ಎನ್‌ಎಸ್‌ಎಸ್‌ ಶಿಬಿರದಿಂದ ಜೀವನ ಪಾಠ: ಡಾ. ರವೀಂದ್ರ ಶೆಟ್ಟಿ

| Published : Feb 24 2024, 02:30 AM IST

ಸಾರಾಂಶ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಕಿಯಂಗಡಿ ಮಾಳದಲ್ಲಿ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರಿಸ್ಥಿತಿಯ ಅರಿವು, ಭ್ರಾತೃತ್ವ, ಸಹೋದರತೆ ಹಾಗೂ ಸಹಬಾಳ್ವೆಯಿಂದ ಬದುಕಲು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಅವಕಾಶ ನೀಡಿದೆ. ಪ್ರಕೃತಿ ಸುಂದರ ಮಡಿಲಲ್ಲಿ ನಡೆಯುವ ಶಿಬಿರವು ಶಿಬಿರಾರ್ಥಿಗಳಿಗೆ ವಿಶೇಷ ಜೀವನ ಪಾಠ ಹಾಗೂ ಅನುಭವವನ್ನು ನೀಡಲಿದೆ ಎಂದು ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್ ಕ್ವಾರಿ ಆ್ಯಂಡ್‌ ಸ್ಟೋನ್ ಓನರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಕಿಯಂಗಡಿ ಮಾಳದಲ್ಲಿ ಆಯೋಜಿಸಲಾ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕಿರಣ್ ಎಂ. ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಸಿಗುವ ಅನುಭವಕ್ಕಿಂತ ಶಿಬಿರದಲ್ಲಿ ಸಿಗುವ ಶಿಸ್ತು, ಸಹಬಾಳ್ವೆ, ಸಹಭೋಜನ ವಿಭಿನ್ನವಾದುದು. ಶಿಬಿರದಿಂದ ವಿದ್ಯಾರ್ಥಿಗಳು ಸಮಾಜವನ್ನು ನೋಡುವ ನೋಟ ಬದಲಾಗುತ್ತದೆ ಎಂದರು.ಅತಿಥಿಯಾಗಿ ಆಗಮಿಸಿದ ಮಾಳ ಗ್ರಾಮದ ಪಂಚಾಯಿತಿ ಅಧ್ಯಕ್ಷ ಉಮೇಶ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಪೋಷಕರ ನಂಬಿಕೆಗೆ ಪಾತ್ರರಾಗುವುದರ ಜೊತೆಗೆ ಸಮಾಜಕ್ಕೆ ಆದರ್ಶವಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.ಚೌಕಿಯಂಗಡಿ ಹಾಲು ಉತ್ಪಾದಕರ ಸಂಘ ಹಾಗೂ ಶಾಮಿಯಾನ ಯೂನಿಯನ್ ಕಾರ್ಕಳ ಅಧ್ಯಕ್ಷ ಸುಕೇಶ್ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೀಶ್ ಪೂಜಾರಿ, ಮಲ್ಲಿಕಾ ಶೆಟ್ಟಿ, ಚೌಕಿಯಂಗಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಭುಜಂಗ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರನಾಥ ಇಂದ್ರ, ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ, ಅಗ್ನಿಲಾ ಸೂಪರ್ ಮಾರ್ಕೆಟ್ ಮಾಲಕ ದರ್ಶನ್ ಜೈನ್ ಹಾಗೂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಉಪಸ್ಥಿತರಿದ್ದರು.ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ಸ್ನಾತಕೋತ್ತರ ವಿಭಾಗ ಸಂಯೋಜಕ ಡಾ.ವಿಧ್ಯಾದರ ಹೆಗ್ಡೆ ಎಸ್. ಶಿಬಿರದ ಮುನ್ನೋಟ ನೀಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಚಂದ್ರಾವತಿ, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಭಾಗ್ಯಲಕ್ಷ್ಮಿ ಟಿ.ಎಂ., ದೈಹಿಕ ಶಿಕ್ಷಣ ನಿರ್ದೆಶಕರಾದ ಡಾ.ಜಯಭಾರತಿ ಎ., ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಸುಬ್ರಮಣ್ಯ ಕೆ.ಸಿ. ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕರಾದ ಡಾ. ಸುದರ್ಶನ್ ಪಿ. ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಸೌಮ್ಯ ಎಚ್.ಕೆ. ಸ್ವಾಗತಿಸಿದರು. ಯೋಜನಾಧಿಕಾರಿ ಪ್ರಸನ್ನ ಕುಮಾರ್ ವಂದಿಸಿದರು.

ಎನ್‌ಎಸ್‌ಎಸ್‌ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಕೌಶಿಕ್, ಸುಮಂತ್, ವಿಕ್ರಂ ಹಾಗೂ ಹರ್ಷಿಣಿ ಉಪಸ್ಥಿತರಿದ್ದರು.