ಸಾರಾಂಶ
ಗುರುವಿಲ್ಲದೇ ಯಾವುದೇ ವಿದ್ಯೆ ಇಲ್ಲ. ಗುರುವಿನ ಮಾತೃರೂಪದ ಆಶೀರ್ವಾದ, ನಿರಂತರ ಮಾರ್ಗದರ್ಶನವಾದಾಗ ಮಾತ್ರ ಬದುಕು ಬಂಗಾರವಾಗಲು ಸಾಧ್ಯ ಎಂದು ರಬಕವಿ ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗುರುವಿಲ್ಲದೇ ಯಾವುದೇ ವಿದ್ಯೆ ಇಲ್ಲ. ಗುರುವಿನ ಮಾತೃರೂಪದ ಆಶೀರ್ವಾದ, ನಿರಂತರ ಮಾರ್ಗದರ್ಶನವಾದಾಗ ಮಾತ್ರ ಬದುಕು ಬಂಗಾರವಾಗಲು ಸಾಧ್ಯ ಎಂದು ರಬಕವಿ ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.ಭಾನುವಾರ ನಗರದ ಆಶ್ರಮದಲ್ಲಿ ಹಮ್ಮಿಕೊಂಡ ಶ್ರಾವಣ ಮಾಸ ಪ್ರವಚನ ಮಂಗಲ ಕಾರ್ಯಕ್ರಮಲ್ಲಿ ಭಕ್ತರಿಂದ ಸನ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿ, ಒಂದು ತಿಂಗಳ ಕಾಲ ಆಶ್ರಮದಲ್ಲಿ ನವಲಗುಂದ ಶ್ರೀಅಜಾತ ನಾಗಲಿಂಗ ಸ್ವಾಮಿಗಳ ಜೀವನ ದರ್ಶನ ಕುರಿತು ಭಕ್ತರಿಗೆ ಉಣಬಡಿಸಿದ್ದು ಸಂತಸ ತಂದಿದೆ. ಪ್ರವಚನ ಮಾಡುತ್ತಾ ಮಾಡುತ್ತಾ ನಾವೂ ಕೂಡಾ ಶ್ರೀನಾಗಲಿಂಗರ ಮಹಿಮೆಗೆ ಒಳಗಾಗಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಜೋಡಕುರಳಿ ಸಿದ್ದಾರೂಢ ಸ್ವಾಮಿಗಳ ಆರಾಧಕರಾದ ಚಿದ್ಘನಾನಂದ ಮಹಾಸ್ವಾಮಿಗಳು ಮಾತನಾಡಿದರು.ಬೆಳಗಿನ ೫-೩೦ಕ್ಕೆ ಬ್ರಹ್ಮಾನಂದರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಸಾಮೂಹಿಕ ಜಪಯೋಗ ಜರುಗಿದವು. ನಂತರ ಶ್ರೀಗಳ ಪಲ್ಲಕ್ಕಿ ಉತ್ಸವ ಜರುಗಿತು. ಸಮಾರಂಭದಲ್ಲಿ ಆಶ್ರಮದ ಸಾವಿರಾರು ಭಕ್ತರು, ಅಲ್ಲದ ಸಂಶಿ, ಶಿರೂರ, ಅದರಗುಂಚಿ, ಅಡರಟ್ಟಿ, ಸ್ವರ್ಣಗಿರಿ, ಬೀರವಳ್ಳಿ, ತಬಕದಹೊನ್ನಿಹಳ್ಳಿ, ಕಮದೋಡ, ತೇರದಾಳ, ಪರಮಾನಂದವಾಡಿ ಗ್ರಾಮಗಳು ಸೇರಿದಂತೆ ಅನೇಕರು ಆಗಮಿಸಿದ್ದರು.