ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರ ಜೀವ ಉಳಿಸುವ ಇಲ್ಲಿನ ಕಡಲತೀರದಲ್ಲಿ ಕರ್ತವ್ಯ ನಿರ್ವಹಿಸುವ ಜೀವರಕ್ಷಕ ಸಿಬ್ಬಂದಿಗೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ ಲಯನ್ಸ್ ಕ್ಲಬ್‌ ವತಿಯಿಂದ ಸನ್ಮಾನ ಕಾರ್ಯಕ್ರಮ ಇಲ್ಲಿನ ಐಶ್ವರ್ಯ ಹೋಂ ಸ್ಟೇನಲ್ಲಿ ಬುಧವಾರ ಸಂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಕರ್ಣ

ಸಮುದ್ರಕ್ಕೆ ಇಳಿಯುವ ಪ್ರವಾಸಿಗರ ಮೇಲೆ ಇಗಾ ಇಟ್ಟು ತಿಳಿ ಹೇಳುತ್ತಾ ಕಾರ್ಯನಿರ್ವಹಿಸಿ, ಸುಳಿಗೆ ಸಿಲುಕಿದಾಗ ಅದೆಷ್ಟೂ ಪ್ರವಾಸಿಗರ ಜೀವ ಉಳಿಸಿದ ಘಟನೆಯನ್ನ ಸ್ಮರಿಸಿ ಸಾಹಸ ಕಾರ್ಯವನ್ನ ಪ್ರಶಂಸಿಸಿ ಜೀವರಕ್ಷಕ ಸಿಬ್ಬಂದಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಅದರಂತೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ ಸಂಮಿತ ಅಮೀತ ಗೋಕರ್ಣ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗರ್ವನರ್ ಜಿ.ಎನ್. ನಾಯಕ, ಎಂ.ಜೆ.ಎಫ್. ರಾಜೇಶ ಸಾಲೆಹಿತ್ತಲ ಎಂ.ಜೆ.ಎಫ್ ಅಶೋಕ ಹೆಗಡೆ ಸಿರ್ಸಿ, ಎಸ್.ಜೆ. ಖೈರನ್‌ ಹೊನ್ನಾವರ, ಲಯನ್ಸ ನಾಲ್ಕು ಝೋನ್‌ಗಳ ಸದಸ್ಯರು, ಎಂ.ಜೆ.ಎಫ್.ಆರ್.ಎಚ್ ನಾಯಕ್, ಎಂ.ಜೆ.ಎಫ್. ಶಶಿಧರ, ಕಾರ್ಯದರ್ಶಿ ರಾಮಚಂದ್ರ ಮಲ್ಲನ್, ಖಜಾಂಚಿ ಅಮಿತ ಗೋಕರ್ಣ, ಸದಸ್ಯರಾದ ರವೀಂದ್ರ ಕೊಡ್ಲೆಕೆರೆ, ರಾಮಮೂರ್ತಿ ನಾಯಕ, ಸತೀಶ ನಾಯ್ಕ, ಮಂಜುನಾಥ ಜನ್ನು, ಪ್ರೇಮಾ ನಾಯಕ್, ಅಹಲ್ಯಾ ನಾಯಕ, ಶೈಲಜಾ ನಾಯಕ, ಮಹೇಶ್ ನಾಯಕ ವಿದ್ಯಾ ಶೇಟ್ ಉಪಸ್ಥಿತರಿದ್ದರು. ಲಯನ್ಸ್‌ ಎನ್.ಎಸ್. ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು. ಲೈಫ್‌ಗಾರ್ಡ ಮೇಲ್ವಿಚಾರಕ ರವಿ ನಾಯ್ಕ, ಜೀವರಕ್ಷಕ ಸಿಬ್ಬಂದಿಗಳಾದ ಮೋಹನ ಅಂಬಿಗ, ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ, ರೋಶನ ಖಾರ್ವಿ, ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಅವರನ್ನ ಸನ್ಮಾನಿಸಲಾಯಿತು.