ನಾನು ಕೂಡ ಎಲ್‌ಐಸಿ ಪಾಲಿಸಿದಾರನಾಗಿದ್ದೇನೆ, ಸರ್ಕಾರಕ್ಕೆ ಎಲ್‌ಐಸಿ ಹಣವು ಕೂಡ ಬಂಡವಾಳವಾಗಿದೆ. ನಮ್ಮ ಯೋಗಕ್ಷೇಮಕ್ಕಾಗಿ ಎಲ್‌ಐಸಿ ಮಾಡಿಸುತ್ತೀರಿ. ನಿಮ್ಮ ಯೋಗಕ್ಷೇಮವೂ ಮುಖ್ಯ. ಅದಕ್ಕಾಗಿ ಆರೋಗ್ಯ ತಪಾಸಣೆ ಮಾಡುತ್ತಿರುವುದು ಉತ್ತಮ.
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತ ಜೀವ ವಿಮಾ ಕ್ಷೇತ್ರದಲ್ಲಿ ಎಲ್‌ಐಸಿ ಪ್ರಥಮ ಸ್ಥಾನದಲ್ಲಿದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಹೇಳಿದರು.ನಗರದಲ್ಲಿರುವ ಎಲ್‌ಐಸಿ ಕಚೇರಿಯಲ್ಲಿ ಅಖಿಲ ಭಾರತೀಯ ಜೀವವಿಮಾ ಪ್ರತಿನಿಧಿಗಳ ಒಕ್ಕೂಟ, ಭಾರತೀಯ ಜೀವವಿಮಾ ನಿಗಮ ಜಿಲ್ಲಾ ಶಾಖೆ, ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲಾ ಶಾಖೆ, ಸ್ಪಂದನ ಆಸ್ಪತ್ರೆ ಇವರ ಸಹಯೋಗದಲ್ಲಿ ಎಲ್‌ಐಸಿ ವಿಮಾ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು ಕೂಡ ಎಲ್‌ಐಸಿ ಪಾಲಿಸಿದಾರನಾಗಿದ್ದೇನೆ, ಸರ್ಕಾರಕ್ಕೆ ಎಲ್‌ಐಸಿ ಹಣವು ಕೂಡ ಬಂಡವಾಳವಾಗಿದೆ. ನಮ್ಮ ಯೋಗಕ್ಷೇಮಕ್ಕಾಗಿ ಎಲ್‌ಐಸಿ ಮಾಡಿಸುತ್ತೀರಿ. ನಿಮ್ಮ ಯೋಗಕ್ಷೇಮವೂ ಮುಖ್ಯ. ಅದಕ್ಕಾಗಿ ಆರೋಗ್ಯ ತಪಾಸಣೆ ಮಾಡುತ್ತಿರುವುದು ಉತ್ತಮ ಎಂದು ನುಡಿದರು.ಎಲ್‌ಐಸಿ ಆರಂಭಗೊಂಡು ೭೦ ವರ್ಷ ಪೂರೈಸಿದೆ, ಎಲ್‌ಐಸಿ ಪ್ರತಿನಿಧಿಗಳ ಶ್ರಮ ಅಪಾರವಾಗಿದೆ, ಇದು ಹೀಗೆ ಮುಂದುವರೆಯಲಿ. ಶ್ರೀಸಾಮಾನ್ಯರ ಜೀವರಕ್ಷಣೆಗೆ ಜೀವವಿಮಾ ಅತ್ಯವಶ್ಯಕ ಎಂದರು.
ಸ್ಪಂದನ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಐ.ಸಿ.ಆದಿತ್ಯಗೌಡ, ಇಂದಿನ ಜನತೆ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ, ಬದಲಾದ ಜೀವನ ಶೈಲಿಯಿಂದ ಸಾಕಷ್ಟು ರೋಗಗಳು ನಿಧಾನವಾಗಿ ಮನುಷ್ಯರನ್ನು ಕೊಲ್ಲುತ್ತಿವೆ, ಕಣ್ಣಿಗೆ ಕಾಣುವ ಮತ್ತು ಕಾಣಸಿಗದ ರೋಗಗಳು ಬರುತ್ತಿವೆ ಎಂದು ಎಚ್ಚರಿಸಿದರು.ಬಿಪಿ, ಶುಗರ್, ಜ್ವರ, ತಲೆನೋವು, ಮಂಡಿನೋವು ಸುಳಿವು ನೀಡುತ್ತವೆ, ಆದರೆ ಕ್ಯಾನ್ಸರ್, ಹೃದಯಘಾತದಂತಹ ಅನಿರೀಕ್ಷಿತ ಅವಘಡಗಳಿಗೆ ತಪಾಸಣೆಯಿಂದಲೇ ಚಿಕಿತ್ಸೆ ಕೊಡಬೇಕಿದೆ, ಒಬ್ಬೊಬ್ಬರ ಆರೋಗ್ಯ, ಅನಾರೋಗ್ಯ ಬೇರೆ ಬೇರೆಯಾಗಿರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್, ಎಲ್‌ಐಸಿ ಹಿರಿಯ ಶಾಖಾಧಿಕಾರಿ ಎಸ್.ನಾಗೇಂದ್ರಪ್ರಸಾದ್, ಲಿಯಾಫಿ ಅಧ್ಯಕ್ಷ ಜಿ.ಡಿ.ಶರಶ್ಚಂದ್ರಬಾಬು, ಸಾಹಿತಿ ಎಚ್.ಆರ್.ಕನ್ನಿಕಾ, ಪ್ರತಿನಿಧಿ ಲಂಕೇಶ್ ಮಂಗಲ, ಗೌರೀಶ್, ಶಾಖಾಧಿಕಾರಿ ಶ್ರೀನಿವಾಸಚಾರಿ, ಉಪ ಶಾಖಾಧಿಕಾರಿ ರಾಘವೇಂದ್ರ ಮತ್ತಿತರರಿದ್ದರು.ಅಮೆರಿಕದ ನ್ಯೂಜೆರ್ಸಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲ ನಿರ್ಮಾಣಮಂಡ್ಯ: ಅಮೆರಿಕದ ನ್ಯೂಜೆರ್ಸಿಯಲ್ಲಿ ಶ್ರೀಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನದಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ಕಾಮಗಾರಿ ಸ್ಥಳಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಅಂದಾಜು ₹೮೦ ಕೋಟಿ ವೆಚ್ಚದಲ್ಲಿ ಅತ್ಯಂತ ವೈಭವಯುತವಾಗಿ ಈ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಹಾಗೂ ವಕೀಲ ಮಾಣಿಕ್ಯನಹಳ್ಳಿ ಪುಟ್ಟೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.ಕಾಮಗಾರಿ ಸ್ಥಳ ವೀಕ್ಷಿಸಿದ ಗಣ್ಯರು, ಚುಂಚಶ್ರೀಗಳ ಆಶೀರ್ವಾದ ಪಡೆದುಕೊಂಡರಲ್ಲದೆ, ದೇವಸ್ಥಾನದ ವಿನ್ಯಾಸ, ನಿರ್ಮಾಣ ಶೈಲಿ ಹಾಗೂ ಯೋಜನೆಯ ಕಾರ್ಯಪ್ರಗತಿಯ ಕುರಿತು ಸಮಗ್ರ ಮಾಹಿತಿ ಪಡೆದರು.