ಶಿಕ್ಷಣದ ಜತೆ ಸಂಸ್ಕಾರ ಕಲಿಸಿದರೆ ಬದುಕು ಉಜ್ವಲ

| Published : Jan 08 2025, 12:17 AM IST

ಸಾರಾಂಶ

ಆಧುನಿಕ ಯುಗದಲ್ಲಿ ಆಧುನಿಕ ಪಿಡುಗುಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ, ಮಾದಕ ವಸ್ತುಗಳ ಚಟದ ಜತೆಗೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಮಕ್ಕಳ ಜೀವನಕ್ಕೆ ಮುಳುವಾಗಿದ್ದು, ಮುಂದೊಂದು ದಿನ ಮೊಬೈಲ್‌ನಿಂದಾಗುವ ಅನಾಹುತ ತಪ್ಪಿಸಲು ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕಾದ ಅನಿವಾರ್ಯತೆ ಎದುರಾದೀತು.

ಕನ್ನಡಪ್ರಭ ವಾರ್ತೆ ಕೋಲಾರಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿದರೆ ಮಾತ್ರ ಅವರ ಬದುಕು ಉಜ್ವಲವಾಗುತ್ತದೆ, ಧ್ಯಾನದಿಂದ ಏಕಾಗ್ರತೆ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಅಭಿಪ್ರಾಯಪಟ್ಟರು.ತಾಲೂಕಿನ ಹೋಳೂರಿನ ಶ್ರೀ ಶೈಲೇಂದ್ರ ವಿದ್ಯಾಮಂದಿರದ ೪೪ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.ಪುನರ್ವಸತಿ ಕಲ್ಪಿಸಬೇಕಾದೀತು

ಆಧುನಿಕ ಯುಗದಲ್ಲಿ ಆಧುನಿಕ ಪಿಡುಗುಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ, ಮಾದಕ ವಸ್ತುಗಳ ಚಟದ ಜತೆಗೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಮಕ್ಕಳ ಜೀವನಕ್ಕೆ ಮುಳುವಾಗಿದ್ದು, ಮುಂದೊಂದು ದಿನ ಮೊಬೈಲ್‌ನಿಂದಾಗುವ ಅನಾಹುತ ತಪ್ಪಿಸಲು ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕಾದ ಅನಿವಾರ್ಯತೆ ಎದುರಾದೀತು ಎಂದು ಎಚ್ಚರಿಸಿದರು.ಜೀವನದಲ್ಲಿ ಧ್ಯಾನ, ಧರ್ಮ, ಸಹನೆ, ಸಮಯಪ್ರಜ್ಞೆ, ದಾನಗುಣ, ಆತ್ಮಸಾಕ್ಷಿ ಅತಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಇವನ್ನು ರೂಢಿಸಿಕೊಳ್ಳಿ, ಈ ಭಾಗದ ಸಾವಿರಾರು ಮಂದಿಗೆ ೪೪ ವರ್ಷಗಳಿಂದ ಅಕ್ಷರ ಜ್ಞಾನ ಪಡೆದಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಳಾದ ಅರವಿಂದ್, ಪ್ರೆಸಿಡೆನ್ಸಿ ವಿವಿಯ ಡೀನ್ ಡಾ.ಜಿ.ಎಂ.ಮಮತಾರಂತಹ ಅನೇಕ ಸಾಧಕರು ಇಲ್ಲೇ ಓದಿದ್ದು, ಅವರೇ ಮಕ್ಕಳಿಗೆ ಆದರ್ಶವಾಗಲಿ ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಣದ ಹಕ್ಕು, ಬಾಲಕಾರ್ಮಿಕತೆ, ಬಾಲ್ಯವಿವಾಹ ನಿಷೇಧ, ಸಂಚಾರಿನಿಯಮಗಳ ಕುರಿತು ಕಾನೂನು ಮಾಹಿತಿ ನೀಡಿದ ನ್ಯಾಯಾಧೀಶರು, ಮಾದಕ ವ್ಯಸನಗಳಿಗೆ ತುತ್ತಾಗದಿರಿ ಎಂದು ಕಿವಿಮಾತು ಹೇಳಿದರು.ಸಮಾಜದ ಸ್ವಾಸ್ಥ್ಯ ಉಳಿಸಿ

