ತಾಳಿಕೋಟೆ : ಶ್ರೀ ಖಾಸ್ಗತಜ್ಜನ ಜಾತ್ರೆಗೆ ತಾಳಿಕೋಟೆ ಪಟ್ಟಣ ವಿದ್ಯುದ್ಧೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಶ್ರೀಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರ ಅಪೇಕ್ಷೆಯಂತೆ ಇಡೀ ತಾಳಿಕೋಟೆ ಪಟ್ಟಣದ ಪ್ರಮುಖ ಮಾರ್ಗಗಳ ಎಡಬಲ, ಅಂಗಡಿ ಮುಂಗಟ್ಟುಗಳ ಮುಂದೆ ವಿದ್ಯುದ್ಧೀಪ ಅಳವಡಿಸಿ ಹಬ್ಬದಂತೆ ಜಾತ್ರೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ.
ಪ್ರವೀಣ ಘೋರ್ಪಡೆ
ಕನ್ನಡಪ್ರಭ ವಾರ್ತೆ ತಾಳಿಕೋಟೆಶ್ರೀ ಖಾಸ್ಗತಜ್ಜನ ಜಾತ್ರೆಗೆ ತಾಳಿಕೋಟೆ ಪಟ್ಟಣ ವಿದ್ಯುದ್ಧೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಶ್ರೀಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರ ಅಪೇಕ್ಷೆಯಂತೆ ಇಡೀ ತಾಳಿಕೋಟೆ ಪಟ್ಟಣದ ಪ್ರಮುಖ ಮಾರ್ಗಗಳ ಎಡಬಲ, ಅಂಗಡಿ ಮುಂಗಟ್ಟುಗಳ ಮುಂದೆ ವಿದ್ಯುದ್ಧೀಪ ಅಳವಡಿಸಿ ಹಬ್ಬದಂತೆ ಜಾತ್ರೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ.
ಶ್ರೀಮಠದ ಮೆರಗು ಹೆಚ್ಚಿಸಲು ಹೊರವಲಯ ಹಾಗೂ ಗೋಪುರ ಎತ್ತರಕ್ಕೂ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಶ್ರೀಮಠದ ಒಳಭಾಗದಲ್ಲಿಯ ಖಾಸ್ಗತರ ಹಾಗೂ ವಿರಕ್ತ ಶ್ರೀಗಳ ಬೆಳ್ಳಿ ಉತ್ಸವ ಮೂರ್ತಿಗಳಿಗೆ ರಾಜವೈಭವದ ಮಂಟಪಗಳಂತೆ ಅಲಂಕೃತಗೊಳಿಸಲಾಗಿದೆ. ಮಠದ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ವಿರಕ್ತಶ್ರೀಗಳ ಮೂರ್ತಿಗೆ ರುದ್ರಾಕ್ಷಿ ಮಂಟಪ ನಿರ್ಮಿಸಿ ಜಾತ್ರೆಯ ಸೋಬಗನ್ನು ಇಮ್ಮಡಿಗೊಳಿಸಲು ಸಿದ್ಧತೆ ನಡೆದಿದೆ.ಪಟ್ಟಣದ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ರಾಣಾ ಪ್ರತಾಪಸಿಂಹ ಸರ್ಕಲ್, ಶಿವಾಜಿ ಮಹಾರಾಜ ವೃತ್ತ ಹಾಗೂ ಡಾ.ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ ಮುಂಭಾಗ, ಶ್ರೀ ಖಾಸ್ಗತೇಶ್ವರ ಮಠದ ಮುಂಭಾಗ ಭಕ್ತಾದಿಗಳು ಹಾಗೂ ವಿವಿಧ ಯುವ ಸಂಘಟಕರು ತಮ್ಮಾ ಇಚ್ಚಾನುಸಾರ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಹಾಗೂ ಸಿದ್ದಲಿಂಗ ಶ್ರೀಗಳ ಭಾವಚಿತ್ರದೊಂದಿಗೆ ಸ್ವಾಗತ ಕೋರುವ ಕಟೌಟ್ ಕಟ್ಟಿ ಭಕ್ತರಿಗೆ ಸ್ವಾಗತಕೊರುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇಂದು ಹುಗ್ಗಿ ಪ್ರಸಾದ ಪ್ರಸಾದ;೨೬ರಂದು ಗೋಪಾಲ ಕಾವಲಿ ಒಡೆಯುವ ದಿನದಂದು ಉತ್ತರ ಕರ್ನಾಟಕ ಭಾಗದ ಗೋದಿ ಹುಗ್ಗಿ, ರೊಟ್ಟಿ, ಅನ್ನ ಸಾಂಬಾರು ಪ್ರಸಾದ ರೂಪದಲ್ಲಿ ಉಣಬಡಿಸಲು ಮುಂದಾಗಿದ್ದು ಜು.೨೭ರಂದು ವಿಶೇಷ ಪ್ರಸಾದವಾಗಿ ಸಜ್ಜಕ, ರೊಟ್ಟಿ, ಅನ್ನ ಸಾಂಬರು ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ಪ್ರಾರಂಭ ದಿನದಿಂದಲೂ ಮುಕ್ತಾಯದವರೆಗೆ ವಿಶೇಷವಾಗಿ ಉತ್ತರ ಕರ್ನಾಟಕದ ರೊಟ್ಟಿ, ತಹರೇವಾರಿ ಪಲ್ಯೆ, ಸಾಂಬಾರ, ಅನ್ನ, ಫನ್ನೀರ್ ಮಸಾಲಾ, ಚಪಾತಿ, ಬೋಂದೆ, ಶೇಂಗಾ ಹೋಳಿಗೆ, ಶಿರಾ ಸಜ್ಜಕ ಒಳಗೊಂಡಂತೆ ವಿವಿಧ ಬಗೆಯ ಮೃಷ್ಟಾನ್ನ ಭೋಜನ ಪ್ರಸಾದ ನಡೆಯುತ್ತಿದೆ.
ಇಂದು ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ನಿಮಿತ್ತ ೨೬ರಂದು ನಸುಕಿನ ಜಾವ ೫.೩೦ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ(ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ಜರುಗಲಿದೆ. ೯ ದಿನಗಳ ಕಾಲ ನಡೆದು ಬಂದ ಸಪ್ತ ಭಜನಾ ಕಾರ್ಯಕ್ರಮ ಗೋಪಾಲಕಾವಲಿ(ಮೊಸರುಗಡಿಗೆ) ಒಡೆಯುವುದರ ಮೂಲಕ ಮಂಗಲಗೊಳ್ಳಲಿದೆ. ಭಕ್ತರೇ ಶ್ರೀಮಠದ ಆಸ್ತಿಯಾಗಿದ್ದಾರೆ.ಖಾಸ್ಗತಜ್ಜನ ಜಾತ್ರೆ ಭಕ್ತರಿಂದಲೇ ಮೆರಗು ಹೆಚ್ಚಿಸಿಕೊಂಡಿದೆ. ಜಾತ್ರೆಯ ಸೊಬಗನ್ನು ಹೆಚ್ಚಿಸಲು ಭಕ್ತರೇ ನಿಂತು ಎಲ್ಲ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದು ಭಕ್ತರ ಮಠ ಅಜ್ಜನ ಜಾತ್ರೆಗೆ ಎಲ್ಲರೂ ಬಂದು ಶ್ರೀ ಖಾಸ್ಗತಜ್ಜನ ಕೃಪೆಗೆ ಪಾತ್ರರಾಗಬೇಕು.
ಬಾಲಶಿವಯೋಗಿ ಸಿದ್ದಲಿಂಗಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟೆ