ಸಜ್ಜನರ ಸಂಗದಿಂದ ಜೀವನ ಸಾರ್ಥಕ

| Published : Jul 07 2024, 01:28 AM IST

ಸಾರಾಂಶ

ಮನುಷ್ಯ ಸಂತೃಪ್ತಿಯ ಜೀವನ ನಡೆಸಲು ಆರೋಗ್ಯ, ಆನಂದ, ತಾಳ್ಮೆ ಮತ್ತು ಸಹನೆ ಮುಖ್ಯ

ಗದಗ: ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಾಧು ಸಂತರು, ಶರಣ-ಗುರುಗಳ ಸಂಪರ್ಕದಲ್ಲಿ ಇರಬೇಕು. ಒಬ್ಬ ವ್ಯಕ್ತಿ ಅಥವಾ ಒಂದು ವಸ್ತು ಬದಲಾಗಬೇಕಾದರೆ ಸಂಗ ಅತೀ ಮುಖ್ಯ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಆದ್ದರಿಂದ ಬದುಕಿನಲ್ಲಿ ಒಳ್ಳೆಯ ಜನರ ಸಹವಾಸ ಮಾಡಬೇಕು ಎಂದು ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಅವರು ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭನವದಲ್ಲಿ ನಡೆದ ಜೀವನ ದರ್ಶನ 38ನೇ ಮಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಳೆ ಹನಿ ಸಮುದ್ರದಲ್ಲಿ ಹುಟ್ಟಿ ಸಮುದ್ರಕ್ಕೆ ಸೇರುವಂತೆ, ಮಾನವ ಮಣ್ಣಿನಲ್ಲಿ ಹುಟ್ಟಿ ಮಣ್ಣಿನಲ್ಲಿ ಲೀನನಾಗುತ್ತಾನೆ. ಕಾರಣ ಮನುಷ್ಯನಿಗೆ ಸಂಪತ್ತು ಮುಖ್ಯವಲ್ಲ, ಸಂತೃಪ್ತಿ, ಸಂತೋಷ ಮುಖ್ಯ ಎಂದು ಹಲವಾರು ದೃಷ್ಟಾಂತಗಳ ಮೂಲಕ ವಿವರಿಸಿದರು.

ಸಮಿತಿಯ ಅಧ್ಯಕ್ಷ ಪ್ರೊ. ಎಂ.ಎನ್. ಕಾಮನಹಳ್ಳಿ ಮಾತನಾಡಿ, ಮನುಷ್ಯ ಸಂತೃಪ್ತಿಯ ಜೀವನ ನಡೆಸಲು ಆರೋಗ್ಯ, ಆನಂದ, ತಾಳ್ಮೆ ಮತ್ತು ಸಹನೆ ಮುಖ್ಯ. ಇದನ್ನು ಧ್ಯಾನದ ಮುಖಾಂತರ ಪಡೆಯಬೇಕು. ಧ್ಯಾನ ಒಂದು ತಪಸ್ಸು ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದ್ದು ಮಣ್ಣೆತ್ತಿನ ಅಮಾವಾಸ್ಯೆ ಇದು ಒಂದು ಹಬ್ಬ ಎಂದು ಹೇಳಿದರು.

ಈ ವೇಳೆ ಪ್ರಸಾದ ಸೇವೆ ಮಾಡಿದ ನೀಲಕ್ಕ ಯಲ್ಲಪ್ಪ ಸತ್ಯಪ್ಪನವರ ಹಾಗೂ ವಿವೇಕಾನಂದಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ಬಸವರಾಜ ಸುಂಕದ, ಎಂ.ಕೆ.ಲಕ್ಕುಂಡಿ, ಆರ್.ಬಿ. ಒಡೆಯರ, ವಿ.ಆರ್. ಕುಲಕರ್ಣಿ, ಅಂಬರೀಷ್‌ ಹಾದಿ, ಕಾರ್ತಿಕ ಮಡಿವಾಳರ, ಮಹಾದೇವಿ ಗೋಗೇರಿ, ರಾಧಿಕಾ ಬಂದಮ್, ಗರಡಿಮನಿ, ಎ.ಟಿ.ನರೇಗಲ್ಲ, ಕನಕೇರಿ, ತಿರ್ಲಾಪೂರ, ಮೇದರಗಿ ಹಾಗೂ ಎಸ್.ಎಸ್. ಗೌಡರ ಮುಂತಾದವರು ಇದ್ದರು.

ಆ ನಂತರ ಪ್ರಸಾದ ಸೇವೆ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಕಾಶಿ ವಿಶ್ವನಾಥ ದೇವರ ಪಲ್ಲಕಿ ಸೇವೆ ಜರುಗಿತು. ಎಂ.ಬಿ.ಚನ್ನಪ್ಪಗೌಡರ ಸ್ವಾಗತಿಸಿದರು. ಕೆ.ಐ.ಕುರಗೋಡ ನಿರೂಪಿಸಿದರು. ಬಿ.ಎನ್. ಯರನಾಳ ವಂದಿಸಿದರು.