ಸಾರಾಂಶ
ಸಸಿಗಳನ್ನು ಬೆಳಸಿದಷ್ಟು ನಾಡಿನ ಬದುಕು ಸುಂದರವಾಗಿರುತ್ತದೆ. ಪ್ರಕೃತಿ ಮಾತೆಯ ಮಡಿಲಲ್ಲಿರುವ ನಾವು ಗಿಡಗಳನ್ನು ನೆಟ್ಟು,ಅದನ್ನು ಪೋಷಿಸಬೇಕೆಂದು ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಸಂಯುಕ್ತ ಮಹಾಮಂತ್ರಿಗಳಾದ ಸ್ಥಾನುಮಲಯನ್‌ಜೀ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಸಸಿಗಳನ್ನು ಬೆಳಸಿದಷ್ಟು ನಾಡಿನ ಬದುಕು ಸುಂದರವಾಗಿರುತ್ತದೆ. ಪ್ರಕೃತಿ ಮಾತೆಯ ಮಡಿಲಲ್ಲಿರುವ ನಾವು ಗಿಡಗಳನ್ನು ನೆಟ್ಟು,ಅದನ್ನು ಪೋಷಿಸಬೇಕೆಂದು ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಸಂಯುಕ್ತ ಮಹಾಮಂತ್ರಿಗಳಾದ ಸ್ಥಾನುಮಲಯನ್‌ಜೀ ಹೇಳಿದರು.ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ಹಮ್ಮಿಕೊಂಡ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ 3 ದಿನಗಳ ಕಾಲ ನಡೆದ ಬೈಠಕ್ ಸಮಾರಂಭದ ಅಂಗವಾಗಿ ಬೀರೇಶ್ವರ ಭವನದಲ್ಲಿ ವೃಕ್ಷಾರೋಹಣ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬರೂ ಗಿಡಮರ ಬೆಳೆಸುವ ಜವಾಬ್ದಾರಿ ಹೊಂದಿ, ಭೂಮಿಯನ್ನು ತಂಪಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಬೈಠಕ್‌ನಲ್ಲಿ 18 ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದು, ಸ್ಥಾನುಮಲಯನ್‌ಜೀ ಭಾಗವಹಿಸಿ ಮಾರ್ಗದರ್ಶನ ಮಾಡಿದರು.ವಿಶ್ವ ಹಿಂದು ಪರಿಷತ್‌ನ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಗೋವರ್ಧನರಾವ, ಕ್ಷೇತ್ರೀಯ ಸತ್ಸಂಗ ಪ್ರಮುಖರಾದ ಮಹಾಬಳೇಶ್ವರ, ಕರ್ನಾಟಕ ಉತ್ತರ ಪ್ರಾಂತ, ವಿ.ಹಿಂ.ಪ ಕಾರ್ಯದರ್ಶಿಗಳು ಶಿವಕುಮಾರ ಬೊಳಶೆಟ್ಟಿಜಿ, ಕ್ಷೇತ್ರೀಯ ಮಠಮಂದಿರ ಅರ್ಚಕ ಪುರೋಹಿತ ಪ್ರಮುಖರಾದ ಬಸವರಾಜಿ ಹಾಗೂ ರಾಚಪ್ಪ ಬಾಗಿ, ಕರ್ನಾಟಕ ಉತ್ತರ ಪ್ರಾಂತ ಗೋರಕ್ಷಾ ಪ್ರಮುಖರಾದ ವಿಠ್ಠಲ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವೆ ಮತ್ತು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.