ಹಿರಿಯ ನಾಗರಿಕರ ದಿನದ ಅಂಗವಾಗಿ ಲಯನ್ಸ್ ಗೌರವ

| Published : Aug 25 2025, 01:00 AM IST

ಸಾರಾಂಶ

ವಿಶ್ವ ಹಿರಿಯ ನಾಗರೀಕರ ದಿನದ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಕ್ಲಬ್‌ ಸದಸ್ಯರ ಕುಟುಂಬ ವರ್ಗದಲ್ಲಿ ೯೦ ವರ್ಷದಿಂದ ೯೫ ವರ್ಷ ವಯೋಮಿತಿಯಲ್ಲಿರುವ ಹಿರಿಯರನ್ನ ಅವರವರ ಸ್ವಗೃಹಗಳಿಗೆ ತೆರಳಿ ಸನ್ಮಾನಿಸುವ ಮೂಲಕ ಹೃದಯಪೂರ್ವಕವಾಗಿ ಗೌರವವನ್ನು ಸಮರ್ಪಿಸಲಾಯಿತು. ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ ಮತ್ತು ಹಿರಿಯ ಸ್ವತಂತ್ರ ಹೋರಾಟಗಾರರಾದ ಎಚ್.ಎಂ. ಶಿವಣ್ಣ ಹಾಗೂ ಇತರರನ್ನು ಇದೇ ಸಂದರ್ಭದಲ್ಲಿ ಅವರವರ ಸ್ವಗೃಹಕ್ಕೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು.

ಹಾಸನ: ವಿಶ್ವ ಹಿರಿಯ ನಾಗರೀಕರ ದಿನದ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಕ್ಲಬ್‌ ಸದಸ್ಯರ ಕುಟುಂಬ ವರ್ಗದಲ್ಲಿ ೯೦ ವರ್ಷದಿಂದ ೯೫ ವರ್ಷ ವಯೋಮಿತಿಯಲ್ಲಿರುವ ಹಿರಿಯರನ್ನ ಅವರವರ ಸ್ವಗೃಹಗಳಿಗೆ ತೆರಳಿ ಸನ್ಮಾನಿಸುವ ಮೂಲಕ ಹೃದಯಪೂರ್ವಕವಾಗಿ ಗೌರವವನ್ನು ಸಮರ್ಪಿಸಲಾಯಿತು.

ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ ಮತ್ತು ಹಿರಿಯ ಸ್ವತಂತ್ರ ಹೋರಾಟಗಾರರಾದ ಎಚ್.ಎಂ. ಶಿವಣ್ಣ ಹಾಗೂ ಇತರರನ್ನು ಇದೇ ಸಂದರ್ಭದಲ್ಲಿ ಅವರವರ ಸ್ವಗೃಹಕ್ಕೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್. ರಮೇಶ್, ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಹೆಚ್.ಆರ್. ಚನ್ನೇಗೌಡ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ, ದ್ವಿತೀಯ ಸೆಂಚೂರಿ ಲಯನ್ ಕೆ.ಆರ್. ಮಲ್ಲೇಶ್ ಗೌಡ, ವೆಂಕಟೇಗೌಡ ಇತರರು ಉಪಸ್ಥಿತರಿದ್ದರು.