.ಸಿಂಪಿ, ಕಚೇರಿ ಮುಖ್ಯಸ್ಥ ಎಸ್.ಜಿ.ಪಾಟೀಲ, ಡಾ.ಬಿ.ಎಂ.ಸಾಲವಾಡಗಿ, ಡಾ.ವೈ.ಬಿ.ನಾಯಕ, ಎಸ್.ಕೆ.ಚಿಕ್ಕನರ್ತಿ, ಮಹಾಂತೇಶ ಕವಟೆಕರ, ಚೇತನ ತೇಲಿ, ಸುರೇಶ ಗುಣಕಿ, ರೇಣುಕಾ ಹೆರಾನವರ ಇದ್ದರು.