ಕನ್ನಡಪ್ರಭ ವಾರ್ತೆ ಇಳಕಲ್ಲಇಂದಿನ ದಿನಗಳಲ್ಲಿ ಮನುಷ್ಯರ ಮನಸ್ಸು ಜಂಜಡಿತವಾಗುತ್ತಿದೆ. ಮನಸ್ಸಿನ ನಿಯಂತ್ರಣಕ್ಕೆ ಅಥವಾ ಮನಃಶುದ್ಧಿಗೆ ಪ್ರತಿ ದಿನಾಲು ಹತ್ತು ನಿಮಿಷವಾದರು ನಾವು ಲಿಂಗಪೂಜೆ ಮಾಡುತ್ತಿದ್ದರೆ ನಮ್ಮ ಕುಲಸಿತಗೊಂಡ ಮನಸ್ಸು ಪರಿಶುದ್ಧವಾಗುವುದು ಎಂದು ಡಾ.ಗುರುಮಹಾಂತ ಶ್ರೀಗಳು ನುಡಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದಿನ ದಿನಗಳಲ್ಲಿ ಮನುಷ್ಯರ ಮನಸ್ಸು ಜಂಜಡಿತವಾಗುತ್ತಿದೆ. ಮನಸ್ಸಿನ ನಿಯಂತ್ರಣಕ್ಕೆ ಅಥವಾ ಮನಃಶುದ್ಧಿಗೆ ಪ್ರತಿ ದಿನಾಲು ಹತ್ತು ನಿಮಿಷವಾದರು ನಾವು ಲಿಂಗಪೂಜೆ ಮಾಡುತ್ತಿದ್ದರೆ ನಮ್ಮ ಕುಲಸಿತಗೊಂಡ ಮನಸ್ಸು ಪರಿಶುದ್ಧವಾಗುವುದು ಎಂದು ಡಾ.ಗುರುಮಹಾಂತ ಶ್ರೀಗಳು ನುಡಿದರು.

ನಗರದ ವಿಜಯ ಮಹಾಂತೇಶ್ವರ ಶ್ರೀಮಠದ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಶ್ರೀಮಠದ ಬಸವ ದಾಸೋಹ ಭವನದಲ್ಲಿ ಏರ್ಪಡಿಸಿದ್ದ ಸಹಜ ಶಿವಯೋಗ ಶಿಭರದ ದಿವ್ಯ ಸಾನ್ನಿಧ್ಯ ವಹಿಸಿ ಸಾವಿರಾರು ಭಕ್ತರೊಂದಿಗೆ ತಮ್ಮ ಲಿಂಗಪೂಜೆ ನೇರವೇರಿಸಿ ಮಾತನಾಡಿದರು.

ಆದಿ ಕಾಲದಿಂದಲೂ ಹಿಂದಿನ ಶರಣರು ಲಿಂಗಪೂಜೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತನ್ಮಯರಾಗಿ ದೇವರನ್ನು ಕಾಣುತಿದ್ದರು. ಆದರೆ, ಇಂದು ಅಂತ ಕಠಿಣ ಲಿಂಗಪೂಜೆ ಮಾಡಲು ನಿಮಗೆ ಸಮಯವಿಲ್ಲ ಎನ್ನುವ ತಾಯಂದಿರು ಬ್ಯೂಟಿ ಪಾರ್ಲರನಲ್ಲಿ 2 ಗಂಟೆ ತಮ್ಮ ಸೌಂದರ್ಯಕ್ಕಾಗಿ ಮೀಸಲಿಡುತ್ತಾರೆ. ಜೀವನದಲ್ಲಿ ಎಲ್ಲವೂ ಬೇಕು. ಆದರೆ, ಮನಶುದ್ಧಿಗೆ ಮತ್ತು ಜೀವನ ಸುಧಾರಣೆಗೆ ಲಿಂಗಪೂಜೆ ಅಗತ್ಯವಾಗಿದೆ. ಐದು ಸಾವಿರಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಶ್ರೀಗಳೊಂದಿಗೆ ಸಾಮೂಹಿಕ ಲಿಂಗಪೂಜೆ ಮಾಡಿಕೊಂಡರು.

ಗುರುಮಹಾಂತ ಶ್ರೀಗಳ ಜತೆ ಶಿರೂರಿನ ಡಾ.ಬಸವಲಿಂಗ ಶ್ರೀಗಳು ಹಾಗು ಇತರ ಶ್ರೀಗಳು ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿನಯಾ ಹರಿಹರ ಹಾಗೂ ಗಣೇಶ ರಾಯಬಾಗಿ ವಚನ ಹಾಡಿದರು. ಮಲ್ಲಯ್ಯ ಗಣಾಚಾರಿ ಅವರು ಲಿಂಗಪೂಜೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.