ಕನ್ನಡ ಸಂಸ್ಕೃತಿ ಇಲಾಖೆ ಕಚೇರಿಗಷ್ಟೇ ಸೀಮಿತ: ಪ್ರಕಾಶ್‌ ವಿಷಾದ

| Published : Apr 01 2024, 12:48 AM IST

ಕನ್ನಡ ಸಂಸ್ಕೃತಿ ಇಲಾಖೆ ಕಚೇರಿಗಷ್ಟೇ ಸೀಮಿತ: ಪ್ರಕಾಶ್‌ ವಿಷಾದ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎನ್ನುವುದು ಕೇವಲ ಕಚೇರಿಗಷ್ಟೇ ಸೀಮಿತವಾಗಿದೆ. ಅದರಂತೆಯೇ ಅಲ್ಲಿನ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ರಾಮಾಯಣ, ಮಹಾಭಾರತ, ಜಾನಪದದ ಬಗ್ಗೆ ಕಾವ್ಯ ಮತ್ತು ಗದ್ಯದ ರೂಪದಲ್ಲಿ ಪಠ್ಯಪುಸ್ತಕಗಳಲ್ಲಿ ಕೊಡುತ್ತಿದ್ದರು, ಅದನ್ನು ಗುರುಗಳು ಹೇಳುತ್ತಿದ್ದರು. ಇದನ್ನು ಆಲಿಸಿದ ಮಕ್ಕಳಿಗೆ ಸಮಾಜದ ಅರಿವು ಸಿಗುತ್ತಿತ್ತು, ಗುರು ಹಿರಿಯರಲ್ಲಿ ಭಯ ಭಕ್ತಿ ಎನ್ನುವುದು ಇತ್ತು, ಈ ಆಧುನಿಕ ಪ್ರಪಚಂದಲ್ಲಿ ಎಲ್ಲವೂ ಮರೆಯಾಗಿರುವುದು ಬೇಸರ ತರಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಂಗಭೂಮಿಯನ್ನು ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ, ಇನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೇವಲ ಕಚೇರಿಗಷ್ಟೇ ಸೀಮಿತವಾಗಿದೆ ಎಂದು ಹಿರಿಯ ರಂಗಕರ್ಮಿ ಪ್ರಕಾಶ್ ವಿಷಾದಿಸಿದರು.

ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ವತಿಯಿಂದ ನಗರದ ಹೊಸಹಳ್ಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ರಾಜ್ಯ ಮಟ್ಟದ ರಂಗಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎನ್ನುವುದು ಕೇವಲ ಕಚೇರಿಗಷ್ಟೇ ಸೀಮಿತವಾಗಿದೆ. ಅದರಂತೆಯೇ ಅಲ್ಲಿನ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ರಾಮಾಯಣ, ಮಹಾಭಾರತ, ಜಾನಪದದ ಬಗ್ಗೆ ಕಾವ್ಯ ಮತ್ತು ಗದ್ಯದ ರೂಪದಲ್ಲಿ ಪಠ್ಯಪುಸ್ತಕಗಳಲ್ಲಿ ಕೊಡುತ್ತಿದ್ದರು, ಅದನ್ನು ಗುರುಗಳು ಹೇಳುತ್ತಿದ್ದರು. ಇದನ್ನು ಆಲಿಸಿದ ಮಕ್ಕಳಿಗೆ ಸಮಾಜದ ಅರಿವು ಸಿಗುತ್ತಿತ್ತು, ಗುರು ಹಿರಿಯರಲ್ಲಿ ಭಯ ಭಕ್ತಿ ಎನ್ನುವುದು ಇತ್ತು, ಈ ಆಧುನಿಕ ಪ್ರಪಚಂದಲ್ಲಿ ಎಲ್ಲವೂ ಮರೆಯಾಗಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು.

ಕ್ರಿಕೆಟ್, ಹಾಕಿ, ಬಾಡ್ಮಿಂಟನ್, ಕಬಡ್ಡಿ, ಫುಟ್ಬಾಲ್ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿದೆ, ಆದರೆ ರಂಗಭೂಮಿಯನ್ನು ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ, ರಾಜ್ಯ ಸರ್ಕಾರವು ತೆಗೆದುಕೊಂಡು ಹೋಗುವುದರಲ್ಲಿ ಹಿಂದೆ ಬಿದ್ದಿದೆ, ಶಾಲಾ ಹಂತದಲ್ಲಿ ಮಹಾಭಾರತ, ರಾಮಯಾಣದ ಬಗ್ಗೆ ಗದ್ಯ ಮತ್ತು ಪದ್ಯದ ಭಾಗಗಳನ್ನು ತರುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಸಂಸ್ಕಾರ ಬಿತ್ತುವ ಕೆಲಸ ಆಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ರಂಗಭೂಮಿಯು 1962ರಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ, ಆದರೆ ಇದು ಇನ್ನೂ ಸಹ ಆರಂಭದ ಹಂತದಲ್ಲಿಯೇ ಇರುವುದು ವಿಪರ್ಯಾಸ? ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ರಂಗಭೂಮಿ ಮೂಲಕ ಆಲೂರು ವೆಂಕಟರಾಯರು, ಹುಯಿಲಗೊಳ ನಾರಾಯಣರಾಯರು ಬೀದಿ ನಾಟಕದ ಮೂಲಕ ಏಕೀಕರಣಕ್ಕೆ ಬೀದಿ ನಾಟಕದ ಮೂಲಕ ಏಕೀಕರಣದಲ್ಲಿ ಕರ್ನಾಟಕ ರಾಜ್ಯ ತರುವಲ್ಲಿಯೂ ಇವರ ಪಾತ್ರವಿದೆ, ಆಳುವ ಸರ್ಕಾರಗಳು ರಂಗಭೂಮಿಗೆ ಅವಕಾಶಗಳನ್ನು ಹೆಚ್ಚು ನೀಡಬೇಕು ಎಂದು ಆಗ್ರಹಿಸಿದರು.

