ಸಾರಾಂಶ
ಹೊಸಕೋಟೆ: ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಒಬ್ಬ ಮೃತಪಟ್ಟಿರುವ ಘಟನೆ ಆವಲಹಳ್ಳಿ ಬೆಸ್ಕಾಂ ವ್ಯಾಪ್ತಿಯ ಚೀಮಸಂದ್ರ ಗ್ರಾಮದಲ್ಲಿ ನಡೆದಿದೆ.
ಹೊಸಕೋಟೆ: ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಒಬ್ಬ ಮೃತಪಟ್ಟಿರುವ ಘಟನೆ ಆವಲಹಳ್ಳಿ ಬೆಸ್ಕಾಂ ವ್ಯಾಪ್ತಿಯ ಚೀಮಸಂದ್ರ ಗ್ರಾಮದಲ್ಲಿ ನಡೆದಿದೆ. ಲೈನ್ ಮ್ಯಾನ್ ಸಿದ್ದರಾಜು(40) ಮೃತಪಟ್ಟ ಬೆಸ್ಕಾಂ ನೌಕರ. ಚೀಮಸಂದ್ರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸಮಸ್ಯೆ ಇದ್ದ ಕಾರಣ ಗ್ರಾಮಸ್ಥರು ಬೆಸ್ಕಾಂ ಕಚೇರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಲೈನ್ ಮ್ಯಾನ್ ಸಿದ್ದರಾಜ್ ಬೆಳಿಗ್ಗೆ 9 ಗಂಟೆಯಲ್ಲಿ ಗ್ರಾಮಕ್ಕೆ ತೆರಳಿ ಪರಿವರ್ತಕ ಸರಿಪಡಿಸಲು ಹೋದಾಗ ವಿದ್ಯುತ್ ಶಾಕ್ ಆಗಿ ಕೆಳಗೆ ಬಿದ್ದಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೆ ಸಾವನಪ್ಪಿದ್ದಾನೆ. ಇನ್ನು ಮೃತದೇಹವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದ್ದು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಮಗ್‌ಶಾಟ್ ಫೋಟೋ ಮಾತ್ರ)