ಶ್ರಮ, ಶ್ರದ್ಧೆ, ತನು-ಮನ, ಧನದಿಂದ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳದು ಬದ್ಧತೆ ಕಾಪಾಡಲು ಸಾಧ್ಯವಾಗಿದೆ. ಸಾಕಷ್ಟು ಮಹನಿಯರ ಶ್ರಮದಿಂದ ಕೆಎಲ್ಇ ಸಂಸ್ಥೆ ಬಹಳ ಶ್ರೇಷ್ಠ ಕಾರ್ಯ ಮಾಡಿದೆ. ಅಥಣಿ ಮುರಘೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಯೋಗ್ಯ ಗುರುವಿನ ಪ್ರೇರಣೆಯಿಂದಾಗಿ ಲಿಂಗರಾಜರು ತ್ಯಾಗವೀರ ಸಿರಸಂಗಿ ಲಿಂಗರಾಜ ಎನಿಸಿಕೊಂಡರು. ಸಂಸ್ಥೆಯ ಮಹಾನ್‌ ದಾನಿಗಳ ಪೈಕಿ ಲಿಂಗರಾಜರು ಒಬ್ಬರು. ಸಂಸ್ಥೆ ಜಾಗತಿಕ ಮನ್ನಣೆ ಪಡೆಯಲು ಲಿಂಗರಾಜರು ಸಹ ಕಾರಣವಾಗಿದ್ದಾರೆ ಎಂದು ಡಾ.ಎನ್.ಪಿ. ನಾಡಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಅಂಗ ಸಂಸ್ಥೆಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜ ೧೬೫ನೇ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ಲಿಂಗರಾಜರು ಬರಗಾಲದಲ್ಲಿ ಕೆರೆ ಕಟ್ಟಿಸಿದ್ದಾರೆ. ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಸರ್ವಧರ್ಮ ಸಮಾನತೆ ಕಾಪಾಡಿದವರು. ಎಲ್ಲಾ ಧರ್ಮದ ಧಾರ್ಮಿಕ ಕಾರ್ಯಗಳಿಗೆ ದಾನ ನೀಡಿದವರು. ಧನಾತ್ಮಕ ಆಲೋಚನೆಯಿಂದ ಹೃದಯ ಶ್ರೀಮಂತಿಕೆ ಹೊಂದಿದವರು. ತಮಗಾಗಿ ಏನು ಮಾಡಿಕೊಳ್ಳದೆ ಎಲ್ಲವನ್ನೂ ಸಮಾಜಕ್ಕೆ ದಾನ ಮಾಡಿದವರು ತ್ಯಾಗರಾಜರು ಎಂದು ಬಣ್ಣಿಸಿದರು.

ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್. ಐ. ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗರಾಜರು ತಮ್ಮ ಸಮಸ್ತ ಅಸ್ತಿ ದಾನ ಮಾಡಿದರು. ಲಿಂಗರಾಜ ಟ್ರಸ್ಟ್ ವತಿಯಿಂದ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ. ತಮ್ಮ ಅಸ್ತಿಯನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನವಾಗಿ ನೀಡಿದವರು. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯಾಗಲು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಲಿಂಗರಾಜರು ಆದರ್ಶವಾಗಿದ್ದಾರೆ. ನಮ್ಮ ಆದಾಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ದಾನ ಮಾಡಿದರೆ ಈ ಕಾರ್ಯಕ್ರಮ ಸಾರ್ಥಕವಾದಂತೆ ಎಂದು ಹೇಳಿದರು.

ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ಎನ್.ಬಿ. ಪಾಟೀಲ ಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಉಪ ಪ್ರಾಚಾರ್ಯ ಬಿ.ಎನ್. ಅರಕೇರಿ, ಸಂತೋಷ ಹುದ್ದಾರ, ಐಟಿಐ ಪ್ರಾಚಾರ್ಯ ಎಸ್.ಎಸ್. ಅಂಗಡಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಅಮಿತ ಚಮಕೇರಿ, ಸ್ಥಳೀಯ ಅಂಗ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಫ್‌.ಆರ್. ಅಜಿಮಠ ಹಾಗೂ ಜಿ.ಬಿ. ಹಿರೇಮಠ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಲ್. ಬಿ. ತುಪ್ಪದ ವಂದಿಸಿದರು.