ಸಾರಾಂಶ
- ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಆಗಮನದ ಶತಮಾನೋತ್ಸವ, ನೂತನ ಮಹಾದ್ವಾರ, ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ನಿವಾಸದ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಅಜ್ಜಂಪುರಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದ ಜೊತೆಗೆ ಆರೋಗ್ಯ ಮತ್ತು ಶಿಕ್ಷಣ ರಂಗಕ್ಕೆ ವೀರಶೈವ, ಲಿಂಗಾಯತ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿಯಲ್ಲಿ ಭಾನುವಾರ ನಡೆದ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಆಗಮನದ ಶತಮಾನೋತ್ಸವ ಹಾಗೂ ನೂತನ ಮಹಾದ್ವಾರ ಮತ್ತು ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ನಿವಾಸದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅನ್ನ, ಆಶ್ರಯ, ಅಕ್ಷರ ಎಂಬ ತ್ರಿವಿಧ ದಾಸೋಹದ ಮೂಲಕ ಎಲ್ಲ ಜಾತಿ, ಜನಾಂಗದವರಿಗೂ ಬೆಳಕು ನೀಡಿದ ಏಕೈಕ ಸಮಾಜ ವೀರಶೈವ, ಲಿಂಗಾಯತ ಸಮಾಜ ಎಂದು ಹೇಳಿದರು.ಲಿಂ.ಶ್ರೀ ಸಿದ್ಧಲಿಂಗ ಜಗದ್ಗುರು ಜಗವನುದ್ಧರಿಸಲು ಅವತರಿಸಿದ ಯುಗ ಪುರುಷರು. ಶಿವಾದ್ವೈತ ಸಿದ್ಧಾಂತದ ಅರಿವು ಆದರ್ಶಗಳನ್ನು ಜನಮನಕ್ಕೆ ತಲುಪಿಸುವಲ್ಲಿ ಅವರ ಕಾರ್ಯ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಅಂಗ ಅವಗುಣ ತೊಲಗಿಸಿ ಲಿಂಗ ಗುಣ ಬೆಳೆಸಲು ಶ್ರಮಿಸಿದ ಅವರು, ನೊಂದವರ ಬೆಂದವರ ಬಾಳಿಗೆ ತಮ್ಮ ಶಿವಯೋಗ ಶಕ್ತಿ ಮೂಲಕ ಪರಿಹಾರ ಕೊಟ್ಟವರು ಎಂದರು.ಇಂದು ಯುವ ಜನರು ಅಜ್ಞಾನದ ಅಂಧಕಾರದಲ್ಲಿ ಮುಳುಗಿ, ದೈವ, ಆಚಾರ, ಶರಣ ಸಂಸ್ಕೃತಿ ಮರೆತು, ಪಾಶ್ಚಿಮಾತ್ಯರ ಅನುಕರಣೆ ಮಾಡುತ್ತಾ, ನಶೆ, ಮದ್ಯವ್ಯಸನ, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇಂತಹ ಮಹಾನುಭಾವರ ಸ್ಮರಣೋತ್ಸ ವಗಳು ನಮ್ಮ ಹಿರಿಯರ ಅನುಕರಣೀಯ ಜೀವನದ ಬಗ್ಗೆ ಪರಿಚಯ ಮಾಡಿಸುತ್ತವೆ. ಆ ಮೂಲಕ ಯುವಜನರಿಗೆ ಸರಿ ದಾರಿ ತೋರುತ್ತವೆ ಎಂದರು.