ಪಿಟೀಲು ಚೌಡಯ್ಯ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಪಿಟೀಲು ನುಡಿಸುವ ಅಥವಾ ಅಭ್ಯಾಸ ಮಾಡುವ ಸಂದರ್ಭದಲ್ಲಿ ಅಲ್ಲಿನ ಹೂವಿನ ಗಿಡಗಳು ಬಾಗಿ ಸಂಗೀತವನ್ನು ಆಲಿಸುತ್ತಿದ್ದವು. ಅಂದರೆ ಸಸ್ಯಗಳಿಗೂ ಕೂಡ ಸಂಗೀತ ಜ್ಞಾನವಿದೆ. ಸುಮಾರು 860 ವರ್ಷಗಳ ಹಿಂದೆಯೇ ಪ್ರಕೃತಿಗೂ ಸಂಗೀತ ಜ್ಞಾನವಿದೆ ಎಂಬುದನ್ನು ಸಹ ನಾವು ಕೇಳಿದ್ದೇವೆ. ಅಶ್ವಘೋಷ ಎಂಬ ಮಹಾಕವಿ ವೇಣಿ ಸಂಹಾರ ಎಂಬ ಅಸ್ಸಾಂ ನಾಟಕವನ್ನು ಪರಿಚಯಿಸಿದ್ದರು, ಭಾರತ ದೇಶದಲ್ಲಿ ಬಯಲಾಟ, ಜಾನಪದ ಕಲೆ, ರಂಗಭೂಮಿ ಶುರುವಾಯಿತು, ಇದರಲ್ಲಿ ದೃಶ್ಯ ಮಾಧ್ಯಮ, ಪದಪುಂಜಗಳು ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲಾಯತು ಎಂದು ವಿವರಿಸಿದರು.

ಪ್ರೌಢಶಾಲೆವರೆಗೆ ರಂಗಭೂಮಿ, ಮಹಾಭಾರತ, ರಾಮಯಾಣದ ಬಗ್ಗೆ ಗದ್ಯ ಮತ್ತು ಪದ್ಯದ ಭಾಗಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಸಂಸ್ಕಾರವನ್ನು ಬಿತ್ತುವ ಕೆಲಸ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ, ಪೌರಾಣಿಕ ನಾಟಕ ಪ್ರದರ್ಶನಕ್ಕೆ 1 ಲಕ್ಷದವರೆಗೂ ಅನುದಾನ ನೀಡಿ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಮತ್ತಿಕೆರೆ ಜಯರಾಂ ಮಾತನಾಡಿ, ರಂಗಭೂಮಿ ಕ್ಷೇತ್ರವನ್ನು ಉಳಿಸಲು ಹಲವು ಹಿರಿಯ ಕಲಾವಿದರು ಮುಂದಾಗಿದ್ದಾರೆ, ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ ಸಿಗಬೇಕು. ಕಲಾವಿದರು ಎರಡು ಮೂರು ತಿಂಗಳು ತಪಸ್ಸಿನಂತೆ ಕಲಿಯುವ ಮೂಲಕ ನಂತರ ಪ್ರದರ್ಶಿಸುವುದೇ ಒಂದು ರಚನಾತ್ಮಕತೆ ಇದೆ, ಅಂತಹ ಕಲೆಗಳು ಉಳಿದು ಬೆಳಗುವ ಕೆಲಸವು ಆಗಬೇಕು, ಅದೇರಿತಿ ಕಲಾವಿದರಿಗೂ ನೆರವು ಸಿಗುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಕಾವ್ಯಶ್ರೀ ರಮೇಶ್, ಮಕ್ಕಳ ತಜ್ಞ ಡಾ.ರಮೇಶ್, ಡಾ.ಎ.ವಿ.ಉಮೇಶ, ರಂಗ ನಿರ್ದೇಶಕರಾದ ಕೃಷ್ಣರಾಜು, ಗುರುಮೂರ್ತಾಚಾರ್, ಕಲ್ಕೆರೆ ನರಸಿಂಹಮೂರ್ತಿ, ಪುಟ್ಟಣ್ಣ, ಕಲಾವಿದರಾದ ಎಚ್.ಕೆ.ಶಂಕರೇಗೌಡ, ಡಿ.ನಾಗೇಶ್, ದೊಡ್ಡಯ್ಯ, ಬಸವಲಿಂಗಚಾರ್, ಕೆ.ರಾಮಲಿಂಗೇಗೌಡ, ಬಿ.ಚಿಕ್ಕಸಿದ್ದಯ್ಯ ಭಾಗವಹಿಸಿದ್ದರು.