ಸಾರಾಂಶ
ಹೋಟೆಲ್‌ವೊಂದರಲ್ಲಿ ನಡೆದ ಗಲಾಟೆಯಲ್ಲಿ ವ್ಯಕ್ತಿ ಹತ್ಯೆ ಮಾಡಿದ ಇಬ್ಬರು ಅಪರಾಧಿಗಳಿಗೆ ಬೆಳಗಾವಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ ₹50 ಸಾವಿರ ದಂಡ ವಿಧಿಸಿದೆ.
ಬೆಳಗಾವಿ: ಹೋಟೆಲ್‌ವೊಂದರಲ್ಲಿ ನಡೆದ ಗಲಾಟೆಯಲ್ಲಿ ವ್ಯಕ್ತಿ ಹತ್ಯೆ ಮಾಡಿದ ಇಬ್ಬರು ಅಪರಾಧಿಗಳಿಗೆ ಬೆಳಗಾವಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ ₹50 ಸಾವಿರ ದಂಡ ವಿಧಿಸಿದೆ. ಶಿವಾಜಿ ನಗರದ ನವೀನ ಶೆಟ್ಟಿ ಹಾಗೂ ಹಿಡಕಲ್ ಡ್ಯಾಮ್‌ನ ಶಶಿಕುಮಾರ ಉದ್ದಪ್ಪಗೋಳ ಶಿಕ್ಷೆಗೆ ಒಳಗಾದವರು. ಇವರ ಸ್ನೇಹಿತ ವಿನಾಯಕ ಕೊಲೆಯಾದವನು.ನಗರದ ಲಾಡ್ಜ್ ಒಂದರಲ್ಲಿ ಇವರು ಪಾರ್ಟಿ ಮಾಡಿದ್ದರು. ಕುಡಿದ ಮತ್ತಿನಲ್ಲಿ ಡಿ.ಜೆ ಸೌಂಡ್‌ನ್ನು ಜೋರಾಗಿ ಹಾಕಿಕೊಂಡು ಕುಣಿಯುತ್ತಿದ್ದರು. ಶಬ್ದ ಕಡಿಮೆ ಮಾಡು ಎಂದಿದ್ದಕ್ಕೆ ಜಗಳ ಆರಂಭವಾಗಿ, ವಿನಾಯಕನ ಕೊಲೆ ಮಾಡಲಾಗಿತ್ತು. ಬೆಳಗಾವಿ ಮಾರ್ಕೆಟ್ ಪೊಲೀಸರು ಪ್ರಕರಣದ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಗಂಗಾಧರ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಭಾರತಿ ಹೊಸಮನಿ ವಾದ ಮಂಡಿಸಿದ್ದರು.