ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಚುನಾವಣಾ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಸುನಂದ ಸೇರಿದಂತೆ ಸಿಬ್ಬಂದಿ ಪಟ್ಟಣದ ಹಲವಾರು ಮಧ್ಯದ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಕುಣಿಗಲ್: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಚುನಾವಣಾ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಸುನಂದ ಸೇರಿದಂತೆ ಸಿಬ್ಬಂದಿ ಪಟ್ಟಣದ ಹಲವಾರು ಮಧ್ಯದ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಕೆಲವು ಮಧ್ಯದಂಗಡಿಗಳ ಪಕ್ಕದಲ್ಲಿ ಮತ್ತೊಂದು ಅಂಗಡಿಯನ್ನು ಆರಂಭಿಸಿ ಅಕ್ರಮವಾಗಿ ಮಧ್ಯ ಸೇವನೆಗೆ ಅವಕಾಶ ನೀಡಿದ ಹಿನ್ನೆಲೆ ಹಲವಾರು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಯಿತು, ಈ ಸಂಬಂಧ ಮಾತನಾಡಿದ ಚುನಾವಣಾ ಅಧಿಕಾರಿ ಮಹೇಶ್, ಅಬಕಾರಿ ನಿಯಮ ಮತ್ತು ಚುನಾವಣಾ ನಿಯಮವನ್ನು ಮದ್ಯದಂಗಡಿ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ,