ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮನುಕುಲದ ಅಭಿವೃದ್ಧಿಗೆ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ಅತಿಮುಖ್ಯ. ಹಾಗೇಯೇ ಅರಣ್ಯ ಸಂರಕ್ಷಕರ ಜೀವವೂ ಅಷ್ಟೇ ಮುಖ್ಯ. ಅಮೂಲ್ಯ ವೃಕ್ಷ ಸಂಪತ್ತಿಗೆ ಕೊಡಲಿ ಇಡುವ, ಕಾಡುಪ್ರಾಣಿಗಳಿಗೆ ಗುಂಡಿಕ್ಕುವ ದುಷ್ಕರ್ಮಿಗಳನ್ನು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಪಡುವ ಕಷ್ಟ ಸಾಮಾನ್ಯವಾದುದ್ದಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ನಗರ ಹೊರ ವಲಯದ ಸೂಲಾಲಪ್ಪನದಿನ್ನೆ ವೃಕ್ಷೋದ್ಯಾನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಅರಣ್ಯ ಇಲಾಖೆ, ವತಿಯಿಂದ ಎರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹುತಾತ್ಮ ಅರಣ್ಯ ಸಿಬ್ಬಂದಿ ಸ್ಮರಿಸಿಕರ್ತವ್ಯದಲ್ಲಿದ್ದಾಗ ದುಷ್ಕರ್ಮಿಗಳ ಕೃತ್ಯಕ್ಕೆ ಜೀವ ಕಳೆದುಕೊಂಡ ಸೈನಿಕರು ಮತ್ತು ಪೊಲೀಸರನ್ನು ನೆನಪಿಸಿಕೊಳ್ಳುವಂತೆಯೇ, ಅಮೂಲ್ಯ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾಯಕದಲ್ಲಿ ನಿರತರಾಗಿದ್ದಾಗ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಯ ಬಲಿದಾನವನ್ನು ದೇಶ ಇಂದು ಸ್ಮರಿಸಿಕೊಳ್ಳುತ್ತಿದೆ. ಅರಣ್ಯ ಸಂರಕ್ಷಕರು ದುರ್ಗಮ ಅರಣ್ಯದಲ್ಲಿ ಕಾಡು ಪ್ರಾಣಿಗಳು ಮತ್ತು ಬೇಟೆಗಾರರ ದಾಳಿಯ ಭಯದ ನಡುವೆ ಪರಿಶೀಲನೆ ನಡೆಸುತ್ತ, ಕೆಲಸ ಮಾಡುವುದು ಬಲು ಅಪಾಯಕಾರಿ. ಎಷ್ಟೋ ಸಂದರ್ಭಗಳಲ್ಲಿ ಕಾಡುಗಳ್ಳರ ದಾಳಿಗೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಅರಣ್ಯ ರಕ್ಷಕರ ಕುಟುಂಬಗಳ ಕಣ್ಣೀರು ಈ ಮಣ್ಣಿನಲ್ಲಿ ಇಂಗಿ ಹೋಗಿವೆ ಎಂದರು.
