ಸಾರಾಂಶ
- ಮಧ್ಯಮ ವರ್ಗ ಬಳಕೆಯ ಕೆಲವು ಮದ್ಯ ದುಬಾರಿ । ಶೇ. 45ರಷ್ಟು ದರ ಏರಿಕೆ
ಆರ್. ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವರ್ಷಕ್ಕೊಮ್ಮೆ ಮದ್ಯದ ದರ ಏರಿಕೆ. ಇದು, ರಾಜ್ಯ ಸರ್ಕಾರದ ವಾಡಿಕೆ. ಆದರೆ, ಪ್ರಸಕ್ತ 8 ತಿಂಗಳಲ್ಲಿ ಎರಡು ಬಾರಿ ಕೆಲವು ಮದ್ಯದ ದರ ಏರಿಕೆಯಾಗಿದೆ. ಅಂದರೆ, ಸರಿ ಸುಮಾರು ಶೇ. 45 ರಷ್ಟು ಬೆಲೆ ಹೆಚ್ಚಳವಾಗಿದೆ.
ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆಯಾಗುತ್ತಿದ್ದಂತೆ ಏಪ್ರಿಲ್ ತಿಂಗಳಲ್ಲಿ ಮದ್ಯದ ದರ ಏರಿಕೆ ಮಾಡುವುದು ಸಂಪ್ರದಾಯ. 2023-24ರ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಬಜೆಟ್ ಮಂಡನೆಯಾಗುತ್ತಿದ್ದಂತೆ ಎಲ್ಲಾ ಮದ್ಯ ಮಾರಾಟ ಬೆಲೆಯನ್ನು ಸ್ಲ್ಯಾಬ್ ಆಧಾರದ ಮೇಲೆ ಸರಾಸರಿ ಶೇ. 20 ರಷ್ಟು ಏರಿಕೆ ಮಾಡಲಾಗಿತ್ತು.ಆದರೆ, ಇದೀಗ ಜನವರಿ 1 ರಿಂದ ಅನ್ವಯವಾಗುವಂತೆ ಕೆಲವು ಮದ್ಯಗಳ ದರ ಮತ್ತೆ ಏರಿಕೆ ಮಾಡಲಾಗಿದೆ. ಮತ್ತೆ ಶೇ. 25 ರಷ್ಟು ಏರಿಕೆಯಾಗಿದೆ. ಒಟ್ಟಾರೆ, ಶೇ. 45 ರಷ್ಟು ದರ ಏರಿಕೆಯಾಗಿದ್ದು, 125 ರುಪಾಯಿಯ 180 ಎಂ.ಎಲ್. ಮದ್ಯವನ್ನು ಓರ್ವ ವ್ಯಕ್ತಿ ಕುಡಿದರೆ ಅದರಲ್ಲಿ ಸರ್ಕಾರದ ಖಜಾನೆಗೆ 40-45 ರು. ಸೇರುತ್ತಿದೆ.
ಮಧ್ಯಮ ವರ್ಗ: ಸದ್ದಿಲ್ಲದೆ ಏರಿಕೆಯಾಗುತ್ತಿರುವ ಮದ್ಯ ದರದಿಂದ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ದರ ಏರಿಕೆ ಮದ್ಯದ ನಶೆಯನ್ನು ಇಳಿಸುತ್ತಿದೆ.ಪ್ರಮುಖವಾಗಿ ಓಲ್ಡ್ ಮಾಂಕ್, ಎಂಸಿ ರಮ್, ಬಿ.ಪಿ., ಓಟಿ., 8ಪಿಎಂ, ಆಫೀಸರ್ ಚಾಯ್ಸ್ ಬ್ರಾಂಡ್‌ಗಳ ದರ ಏರಿಕೆ ಯಾಗಿದೆ. ಮಧ್ಯಮ ವರ್ಗದವರು ಬಳಸುವ ಬ್ರಾಂಡ್‌ಗಳು ಇವುಗಳಾಗಿವೆ. ಎರಡನೇ ಬಾರಿ ಬೆಲೆ ಏರಿಕೆಯಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಓಲ್ಡ್ ಮಂಕ್, ಎಂಸಿ ರಮ್ ಬೆಲೆ 125 ರಿಂದ 160 ರು.ಗೆ ಏರಿಕೆಯಾಗಿತ್ತು. ದಿಢೀರ್ ದರ ಏರಿಕೆ ಮಾಡಿದ್ದರಿಂದ ವರ್ತಕರ ಹಾಗೂ ಮದ್ಯ ಪ್ರಿಯರ ನಡುವೆ ವೈನ್ ಸ್ಟೋರ್‌ಗಳಲ್ಲಿ ಚೌಕಾಸಿ, ವಾಗ್ವಾದಗಳು ಕಂಡು ಬರುತ್ತಿದ್ದವು. ಕಾರಣ, ಮದ್ಯದ ಬಾಟಲಿಗಳ ಮೇಲೆ ಮುದ್ರಿತವಾದ ಎಂಆರ್‌ಪಿ ಬೆಲೆಗೂ, ಮದ್ಯದ ಅಂಗಡಿಗಳಲ್ಲಿ ಕೇಳುತ್ತಿ ರುವ ಬೆಲೆಗೂ ವ್ಯತ್ಯಾಸ ಇದ್ದರಿಂದ ಗೊಂದಲ ಉಂಟಾಗಿತ್ತು.ಇದೀಗ ವಿಸ್ಕಿ ಬೆಲೆ 180 ಎಂ.ಎಲ್.ಗೆ 98 ರಿಂದ 125.50 ರು.ಗೆ ಏರಿಕೆಯಾಗಿದೆ. ಓಟಿ ಹಾಗೂ 8ಪಿಎಂ ದರ 98.50 ರು. ನಿಂದ 122.33 ರು.ಗೆ, ಆಫೀಸರ್ ಚಾಯ್ಸ್ ಮತ್ತು ಬಿಪಿ 125 ರು.ಗಳಿಂದ 160 ರು.ಗೆ ಏರಿಕೆಯಾಗಿದೆ.
