: ಡಿ. ೭ರಂದು ಯಲ್ಲಪ್ಪ ಮಾಂಡ್ರೆ ಎಂಬುವರು ತಮ್ಮ ಖಾಸಗಿ ಕೆಲಸ ಪ್ರಯುಕ್ತ ಶಿರಹಟ್ಟಿಯ ನಿರೀಕ್ಷಣಾ ಮಂದಿರಕ್ಕೆ ತೆರಳಿದ್ದರು. ಆಗ ಅವರ ಮೊಬೈಲ್‌ಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ.

ಶಿರಹಟ್ಟಿ: ದೌರ್ಜನ್ಯ ತೋರಿ, ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಚನ್ನಪಟ್ಟಣ ಗ್ರಾಮದ ನಾಮದೇವ ಯಲ್ಲಪ್ಪ ಮಾಂಡ್ರೆ ಎಂಬವರು ಶಾಸಕ ಡಾ. ಚಂದ್ರು ಲಮಾಣಿ, ರಾಜು ಖಾನಪ್ಪನವರ, ಸಂತೋಷ ಕುರಿ ಮತ್ತು ಫಕ್ಕೀರೇಶ ರಟ್ಟಿಹಳ್ಳಿ ವಿರುದ್ಧ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?: ಡಿ. ೭ರಂದು ಯಲ್ಲಪ್ಪ ಮಾಂಡ್ರೆ ಎಂಬುವರು ತಮ್ಮ ಖಾಸಗಿ ಕೆಲಸ ಪ್ರಯುಕ್ತ ಶಿರಹಟ್ಟಿಯ ನಿರೀಕ್ಷಣಾ ಮಂದಿರಕ್ಕೆ ತೆರಳಿದ್ದರು. ಆಗ ಅವರ ಮೊಬೈಲ್‌ಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ.

ನನ್ನ ಜತೆ ಮಾತನಾಡಿದ ಆಡಿಯೋ ರೆಕಾರ್ಡಿಂಗ್ ನನ್ನ ಬಳಿ ಇದ್ದು, ನನಹೆ ಹಾಗೂ ನನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ನೇರವಾಗಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಬೆಂಬಲಿಗರೇ ಕಾರಣ. ನನ್ನ ಜೀವ ರಕ್ಷಣೆಗೆ ಭದ್ರತೆ ಒದಗಿಸಬೇಕೆಂದು ಎಫ್‌ಐಆರ್‌ನಲ್ಲಿ ದೂರುದಾರ ನಾಮದೇವ ಮಾಂಡ್ರೆ ಉಲ್ಲೇಖಿಸಿದ್ದಾರೆ.

ಲಕ್ಷ್ಮೇಶ್ವರದ ಜೆಎಂಎಫ್‌ಸಿ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶಿರಹಟ್ಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೂರುದಾರನ ಮೇಲೆ ಪ್ರತಿ ದೂರು ಕೂಡ ದಾಖಲಾಗಿದೆ.ಜಾತಿನಿಂದನೆ: ಪ್ರತಿದೂರು ದಾಖಲುಶಿರಹಟ್ಟಿ: ಜಾತಿನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ನಾಮದೇವ ಯಲ್ಲಪ್ಪ ಮಾಂಡ್ರೆ ವಿರುದ್ಧ ಜಾನು ಗೂರಪ್ಪ ಲಮಾಣಿ ಎಂಬವರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

ಡಿ. ೭ರಂದು ಶಿರಹಟ್ಟಿಯ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಅಭಿವೃದ್ದಿ ಬಗ್ಗೆ ಸ್ನೇಹಿತರೊಂದಿಗೆ ಚರ್ಚೆ ಮಾಡುತ್ತಿರುವಾಗ ಚನ್ನಪಟ್ಟಣದ ನಾಮದೇವ ಯಲ್ಲಪ್ಪ ಮಾಂಡ್ರೆ ಎಂಬುವರು ಲಂಬಾಣಿ ಸಮಾಜದ ಬಗ್ಗೆ ಕೀಳು ಶಬ್ದಗಳಲ್ಲಿ ಮಾತನಾಡಿದ್ದಾರೆ. ಏಕೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಿಯಾ ಎಂದು ಕೇಳಿದಾಗ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಾನು ಗೂರಪ್ಪ ಲಮಾಣಿ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.