ಅರಣ್ಯ ನಾಶ ತಪ್ಪಿಸಿ, ಸಂರಕ್ಷಿಸಿದಿನ ದಿಂದ ದಿನಕ್ಕೆ ಅರಣ್ಯ ನಾಶವಾಗುತ್ತಿದೆ. ಅರಣ್ಯ ಉಳಿಸುವುದು ಬಹಳ ಮುಖ್ಯ, ಅಭಿವೃದ್ಧಿಯ ವಿಷಯದಲ್ಲಿ ಸಾಮಾಜಿಕ ಕಾಡು ನಾಶವಾತ್ತಿದೆ. ಭೂಮಿಯ ಮೇಲೆ ಶೇ 33 ರಷ್ಟು ಕಾಡು ಹೊಂದಿರಬೇಕು ಆಗ ಮಾತ್ರ ಜೀವಿಸಲು ಸಾಧ್ಯ. ಎಲ್ಲ ಸಾರ್ವಜನಿಕರು ಗಿಡ ಮರಗಳನ್ನು ನೆಟ್ಟು ನೀರು ಹಾಯಿಸಿ ಸಂರಕ್ಷಣೆ ಮಾಡಿ ಬೆಳಸಬೇಕು. ಸಾರ್ವಜನಿಕರಲ್ಲಿ ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಕಾಡು ನಾಶದಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಅನೇಕ ಸಂಘ ಸಂಸ್ಥೆಗಳು ಅರಣ್ಯ ರಕ್ಷಣೆ ಮಾಡುವಲ್ಲಿ ಸಕ್ರಿಯವಾಗಬೇಕು. ಅರಣ್ಯ ಸಂರಕ್ಷಣೆ ಮಾಡಿ ಬೆಳಸಿದಾಗ ಮಾತ್ರ ಪರಿಸರ ಸಮತೋಲನ ಸಾಧ್ಯ ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಮಾತನಾಡಿ, ಅರಣ್ಯ ಹುತಾತ್ಮರ ದಿನಾಚರಣೆಯ ಹಿಂದೆ ಇರುವ ಎರಡು ಘಟನೆಗಳು ಇಂದಿಗೂ ಎಲ್ಲರ ಮನಕಲಕುತ್ತವೆ. ಈ ಎರಡು ಘಟನೆಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದವು. 1989ರ ಆಗಸ್ಟ್ 4ರಂದು ಅರಣ್ಯ ರಕ್ಷಕ ಬಿ.ಸಿ. ಮೋಹನಯ್ಯ ಅವರು ವೀರಪ್ಪನ್ ಗುಂಡಿಗೆ ಬಲಿಯಾದ ಮೊದಲ ಸಿಬ್ಬಂದಿ ಎನ್ನಲಾಗಿದೆ. 1991ರ ನವೆಂಬರ್ 10ರಂದು ಕಾಡುಗಳ್ಳ ವೀರಪ್ಪನ್ ನಿಂದ ಹತ್ಯೆಯಾದ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್. ಈ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಪ್ರತಿ ವರ್ಷ ಅರಣ್ಯ ಹುತಾತ್ಮರ ದಿನ ಎಂದು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತು ಎಂದರು.
......................................ಅರಣ್ಯ ಹುತಾತ್ಮರ ದಿನ
ರಾಜಸ್ಥಾನದ ಜೋಧ್ ಪುರ ಮಹಾರಾಜ ಗುರು ಜಂಬಾಜಿಯ ಸೈನಿಕರು ಬಿಷ್ಣೋಯಿ ಗ್ರಾಮದಲ್ಲಿ 1730ರ ಸೆಪ್ಟೆಂಬರ್ 11ರಂದು ಕೇಜರ್ಲಿ ಮರಗಳನ್ನು ಜತನದಿಂದ ಕಾಪಾಡಿಕೊಂಡಿದ್ದ 363 ಮುಗ್ಧ ಪರಿಸರ ಪ್ರೇಮಿಗಳು ಹತ್ಯಾಕಾಂಡ ನಡೆಸಿದ್ದರು. ಸೆಪ್ಟೆಂಬರ್ 11ರ ದಿನವನ್ನು ಅವರ ತ್ಯಾಗ ಬಲಿದಾನದ ಸ್ಮರಣಾರ್ಥ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ದೇಶದಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿ, 2012ರಿಂದ ರಾಷ್ಟ್ರಮಟ್ಟದಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.....................................................................................
ಈ ವೇಳೆ ಅರಣ್ಯ ಹುತಾತ್ಮರಾದ ಅರಣ್ಯ ಸಿಬ್ಬಂಧಿಗೆ ಮೌನ ಆಚರಣೆ ಗೌರವ ಸೂಚಿಸಲಾಯಿತು. ಈ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಚಿನ್ನಪ್ಪಯ್ಯ, ವಲಯ ಅರಣ್ಯ ಅಧಿಕಾರಿ ವಾಸುದೇವ ಮೂರ್ತಿ, ಸಾಮಾಜಿಕ ಅರಣ್ಯ ವಿಭಾಗದ ಎಂ.ಸಿ ಗೀತಾ, ಗಸ್ತು ಅರಣ್ಯ ಪಾಲಕ ರಾಮಪ್ಪ, ಕ್ಷೇಮಾಭಿವೃದ್ಧಿ ಅರಣ್ಯ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಹಾಗೂ ಅರಣ್ಯ ಇಲಾಖೆ ಸಿಬಂದ್ದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.