ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ವಿಶ್ವವ್ಯಾಪಿ: ದೇವೇಗೌಡ

| Published : Jul 09 2024, 12:57 AM IST

ಸಾರಾಂಶ

ಸೇವಾ ಮತ್ತು ಸ್ನೇಹಪರತೆಯೇ ಲಯನ್ಸ್ ಸಂಸ್ಥೆಗಳ ಪ್ರಮುಖ ಧ್ಯೇಯವಾಗಿದೆ. ಇಡೀ ಭಾರತ ದೇಶದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಅತ್ಯಧಿಕ ಲಯನ್ಸ್ ಸಂಸ್ಥೆಯ ತಂಡಗಳು, ಸದಸ್ಯರ ಸೇವಾ ಕಾರ್ಯ ಸಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ವಿಶ್ವವ್ಯಾಪ್ತಿಯಾಗಿವೆ. ವಿಶ್ವಸಂಸ್ಥೆಯು ಪ್ರಶಂಸೆ ವ್ಯಕ್ತಡಿಸುವಷ್ಟು ಸೇವಾ ಚಟುವಟಿಕೆಗಳು ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ವಿಶ್ವವ್ಯಾಪ್ತಿಯಾಗಿವೆ. ವಿಶ್ವಸಂಸ್ಥೆಯು ಪ್ರಶಂಸೆ ವ್ಯಕ್ತಡಿಸುವಷ್ಟು ಸೇವಾ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಸಲಹೆಗಾರ ಕೆ. ದೇವೇಗೌಡ ಹೇಳಿದರು.

ನಗರದಲ್ಲಿರುವ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ ೩೧೭ ಜಿ, ಪ್ರಾಂತ್ಯ ೯ ಹಾಗೂ ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಮತ್ತು ಮಂಡ್ಯ ಎಂಜಿನಿಯರ್ಸ್‌ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಪದಗ್ರಹಣ ಮತ್ತು ಪ್ರತಿಜ್ಞಾವಿಧಿ ಬೋಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸೇವಾ ಮತ್ತು ಸ್ನೇಹಪರತೆಯೇ ಲಯನ್ಸ್ ಸಂಸ್ಥೆಗಳ ಪ್ರಮುಖ ಧ್ಯೇಯವಾಗಿದೆ. ಇಡೀ ಭಾರತ ದೇಶದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಅತ್ಯಧಿಕ ಲಯನ್ಸ್ ಸಂಸ್ಥೆಯ ತಂಡಗಳು, ಸದಸ್ಯರ ಸೇವಾ ಕಾರ್ಯ ಸಾಗುತ್ತಿವೆ ಎಂದು ನುಡಿದರು.

ನಾವು ಜಿಲ್ಲಾ ರಾಜ್ಯಪಾಲನಾಗಿದ್ದ ಅವಧಿಯಲ್ಲಿ ೩ ಲಯನ್ಸ್ ತಂಡಗಳಿದ್ದವು, ಇಂದು ೪೨ ಸಂಸ್ಥೆಗಳಿವೆ. ಗ್ರಾಮೀಣ ರೈತಾಪಿ ಕುಟುಂಬಗಳೇ ಆವರಿಸಿಕೊಂಡಿರುವ ಆತ ರೈತಮಕ್ಕಳೇ ಸದಸ್ಯರಾಗಿ ಸೇವಾಕಾರ್ಯಕ್ಕೆ ನಾಂದಿಯಾಗಿದ್ದಾರೆ, ನೋಂದವರಿಗೆ, ಅಗತ್ಯಯುಳ್ಳವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.

ಮಂಡ್ಯ ಮಧುರ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷ ಎಂ.ವಿನಯ್ ಕುಮಾರ್, ನಮ್ಮೊಳಗೆ ಸೇವಾ ಮನೋಭಾವ ಚಿಕ್ಕಂದಿನಿಂದಲೇ ಹುಟ್ಟಿಕೊಂಡಿತು, ನಮ್ಮ ಸೇವಾಫಲವು ಇತರೆ ರಾಷ್ಟಗಳ ನಿರ್ಗತಿಕರಿಗೂ ತಲುಪಬೇಕು ಎನ್ನುವ ಹಂಬಲದಿಅದ ಲಯನ್ಸ್ ಸಂಸ್ಥೆಗೆ ಸೇರಿಕೊಂಡು ಉತ್ತಮ ಸೇವಾಚಟುವಟಿಕೆಗಳು ಜನರಿಗೆ ತಲುಪಿದವು ಎಂದು ನುಡಿದರು.

ನಮ್ಮ ನೂತನ ತಂಡದಿಂದ ಸರ್ಕಾರಿ ಶಾಲೆಗಳಿಗೆ ಸಾವಿರಾರು ರು. ವೆಚ್ಚದ ಮೈಕ್‌ಸೆಟ್, ವಾಟರ್‌ಫಿಲ್ಟರ್ ಮತ್ತು ಅಕ್ಕಿ ಮೂಟೆಗಳು, ಅಗತ್ಯಯುಳ್ಳವರಿಗೆ ಆರ್ಥಿಕ ನೆರವು ನೀಡುವ ಮೂಲಕ ಸೇವಾಕಾರ್ಯಕ್ಕೆ ಮುಂದಾಗಿದ್ದೇವೆ, ೨ ತಂಡಗಳ ಸೇವಾ ಚಟುವಟಿಕೆ ಸಾಗುತ್ತದೆ ಎಂದು ಹೇಳಿದರು.

ಗಣ್ಯರ ಸಮ್ಮುಖದಲ್ಲಿ ವಿವಿಧ ಸರ್ಕಾರಿ ಶಾಲೆಗಳಿಗೆ ಪರಿಕರ ಮತ್ತು ಅಗತ್ಯಯುಳ್ಳವರಿಗೆ ಆರ್ಥಿಕ ನೆರವು ನೀಡಲಾಯಿತು. ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಂಡ್ಯ ಮಧುರ ಲಯನ್ಸ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಸಿ.ತ್ಯಾಗರಾಜು, ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಡಾ. ಎನ್ ಕೃಷ್ಣೆಗೌಡ, ಒಂದನೇ ಉಪ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ್, ಎರಡನೇ ಜಿಲ್ಲಾ ಉಪರಾಜ್ಯಪಾಲ ಮತಿದೇವ ಕುರ್ಮಾ, ಮಂಡ್ಯ ಎಂಜಿನಿಯರ್ಸ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಿ.ಸಿ ಚಂದ್ರೇಗೌಡ, ಜಿಲ್ಲಾ ರಾಯಬಾರಿ ವಿ.ಹರ್ಷ, ಸಂಪುಟ ಖಜಾನ್ಸಿ ಪುನೀತ್‌ಕುಮಾರ್, ವಿಶೇಷ ಕಾರ್ಯದರ್ಶಿ ಆನಂದ್, ಪ್ರಾಂತೀಯ ಅಧ್ಯಕ್ಷ ಶ್ರೀಧರ್, ವಲಯ ಅಧ್ಯಕ್ಷ ಕೆಂಪರಾಜು, ಅನಂತ್‌ಕುಮಾರ್, ಜೀವನ್‌ಕುಮಾರ್, ನಂದೀಶ್‌ಕುಮಾರ್, ದೇವೇಗೌಡ, ಮುತ್ತಗೆರೆ ಮಂಜು ಇತರರಿದ್ದರು.