ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರವು ಪ್ರೀತಿ, ವಿಶ್ವಾಸ, ನಂಬಿಕೆ ವಾತ್ಸಾಲ್ಯ ಭೂಮಿಯಾಗಿದೆ. ಬಸವಣ್ಣನವರು, ಸಿದ್ದೇಶ್ವರ ಶ್ರೀಗಳು ಜನಿಸಿದ ನಾಡಲ್ಲಿ ಸೇವೆ ಸಲ್ಲಿಸಿದ್ದು ನನ್ನ ಪುಣ್ಯ ಎಂದು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವಾಜಿ ಅನಂತ ನಲವೆಡೆ ತಿಳಿಸಿದರು.ನಗರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲ್ಲಿಯ ಜನರ ನಡೆ-ನುಡಿ ಗಮನಿಸಿದ್ದೇನೆ. ಇಲ್ಲಿಯ ವಕೀಲರ ವೈಖರಿ ಶಿಸ್ತುಬದ್ಧವಾಗಿದೆ ಎಂದು ತಿಳಿಸಿದ ಅವರು, ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ತಮ್ಮ ಅನುಭವ ಹಂಚಿಕೊಂಡರು. ಸತ್ಯ ಮತ್ತು ನ್ಯಾಯ ದಾರಿಯಲ್ಲಿ ಸಾಗಿ ಬಂದವರ ಜೀವನ ಬಂಗಾರವಾಗುತ್ತದೆ ಎಂದರು. ಎಲ್ಲರೂ ಸಹಕಾರ ನೀಡಿದ್ದರಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದರು.
ಪ್ರಭಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಾ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿವೃತ್ತಿಯಾಗಿರುವ ನಲವೆಡೆ ಅವರ ಅಧ್ಯಕ್ಷತೆಯಲ್ಲಿ ಸಾಗಿಬಂದ ಡಿಎಲ್‌ಎಸ್‌ನ ಉತ್ತಮ ಕಾರ್ಯಚಟುವಟಿಕೆಗಳನ್ನು ಪ್ರಶಂಸಿದರು.ಮುಖ್ಯ ಅತಿಥಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುಭಾಷ ಸಂಕದ ಮಾತನಾಡಿದರು. ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ಶಿವನಡೆ ನಿವೃತ್ತಿಕಡೆ ಶೀರ್ಷಿಕೆಯ ಕವಿತೆಯ ಮೂಲಕ ನಲವಡೆಯವರಿಗೆ ನಿವೃತ್ತಿ ಜೀವನಕ್ಕೆ ಶುಭ ಕೋರಿ, ನಲವೆಡೆ ಅವರು ನ್ಯಾಯದಾನದಲ್ಲಿ ಅತ್ಯಂತ ತಾಳ್ಮೆಯಿಂದ ನಿಭಾಯಿಸಿದ ಅವರ ಸೇವೆ ಜಿಲ್ಲೆಗೆ ಸಿಕ್ಕಿರುವುದು ಸಂತೋಷಕರ ಸಂಗತಿ ಎಂದರು.
ಹಿರಿಯ ವಕೀಲರಾದ ಪ್ರಕಾಶ ಉಡುಪಿಕರ, ಆರ್.ಎಸ್.ನಂದಿ, ಮಂಜುಳಾ ಅರಕೇರಿ, ಉಸ್ಮಾನ ಆಲಗೂರ, ಜಿಲ್ಲಾ ನ್ಯಾಯಾಧೀಶ ಸತೀಶ ಎಲ್.ಪಿ, ಎಂ.ಬಿ.ಪಾಟೀಲ್, ಸಿಂಧೂ ಪೋತದಾರ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅಂಬಲಿ, ಲೋಕೇಶ, ರಮೇಶ ಮಹಾಜನ, ಮಹೇಶ ಚಂದ್ರಕಾಂತ, ಸಮೀರ ಕೊಳ್ಳಿ, ಸಿವಿಲ್ ನ್ಯಾಯಾಧೀಶರಾದ ಪರಿಮಳ ಟುಬಕಿ, ವಿಶ್ವನಾಥ ಯಮಕನಮರಡಿ, ಸ್ಮಿತಾ, ಚಂದ್ರಕಾಂತ, ಸುನೀಲಕುಮಾರ ರಾಜೀವ ಬಿದರಿ, ಡಿ.ಬಿ.ಮಠದ, ಮಲ್ಲಿಕಾರ್ಜುನ ಲೋಗಾವಿ, ಬಸವರಾಜ ಮಠ, ಅಶೋಕ ಜೈನಾಪುರ, ರಾಜೇಶ ಯಳಸಂಗಿಮಠ, ರಾಜೇಶ್ವರಿ ಪಾಟೀಲ್, ದೀಪಾ, ಜಾವೀದ ಗುಡಗುಂಟಿ, ವಿ.ಜೆ ಖುದಾನಪುರ, ಬಿ.ಕೆ ಮಠ, ಜಯಶ್ರೀಮಠಪತಿ, ದೇಸಾಯಿ, ಉಮೇಶ ರಾಠೋಡ, ಒಡೆಯರ, ಬಡಿಗೇರ ಉಪಸ್ಥಿತರಿದ್ದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಹಾಗರಗಿ ಪ್ರಾಸ್ತವಾವಿಕವಾಗಿ ಮಾತನಾಡಿದರು. ಮಂಜುಳಾ ನಿರೂಪಿಸಿ, ಉಸ್ಮಾನ ಆಲಗೂರ ವಂದಿಸಿದರು.