ಸತ್ಯ, ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ

| Published : Jul 21 2024, 01:15 AM IST

ಸತ್ಯ, ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಮನುಷ್ಯ ಜೀವನ ಅತ್ಯಮೂಲ್ಯವಾದುದು. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಸತ್ಯ, ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕತೆ ಕಾಣುತ್ತದೆ. ನಾನು ಸತ್ಯ ಧರ್ಮದ ಹಾದಿಯಲ್ಲೇ ನಡೆಯುತ್ತಿದ್ದೇನೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆ: ಮನುಷ್ಯ ಜೀವನ ಅತ್ಯಮೂಲ್ಯವಾದುದು. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಸತ್ಯ, ಧರ್ಮದ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕತೆ ಕಾಣುತ್ತದೆ. ನಾನು ಸತ್ಯ ಧರ್ಮದ ಹಾದಿಯಲ್ಲೇ ನಡೆಯುತ್ತಿದ್ದೇನೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

ಗುರಡಾಚಾರ್ ಪಾಳ್ಯದ ನಿವಾಸದಲ್ಲಿ ತಾಲೂಕಿನ ಕಾರ್ಯಕರ್ತರು ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ನಿತ್ಯ ಜೀವನದಲ್ಲಿ ದ್ವೇಷ, ಅಸೂಯೆಯನ್ನೆ ಮೈಗೂಡಿಸಿಕೊಂಡು ತನ್ನತನವನ್ನು ಮರೆಯುತ್ತಿದ್ದಾನೆ. ಬದುಕೊಂದು ಹೋರಾಟ. ಆದರೆ, ಆ ಹೋರಾಟದ ಬದುಕಿನಲ್ಲಿ ಸತ್ಯ, ಧರ್ಮವನ್ನು ಮೈಗೂಡಿಸಿಕೊಂಡು ದ್ವೇಷ, ಅಸೂಯೆಯನ್ನು ಬಿಟ್ಟು ಬದುಕಿದರೆ ನಮ್ಮ ಬದುಕು ಸಾರ್ಥಕತೆ ಕಾಣಲು ಸಾಧ್ಯ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ಕಿಡಿ:

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಸಿಕ್ಕಿಕೊಂಡಿದೆ. ಬಡ ಮಧ್ಯಮ ವರ್ಗ ಸೇರಿದಂತೆ ಎಲ್ಲಾ ವರ್ಗದವರು ಕಟ್ಟಿದ ತೆರಿಗೆ ಹಣವನ್ನು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಮಾಡದೆ ವಿವಿಧ ಕೆಲಸಗಳಿಗೆ ವೈಯಕ್ತಿಕವಾಗಿ ಬಳಕೆ ಮಾಡಿಕೊಂಡಿರುವುದು ತಪ್ಪು. ಈ ರೀತಿ ಯಾವುದೇ ಪಕ್ಷವಾಗಲಿ, ವ್ಯಕ್ತಿಯಾಗಲಿ ಮಾಡುವುದು ಸರಿಯಲ್ಲ. ಈಗಾಗಲೆ ಎಸ್‌ಐಟಿ, ಇಡಿ ತನಿಖೆ ನಡೆಯುತ್ತಿದೆ. ಅಂತಹವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ರಾಜಕಾರಣ ಎಂದರೆ ಜನಸೇವೆ. ಆದರೀಗ ರಾಜಕಾರಣ ಎಂದರೆ ಸ್ವಾರ್ಥಗೆಂಬಂತಾಗಿದೆ. ಜನಸೇವೆ ಬಿಟ್ಟು ಅಧಿಕಾರ ಹಾಗೂ ಹಣದ ಹಿಂದೆ ಹೋಗುವವರೆ ಹೆಚ್ಚು. ಆದ್ದರಿಂದ ರಾಜಕಾರಣವನ್ನು ವ್ಯಾಪಾರ ಮಾಡಿಕೊಳ್ಳದೆ ಪ್ರಜಾಸೇವೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ನಿರ್ದೆಶಕ ಬೋಧನಹೊಸಹಳ್ಳಿ ಸೊಣ್ನೇಗೌಡ, ಭರತ್ ಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭರತ್‌ಗೌಡ ಮತ್ತಿತರರು ಹಾಜರಿದ್ದರು.

ಬಾಕ್ಸ್.............

ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ

ಕಳೆದ ಬಾರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸ್ವಚ್ಛ ಆಡಳಿತ ನೀಡಿದ್ದರು. ಆದರೆ ಈ ಬಾರಿ ಸಿದ್ದರಾಮಯ್ಯ ಅವರು ಯಾಕೋ ಏನೋ ಕಣ್ಣು, ಬಾಯಿ ಮುಚ್ಚಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಆದ್ದರಿಂದ ನಾನು ಸಿದ್ದರಾಮಯ್ಯ ಅವರಿಗೆ ಹೇಳುವುದು ಇಷ್ಟೆ, ನೀವು ಅಲ್ಪಾವಧಿಗೆ ಸಿಎಂ ಆಗಿದ್ದರೂ ಪರವಾಗಿಲ್ಲ. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ ಎಂದು ಎಂಟಿಬಿ ನಾಗರಾಜ್ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

(ಒಂದು ಫೋಟೋ ಪ್ಯಾನಲ್‌ನಲ್ಲಿ ಬಳಸಿ)

ಫೋಟೋ: 20 ಹೆಚ್‌ಎಸ್‌ಕೆ 3 ಮತ್ತು 4

3: ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕರ್ತರು ಕೇಕ್ ಕತ್ತರಿಸಿ ಶುಭಾಶಯ ಕೋರಿದರು.

(ಈ ಫೋಟೋ ಪ್ಯಾನಲ್‌ನಲ್ಲಿ ಬಳಸಿ)

ಹೊಸಕೋಟೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೊಬ್ಬರು ಟಗರು ಉಡುಗೊರೆಯಾಗಿ ನೀಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ನಿರ್ದೆಶಕ ಬೋಧನಹೊಸಹಳ್ಳಿ ಸೊಣ್ನೇಗೌಡ, ಭರತ್ ಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭರತ್‌ಗೌಡ ಮತ್ತಿತರರು ಹಾಜರಿದ್ದರು.