ಪತ್ರಕರ್ತ ಬಿ.ವಿ.ಗೋಪಿನಾಥ್ ಸಾಧಕ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸಮಾಜದ ಸ್ವಾಸ್ಥ್ಯ ಉಳಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯವಾಗಿದೆ, ನೈತಿಕ ಅಧಃಪತನದ ಇಂತಹ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಿಸುವ ಕಾರ್ಯವೂ ಶಿಕ್ಷಣ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದರು.ಸಾಧಕ ಮಕ್ಕಳಿಗೆ ಸನ್ಮಾನ

ಪ್ರೆಸಿಡೆನ್ಸಿ ಕಾಲೇಜಿನ ಡೀನ್ ಆಗಿರುವ ಡಾ.ಜಿ.ಎಂ.ಮಮತಾ, ಶಾಲೆಯಲ್ಲೇ ಸಾಧನೆ ಮಾಡಿ ವೈದ್ಯಕೀಯ ಪದವಿ ಮಾಡುತ್ತಿರುವ ಸಾಧಕ ವಿದ್ಯಾರ್ಥಿಗಳಾದ ಭುವನ್, ಸುಮಂತ್‌ರನ್ನು ಸನ್ಮಾನಿಸಿ ಮಾತನಾಡಿ, ನನ್ನ ಇಂದಿನ ಸಾಧನೆಗೆ ಶೈಲೇಂದ್ರ ವಿದ್ಯಾಮಂದಿರವೇ ಬುನಾದಿ ಎಂದು ತಿಳಿಸಿ, ಹಳ್ಳಿಗಾಡಿನಲ್ಲಿ ೪೪ ವರ್ಷಗಳ ಹಿಂದೆ ಇಂಗ್ಲೀಷ್ ಶಾಲೆ ತೆರದು ಶಿಕ್ಷಣ ನೀಡಿದ ರಂಗರಾಜಪ್ಪ ಅವರಿಗೆ ಧನ್ಯವಾದ ತಿಳಿಸಿ, ಈ ಶಾಲೆ ಸಮಾಜಕ್ಕೆ ಅನೇಕ ವೈದ್ಯರು, ವಕೀಲರು, ನ್ಯಾಯಧೀಶರು, ಶಿಕ್ಷಕರನ್ನು ನೀಡಿದೆ ಎಂದರು.ಸಾಂಸ್ಕೃತಿಕ ಕಾರ್ಯಕ್ರಮ

ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ನಿರ್ಮಿಸಲಾದ ಅತ್ಯದ್ವುತ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ಸುಮಾರು ೩ ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಮುಖ್ಯಶಿಕ್ಷಕ ಸೋಮಶೇಖರ್ ವಾರ್ಷಿಕ ವರದಿ ವಾಚಿಸಿ, ಶಾಲೆ ಕಳೆದ ೧೦ ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ.೧೦೦ ಸಾಧನೆ ಮಾಡಿದೆ ಎಂದು ತಿಳಿಸಿದರು.

ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಹೆಚ್.ಎಂ.ಬಸವರಾಜಪ್ಪ,ನಿರ್ದೇಶಕರಾದ ಡಾ.ಶಿವರಾಮಕೃಷ್ಣ, ನೇತ್ರ ತಜ್ಞರೂ ಆದ ಡಾ.ಹೆಚ್.ಆರ್.ಮಂಜುನಾಥ್, ನಿರ್ದೇಶಕರಾದ ಚಂದ್ರಬಾಬು, ವಿನಯ್ ಮತ್ತಿತರರು ಉಪಸ್ಥಿತರಿದ್ದು, ಶಿಕ್ಷಕಿ ಸುಜಾತಾ ಸ್ವಾಗತಿಸಿ, ವಿದ್ಯಾರ್ಥಿನಿಯಾದ ಕುಸುಮ,ಸ್ನೇಹ ನಿರೂಪಿಸಿ, ನಿತ್ಯಶ್ರೀ ಪ್ರಾರ್ಥಿಸಿದರು.