ನಿಸ್ವಾರ್ಥ ಸೇವೆಗೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ: ಎಚ್.ಆರ್. ಹರೀಶ್‌

| Published : Jun 30 2024, 12:49 AM IST

ನಿಸ್ವಾರ್ಥ ಸೇವೆಗೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ: ಎಚ್.ಆರ್. ಹರೀಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಯಾವುದೇ ಫಲಾಪೇಕ್ಷೆಯಿಲ್ಲದೇ ಸೇವೆ ಮಾಡಬೇಕು ಎಂಬ ಮನೋಭಾವ ಇರುವವರಿಗೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ ಎಂದು ಲಯನ್ಸ್ ಮಾಜಿ ರಾಜ್ಯಪಾಲ ಎಚ್.ಆರ್. ಹರೀಶ್ ಹೇಳಿದ್ದಾರೆ.

ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯಾವುದೇ ಫಲಾಪೇಕ್ಷೆಯಿಲ್ಲದೇ ಸೇವೆ ಮಾಡಬೇಕು ಎಂಬ ಮನೋಭಾವ ಇರುವವರಿಗೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ ಎಂದು ಲಯನ್ಸ್ ಮಾಜಿ ರಾಜ್ಯಪಾಲ ಎಚ್.ಆರ್. ಹರೀಶ್ ಹೇಳಿದ್ದಾರೆ.

ನಗರದ ಲಯನ್ಸ್ ಭವನದಲ್ಲಿ ನಡೆದ ಪ್ರಸಕ್ತ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು. ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸೇವಾ ಸಂಸ್ಥೆಗಳಲ್ಲಿ ಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿದ್ದು, ಸೇವಾ ಮನೋಭಾವ ಇರುವವರು ಮಾತ್ರ ಲಯನ್ಸ್ ಸಂಸ್ಥೆಗೆ ಸೇರ ಬಹುದು. ಇದರಿಂದ ಲಾಭ ಮಾಡಬಹುದು ಎಂಬ ಕಲ್ಪನೆಯಿಂದ ಯಾರೂ ಈ ಸಂಸ್ಥೆಗೆ ಬರಬೇಡಿ ಎಂದು ಕಿವಿಮಾತು ಹೇಳಿದರು.

