ಲಿಂ.ವಿಜಯ ಮಹಾಂತ ಜಾತ್ರೆ: ಸೆ.2ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

| Published : Aug 27 2024, 01:35 AM IST

ಲಿಂ.ವಿಜಯ ಮಹಾಂತ ಜಾತ್ರೆ: ಸೆ.2ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸೆ.2ರಂದು ನಡೆಯಲಿರುವ ಲಿಂ.ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಒಂದು ವಾರ ವಿಶೇಷ ಸಾಂಸ್ಕೃತಿಕ ಚಟುವಟಿಕೆ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಾಂಸ್ಕೃತಿಕ ಸಪ್ತಾಹ ಕಾರ್ಯಕ್ರಮದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಸೆ.2ರಂದು ನಡೆಯಲಿರುವ ಲಿಂ.ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಒಂದು ವಾರ ವಿಶೇಷ ಸಾಂಸ್ಕೃತಿಕ ಚಟುವಟಿಕೆ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಾಂಸ್ಕೃತಿಕ ಸಪ್ತಾಹ ಕಾರ್ಯಕ್ರಮದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.2ರಂದು ಲಿಂ.ವಿಜಯ ಮಹಾಂತ ಶಿವಯೋಗಿಗಳ ಮಹಾ ರಥೋತ್ಸವ ನಡೆಯಲಿದೆ. ಅದರಂತ್ತೆ ಸೆ.3ರಂದು ಅಪ್ಪ ಬಸವಣ್ಣ ಹಾಗೂ ಮಹಾಂತ ಶಿವಯೋಗಿಗಳ ಭಾವಚಿತ್ರದ ಅಡ್ಡಪಲ್ಲಕ್ಕಿಯ ನಡೆಯಲಿದೆ. ಆ ಸಮಾರಂಭಕ್ಕೆ ನಾಡಿನ ಅನೇಕ ನಾಟ್ಯ ತಂಡಗಳನ್ನು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಚಿವ ಶಿವರಾಜ ತಂಗಡಗಿ ಕಳುಹಿಲಿದ್ದಾರೆ. ಸೆ.ರಂದು ವಿಜಯ ಮಹಾಂತೇಶ್ವರ ಕರ್ತು ಗದ್ದುಗೆಯಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ. ಈ ಜಾತ್ರಾ ಮಹೋತ್ಸವದ ಅಂಗವಾಗಿ ಆ.27ರಿಂದ ಒಂದು ವಾರಗಳ ಕಾಲ ವಿವಿಧ ನಾಟಕ, ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಆ.27ರಂದು ಗಾಂಧಿ ಚೌಕ್‌ದಲ್ಲಿಯ ಮಹಾಂತ ವೇದಿಕೆಯಲ್ಲಿ ಮುರಗೋಡದ ಎಸ್.ಬಿ.ಇವೆಂಟ್ಸ್‌ ತಂಡದವರಿಂದ ಜವಾರಿ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯದೆ.ಆ.28 ರಂದು ಸ್ವರ ಸಿಂಧು ಇಳಕಲ್ಲ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.

ಆ.31ರಂದು ಸಿದ್ದರಾಮ ಕೇಸಾಪುರ ಹಾಗೂ ಬೆಂಗಳೂರಿನ ಕಲರವ ಮ್ಯೂಜಿಕಲ್ ತಂಡದಿಂದ ಸುಗಮ ಸಂಗೀತ, ಸೆ.1 ರಂದು ಕರಡಿ ಗಾನ ಗಂಧರ್ವ ತಂಡದಿಮದ ರಸಮಂಜರಿ, 2 ರಂದು ಚಲನ ಚಿತ್ರ ಸಂಗೀತಗಾರ ರವಿಂದ್ರ ಸೊರೆಗಾವಿ ತಂಡದಿಂದ ತತ್ವ ರಸಾನುಭವ ಸಂಗೀತ ಹಾಗೂ ರಾತ್ರಿ 8.30 ಗಂಟೆಗೆ ಕಂಠಿ ವೃತ್ತದಲ್ಲಿ ರಕ್ತ ರಾತ್ರಿ ನಾಟಕ ಪ್ರದರ್ಶನಗೊಳ್ಳಿದೆ. ರಾತ್ರಿ 12.30 ಗಂಟೆಗೆ ನಗೆ ಹಬ್ಬ, ರಾತ್ರಿ 10.30 ಗಂಟೆಗೆ ವೀರ ಸಿಂಧೂರ ಲಕ್ಷ್ಮಣ ನಾಟಕ, ರಾತ್ರಿ 12.30 ಗಂಟೆಗೆ ಮಂಜುಳಾ ಮೇಲೋಡಿಸ್‌ ಇವರಿಂದ ರಸ ಮಂಜರಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸೆ.4ರ ಬೆಳಿಗ್ಗೆ 10 ಗಂಟೆಗೆ ಬಸವನಗುಡಿ ಮುಂದೆ ಸುಗಮ ಸಂಗೀತ ನಡೆಯಲಿದೆ. ಈ ಮೂರು ದಿನ ಕಂಠಿ ವೃತ್ತದಲ್ಲಿರುವ ವಿಜಯ ಮಹಾಂತೇಶ್ವರ ಅನುಭವ ಮಂಟಪದಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆಂದು ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತರುಣ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ, ಮಂಜುನಾಥ ಬೆಳವಣಕಿ, ಮಹಾಂತೇಶ ಹೋಳಿ, ಈರಪ್ಪ ಬಿಂಜವಾಡಗಿ, ಪರಶುಶರಾಮ ಮೂಲಿಮನಿ ಇತರರು ಇದ್ದರು.