ಓರಿಜಿನಲ್ ಚಾಯ್ಸ್ ಮದ್ಯವನ್ನು ತೀರ ಬಡವರು, ಅದರಲ್ಲೂ ಕೂಲಿ ಕಾರ್ಮಿಕರು ಸೇವಿಸುತ್ತಾರೆ. ಇನ್ನುಳಿದಂತೆ ಬಿಪಿ, ಓ.ಟಿ., 8 ಪಿಎಂ, ಆಫೀಸರ್ ಚಾಯ್ಸ್, ಓಲ್ಡ್ ಮಾಂಕ್, ಎಂ.ಸಿ. ರಮ್ ಮದ್ಯವನ್ನು ಕೂಲಿ ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗದವರು ಬಳಸುತ್ತಾರೆ. ಹಾಗಾಗಿ ಈ ವರ್ಗದವರಿಗೆ ಎರಡನೇ ಬಾರಿ ಮದ್ಯದ ದರ ಏರಿಕೆ ತೀವ್ರ ಪೆಟ್ಟು ನೀಡಿದೆ.ರಾಜ್ಯ ಸರ್ಕಾರ ಗ್ಯಾರಂಟಿಯ ಆರ್ಥಿಕ ಹೊರೆಯನ್ನು ಮದ್ಯ ಪ್ರಿಯರ ಮೇಲೆ ಹೊರಿಸುತ್ತಿದೆ. ಅಂದರೆ, ಮನೆಯ ಯಜಮಾನ ಕುಡಿಯುವ ಎಣ್ಣೆಯ ದುಡ್ಡನ್ನು ಯಜಮಾನಿಗೆ ಕೊಡಲಾಗುತ್ತಿದೆ ಎಂಬ ಅಪಹಾಸ್ಯದ ಮಾತುಗಳು ಸರ್ಕಾರದ ವಿರುದ್ಧ ಎಲ್ಲೆಡೆ ಕೇಳಿ ಬರುತ್ತಿದೆ.----- ಬಾಕ್ಸ್ -------
ಡಿಸ್ಟಿಲರಿಗಳಿಂದ ಧೋಖಾತೆರಿಗೆ, ವಿನಿಮಯ ಸುಂಕವನ್ನು ಗಣನೆಗೆ ತೆಗೆದುಕೊಂಡು ಸ್ಲ್ಯಾಬ್ ಆಧಾರದ ಮೇಲೆ ದರ ಏರಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಯುವುದು ವರ್ಷಕ್ಕೊಮ್ಮೆ. ಆದರೆ, ಮದ್ಯ ತಯಾರಿಸುವ ಕಂಪನಿ (ಡಿಸ್ಟಿಲರಿ)ಗಳು ಸರ್ಕಾರ ಮತ್ತು ಗ್ರಾಹಕ ರನ್ನು ವಂಚಿಸಲು ಅಡ್ಡದಾರಿಯಲ್ಲಿ ದಂಧೆ ನಡೆಸುತ್ತಿದ್ದಾರೆ. ತಮ್ಮದೆ ಬ್ರಾಂಡ್‌ನ ಮೂಲ ಹೆಸರಿನ ಜತೆಗೆ ಇನ್ನೊಂದು ಹೆಸರಿಟ್ಟು ಮನ ಬಂದಂತೆ ದರ ನಿಗದಿ ಮಾಡಿ ಮಾರುಕಟ್ಟೆಗೆ ಬಿಡುತ್ತಿವೆ. ಇಲ್ಲಿ ಸರ್ಕಾರಕ್ಕೆ ಮಾತ್ರವಲ್ಲ ಗ್ರಾಹಕರಿಗೂ ಧೋಖಾ ಮಾಡಲಾಗುತ್ತಿದೆ.
-----------------------------------------------------------------ಬ್ರಾಂಡ್. ಹಿಂದಿನ ದರ. ಈಗಿನ ದರ (180 ಎಂಎಲ್.ಗೆ)
------------------------------------------------------------------ವಿಸ್ಕ.98.50. 125.50 ರು.
------------------------------------------------------------------ಓಟಿ-8ಪಿಎಂ.98.50.122.33 ರು.
-------------------------- ---------------------------------ಆಫೀಸರ್ ಚಾಯ್ಸ್- ಬಿಪಿ.125.0.160.00 ರು.
--------------------------------------------------------------