50 ವರ್ಷಗಳನ್ನು ಪೂರೈಸುತ್ತಿರುವ ಸೇವಾ ಸಂಸ್ಥೆಗಳಲ್ಲಿ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಕೂಡ ಒಂದು. ಈ ವರ್ಷದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮತ್ತವರ ತಂಡ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದು, ಸುವರ್ಣ ಮಹೋತ್ಸವ ಆಚರಣೆ ಸವಿ ನೆನಪಿಗೆ ಸುಮಾರು 40 ಲಕ್ಷ ರು. ವೆಚ್ಚದಲ್ಲಿ ಲಯನ್ಸ್ ಸಂಸ್ಥೆ ಹಿರಿಯರು ಹಾಗೂ ದಾನಿಗಳ ನೆರವಿನಿಂದ ಲಯನ್ಸ್ ಸುವರ್ಣ ಭವನ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಲಯನ್ಸ್ ಸಂಸ್ಥೆಗೆ ಒಂದು ಮಾದರಿಯಾಗಲಿದೆ ಎಂದು ತಿಳಿಸಿದರು. ಈ ವರ್ಷದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮತ್ತವರ ತಂಡ ಕಳೆದ ಒಂದು ವರ್ಷ ದಲ್ಲಿ 45 ಹೊಸ ಸದಸ್ಯರ ಸೇರ್ಪಡೆ ಲಯನ್ಸ್ ಸಂಸ್ಥೆಯ ಒಂದು ದೊಡ್ಡ ಸಾಧನೆ. ಇದರ ಜೊತೆಗೆ ಅರಣ್ಯ ಇಲಾಖೆಗೆ ಸೇರಿದ ೫೦ ಎಕರೆ ಭೂ ಪ್ರದೇಶದಲ್ಲಿ 4800 ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ನಿಭಾಯಿಸಿರುವುದು ಸಾಮಾನ್ಯ ಕೆಲಸವಲ್ಲ ಎಂದು ತಿಳಿಸಿದರು. ಲಯನ್ಸ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಅಸ್ಥಿತ್ವಕ್ಕೆ ಬಂದ ಲಯನ್ಸ್ ಕ್ಲಬ್ ತನ್ನ 49 ವರ್ಷಗಳನ್ನು ಪೂರೈಸಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದು, ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಇಲ್ಲಿ ಕೆಲಸ ಮಾಡಿದ ಹಿರಿಯ ಶ್ರಮ ಕಾರಣ. ಸುವರ್ಣ ಮಹೋತ್ಸವ ವರ್ಷದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ ಜಿ. ರಮೇಶ್ ಮತ್ತವರ ತಂಡದ ಕಾರ್ಯ ಶ್ಲಾಘನೀಯ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮಾತನಾಡಿ, ಯಾವುದೇ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಲು ಮುಂದೆ ಗುರಿ ಹಿಂದೆ ಗುರು ಇರಬೇಕು. ತಮ್ಮ ಅಧಿಕಾರ ಅವಧಿಯಲ್ಲಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಲು ಡಾ. ಜೆ.ಪಿ. ಕೃಷ್ಞೇಗೌಡ ಮತ್ತು ಲಯನ್ಸ್ ಮಾಜಿ ರಾಜ್ಯಪಾಲ ಎಚ್.ಆರ್. ಹರೀಶ್ ಮತ್ತು ಸಂಸ್ಥೆಯ ಹಿರಿಯರ ಸಲಹೆ, ಸಹಕಾರ ಕಾರಣ ಎಂದರು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಪುಷ್ಪರಾಜ್ ಮಾತನಾಡಿ, ತಮ್ಮ ಅಧಿಕಾರ ಅವಧಿಯಲ್ಲಿ ಕ್ಲಬ್‌ನ ಹಿರಿಯ ಸದಸ್ಯರ ಸಲಹೆ ಸಹಕಾರ ಪಡೆದು ಲಯನ್ಸ್ ಸಂಸ್ಥೆಯ ಹಾಗೂ ಈ ಸಂಸ್ಥೆಯಲ್ಲಿ ಕೆಲಸ ಮಾಡಿದ ಹಿರಿಯ ಆಶಯಗಳಿಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗೋಪಾಲಗೌಡ, ಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷ ಲಕ್ಷ್ಮಣಗೌಡ, ವಿಭಾಗೀಯ ಅಧ್ಯಕ್ಷ ಮಂಜುನಾಥ್‌ಗೌಡ, ವಲಯ ಅಧ್ಯಕ್ಷ ಬಿ.ಎನ್. ವೆಂಕಟೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಟಿ. ನಾರಾಯಣ ಸ್ವಾಮಿ ಕ್ಲಬ್‌ನ ವಾರ್ಷಿಕ ವರದಿ ಮಂಡಿಸಿದರು. ಸಂತೋಷ್ ಕ್ಲಬ್‌ನ ನೀತಿ ಸಂಹಿತೆ ಮಂಡಿಸಿದರು. ಹಿರಿಯರಾದ ಎಸ್.ಆರ್. ವೈದ್ಯ ನೂತನ ಪದಾಧಿಕಾರಿಗಳ ಪರಿಚಯ ನೀಡಿದರು. ಪ್ರಗತಿಪರ ಕೃಷಿಕ ಪ್ರಶಸ್ತಿ ಪಡೆದ ಲಕ್ಷ್ಮಣಗೌಡ, ಚುಟುಕು ಸಾಹಿತಿ ಗುರುರಾಜ್ ಆಲಮಠ, ಹಿರಿಯ ಪತ್ರಕರ್ತ ಜಿ.ಎಂ. ರಾಜಶೇಖರ್ ರನ್ನು ಸನ್ಮಾನಿಸಲಾಯಿತು. ಖಜಾಂಚಿ ಬಾಲಕೃಷ್ಣ ,ಲಯನ್ಸ್ ಸೇವಾ ಟ್ರಸ್ಟನ ಕಾರ್ಯದರ್ಶಿ ಪ್ರೊ. ಜಗದೀಶಪ್ಪ ಇದ್ದರು.ಪೋಟೋ ಫೈಲ್‌ ನೇಮ್‌ 29 ಕೆಸಿಕೆಎಂ 1ಚಿಕ್ಕಮಗಳೂರಿನ ಲಯನ್ಸ್‌ ಭವನದಲ್ಲಿ ನಡೆದ ಲಯನ್ಸ್‌ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹರೀಶ್ ಉದ್ಘಾಟಿಸಿದರು. ಜಿ. ರಮೇಶ್‌, ಟಿ. ನಾರಾಯಣಸ್ವಾಮಿ, ಡಾ. ಜೆ.ಪಿ.ಕೃಷ್ಣೇಗೌಡ, ಕೆ. ಪುಷ್ಪರಾಜ್‌ ಇದ್ದರು.