ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ ಪ್ರತಿ ತಿಂಗಳಿಗೂ ಒಂದೇ ಬಾರಿಗೆ ಸರ್ಕಾರದಿಂದ ಪೂರ್ಣ ಪ್ರಮಾಣದ ವೇತನ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಬೇಕು ಎಂದು ಹಳಿಯಾಳ ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಹಳಿಯಾಳ ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘ ಮನವಿಕನ್ನಡಪ್ರಭ ವಾರ್ತೆ ಹಳಿಯಾಳ
ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ ಪ್ರತಿ ತಿಂಗಳಿಗೂ ಒಂದೇ ಬಾರಿಗೆ ಸರ್ಕಾರದಿಂದ ಪೂರ್ಣ ಪ್ರಮಾಣದ ವೇತನ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಬೇಕು ಎಂದು ಹಳಿಯಾಳ ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.ತಾಲೂಕು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ನಿಯೋಗ ತಾಲೂಕಾಡಳಿತ ಸೌಧಕ್ಕೆ ತೆರಳಿ ಶಾಸಕ ಆರ್.ವಿ. ದೇಶಪಾಂಡೆ ಮೂಲಕ ಸರ್ಕಾರಕ್ಕೆ ಮನವಿ ನೀಡಿತು.
ವೇತನದ ಸಮಸ್ಯೆ ಇಡೀ ರಾಜ್ಯದ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರದ್ದಾಗಿದೆ. ಎರಡು ವರ್ಷಗಳ ಹಿಂದೆಯೇ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿಯಾಗಿದ್ದರೂ ಅದರಲ್ಲಿ ₹12 ಸಾವಿರ ಮಾತ್ರ ಬಿಡುಗಡೆ ಆಗುತ್ತಿದ್ದು, ಉಳಿದ ಮೊತ್ತ ಗ್ರಾಪಂನ ಉಪ-ಕರ ಖಾತೆಯಿಂದ ಜಿಪಂ ಖಾತೆಗೆ ಜಮಾ ಆಗಿ ಅಲ್ಲಿಂದ ನಮಗೆ ವೇತನ ಬಿಡುಗಡೆಯಾಗಲು ಬಾರಿ ವಿಳಂಬವಾಗುತ್ತಿದೆ. ಇದರಿಂದ ಕಾಲಕಾಲಕ್ಕೆ ಪೂರ್ಣ ಪ್ರಮಾಣದ ಕನಿಷ್ಠ ವೇತನ ಕೈ ಸೇರುತ್ತಿಲ್ಲ. ಜಿಪಂ ಖಾತೆಯಿಂದಲೇ ನೇರವಾಗಿ ಗ್ರಂಥಾಲಯ ಮೇಲ್ವಿಚಾರಕರ ಖಾತೆಗೆ ವೇತನ ಜಮಾ ಮಾಡಿಸುವಂತೆ ಆದೇಶ ಮಾಡಬೇಕು ಅಥವಾ ರಾಜ್ಯ ಸರ್ಕಾರವೇ ಪ್ರತಿ ತಿಂಗಳಿಗೂ ಕನಿಷ್ಠ ವೇತನವಾದರೂ ಪೂರ್ಣ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಮೇಲ್ವಿಚಾರಕರ ಸಂಘದ ಅಧ್ಯಕ್ಷ, ಕಾವಲವಾಡಿಕ ಚನ್ನಪ್ಪ ಉಗ್ಗಿನಕೇರಿ, ಕಾರ್ಯದರ್ಶಿ ಸುನೀಲ ವಾಲೇಕರ, ಪ್ರಮುಖರಾದ ಸಹದೇವ ಪಾಳೇಕರ, ಬೆಳವಟಗಿಯ ಷಣ್ಮುಕ ಭಡಂಗಿ, ನಾಗಶೆಟ್ಟಿಕೊಪ್ಪಿನ ಮಾರುತಿ ಹೆಳವರ, ಚಿಬ್ಬಲಗೇರಿಯ ಅಶೋಕ ಶಿಂದೆ, ಮಲವಡಿಯ ಮಾರುತಿ ಮಲವಡಕರ, ತೇರಗಾಂವಿನ ರಮೇಶ ಘಟಕಾಂಬಳೆ, ಅರ್ಲವಾಡದ ವಿಠ್ಠಲ ಮರಾಠೆ, ಭಾಗವತಿಯ ಬಸವರಾಜ ಪೂಜಾರಿ, ಯಡೋಗಾದ ಗುಲಾಬಿ ಪೆಟ್ನೇಕರ, ಮುರ್ಕವಾಡಿನ ಜ್ಯೋತಿ ಗೌಡ, ಜನಗಾದ ಗೋವಿಂದ ಕದಂ,, ಕೆಸರೊಳ್ಳಯ ರಜೀನಾ, ಮದ್ನಳ್ಳಿಯ ರುದ್ರೇಶ ಬಡಿಗೇರ, ಸಾಂಬ್ರಾಣಿಯ ಪುರುಷೋತ್ತಮ ಮಿರಾಶಿ ಇದ್ದರು.