ಇಂದಿನ ಯುವಜನರು ಮಹಾಪುರುಷರ ಜೀವನ ಚರಿತ್ರೆ ಓದಿದರೆ ಅವರಲ್ಲಿ ಹೊಸ ಚೈತನ್ಯ ಮೂಡುತ್ತದೆ. ಸಮಾಜಕ್ಕೆ ತಾವೂ ಏನಾದರೂ ಮಾಡಬೇಕು ಎಂಬ ಛಲ ಬೆಳೆಯುತ್ತದೆ. ಆ ಮೂಲಕ ಅವರು ಸತ್ಪ್ರಜೆಗಳಾಗುತ್ತಾರೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.ಎಲ್ಲರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸುತ್ತಿರುವ ಸಮಾಜ ನಮ್ಮದು. ನಮ್ಮ ಹಿರಿಯರ ಹಿರಿಮೆಯನ್ನಷ್ಟೇ ಕೊಂಡಾಡದೆ. ಇಂದು ನಾವು ಸಾಧಕರಾಗಿ ನಮ್ಮನ್ನು ಜಗತ್ತು ಸ್ಮರಿಸುವಂತೆ ಬಾಳೋಣ. ವೀರಶೈವ ಲಿಂಗಾಯತ ಸಮಾಜದ ಹಿರಿಮೆ ಜಗತ್ತಿಗೆ ತಿಳಿಸಬೇಕು ಎಂದರು.ತಾವು ಕಾಡಿಲ್ಲದ ಕಲ್ಯಾಣ ಕರ್ನಾಟಕ ಭಾಗದ ಬೀದರ್ ನಿಂದ ಬಂದಿದ್ದೇನೆ. ಹಚ್ಚ ಹಸಿರಿನ ವನಸಿರಿ ನಡುವೆ ಜೀವಿಸುತ್ತಿ ರುವ ನೀವೆಲ್ಲರೂ ಧನ್ಯರು ಎಂದು ಹೇಳಿದರು.
ಪಶ್ಚಿಮಘಟ್ಟಗಳು ಜೀವವೈವಿಧ್ಯತೆ ತಾಣವಾಗಿವೆ. ಹಲವು ನದಿಗಳ ಉಗಮಸ್ಥಳವಾಗಿದೆ. ಮಳೆ ಮಾರುತ ತಡೆದು ದೇಶಾ ದ್ಯಂತ ಮಳೆ ಸುರಿಯಲು ಸಹಕರಿಸುತ್ತವೆ. ಶೋಲಾ ಅರಣ್ಯಗಳು ತಮ್ಮಲ್ಲಿ ನೀರು ಹಿಡಿದಿಟ್ಟುಕೊಂಡು ವರ್ಷವಿಡೀ ನದಿಗಳು ಹರಿಯುವಂತೆ ಮಾಡುತ್ತವೆ. ಇಂತಹ ಪಶ್ಚಿಮಘಟ್ಟದ ಮಡಿಲಲ್ಲಿ ವಾಸಿಸುವ ನೀವು ಅದರ ಸಂರಕ್ಷಣೆ ಮಾಡಬೇಕು ಎಂದರು.ಸಮಾರಂಭದಲ್ಲಿ ಶಾಸಕ ಶ್ರೀನಿವಾಸ್, ಬಾಳೆಹೊನ್ನೂರಿನ ರಂಭಾಪುರಿ ಮಠದ ಶ್ರೀ ಪ್ರಸನ್ನ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು, ಲಿಂಗಾಯತ ವೀರಶೈವ ಸಮಾಜದ ಮುಖಂಡರು ಉಪಸ್ಥಿತರಿದ್ದರು. 23 ಕೆಸಿಕೆಎಂ 3ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿಯಲ್ಲಿ ಭಾನುವಾರ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಆಗಮನದ ಶತಮಾನೋತ್ಸವ ಹಾಗೂ ನೂತನ ಮಹಾದ್ವಾರ ಮತ್ತು ಶ್ರೀ ರಂಬಾಪುರಿ ಜಗದ್ಗುರು ವೀರಗಂಗಾಧರ ನಿವಾಸದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಚಿವ ಈಶ್ವರ ಖಂಡ್ರೆ, ಶಾಸಕ ಶ್ರೀನಿವಾಸ್ ಹಾಗೂ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))