ಕಠಿಣ ಪರಿಶ್ರಮದಿಂದ ಜೀವನ ಏಳಿಗೆ: ರಾಣಿ ಮಾಚಯ್ಯ

| Published : Jan 04 2025, 12:33 AM IST

ಸಾರಾಂಶ

ಹೊದವಾಡ ಗ್ರಾಮದ ರಾಫಾಲ್ಸ್ ಇಂಟರ್‌ನ್ಯಾಷನಲ್‌ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಇತ್ತೀಚೆಗೆ ನೆರವೇರಿತು. ಪದ್ಮಶ್ರೀ ಪುರಸ್ಕೃತ ಹೆಸರಾಂತ ಉಮ್ಮತ್ತಾಟ್ ಕಲಾವಿದೆ ಇಮ್ಮುಡಿಯಂಡ ರಾಣಿ ಮಾಚಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಏಳಿಗೆ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಹೆಸರಾಂತ ಉಮ್ಮತ್ತಾಟ್ ಕಲಾವಿದೆ ಇಮ್ಮುಡಿಯಂಡ ರಾಣಿ ಮಾಚಯ್ಯ ಹೇಳಿದ್ದಾರೆ.

ಹೊದವಾಡ ಗ್ರಾಮದ ರಾಫಾಲ್ಸ್ ಇಂಟರ್‌ನ್ಯಾಷನಲ್‌ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.ಜೀವನದಲ್ಲಿ ಸಿಗುವ ಒಂದೊಂದು ಅವಕಾಶವನ್ನು ಬಳಸಿಕೊಂಡು ಮುಂದೆ ಬರಲು ಪ್ರಯತ್ನಿಸಬೇಕು. ಹಲವಾರು ವರ್ಷಗಳ ಪರಿಸರಮದಿಂದ ಆಗುವಂಥದ್ದು ಒಂದು ಕ್ಷಣದಲ್ಲಿ ಸಾಧನೆ ಮಾಡಲು ಅಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಮಾತನಾಡಿ, ಸದೃಢ ಸಮಾಜ ನಿರ್ಮಾಣ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಉಪಾಧ್ಯಕ್ಷ ಎನ್ ಕೆ ಮೆಹಬೂಬ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಕೆ ಎಂ ಮೊಯ್ದು, ಕೊಡಗು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ದಮಯಂತಿ ಹಾಗೂ ಶಾಲಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಐ ಜೆ ಸಮೀರಾ ಮತ್ತಿತರರಿದ್ದರು.

ಪ್ರಾಂಶುಪಾಲ ತನ್ವೀರ್ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಲ್ಮಾನ್ ಫಾರಿಸ್ ಸ್ವಾಗತಿಸಿದರು. ವಿದ್ಯಾರ್ಥಿ ಹೈಸ್ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.