ನೂತನವಾಗಿ ಪ್ರಾರಂಭಗೊಂಡ ಸಂಸ್ಥೆ ಲಾಂಛನ ಅನಾವರಣ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬದುಕಿನ ಏಕೀಕರಣ, ಸತ್ಯ ಹಾದಿಯಲ್ಲಿ ಸಾಗುವುದು, ಜನತೆಯಲ್ಲಿ ಜಾಗೃತಿ ಮೂಡಿಸಲು ಲಿಸಾ ಫೌಂಡೇಷನ್‌ ಕೆಲಸ ನಿರ್ವಹಿಸಬೇಕು. ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಅತ್ಯುತ್ತಮ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ಸ್ವಾಮಿ ಭವನದಲ್ಲಿ ಭಾನುವಾರ ನೂತನವಾಗಿ ಪ್ರಾರಂಭಗೊಂಡ ಲಿಸಾ ಫೌಂಡೇಷನ್ ಸಂಸ್ಥೆ ಲಾಂಛನ ಅನಾವರಣಗೊಳಿಸಿ ಮಾತನಾಡಿ ಅಂಬೇಡ್ಕರ್ ಆಶಯದಂತೆ ಲಿಸಾ ಫೌಂಡೇಷನ್ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯೊಂದಿಗೆ ಹೆಜ್ಜೆಯಿಟ್ಟಿರುವುದು ಸಂತೋಷದ ಸಂಗತಿ. ಸಾಮಾನ್ಯ ಜನರಲ್ಲಿರುವ ತೊಂದರೆ, ಶೋಷಣೆ ಹಾಗೂ ಸ್ತ್ರೀಶಕ್ತಿ ಹಕ್ಕುಗಳನ್ನು ಎತ್ತಿಹಿಡಿಯುವಂತೆ ಕೆಲಸದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.

ದೇವನೂರು ಮಹಾದೇವರ ಸಾಲಿನಂತೆ ಭೂಮಿಗೆ ಬಿತ್ತ ಬೀಜ, ಎದೆಗೆ ಬಿತ್ತ ಅಕ್ಷರ ಮೊಳಕೆಯೊ ಡೆದು ಹೆಮ್ಮೆರವಾಗುವಂತೆ. ಜಾತ್ಯಾತೀತ ಹಾಗೂ ಧರ್ಮಾತೀತವಾಗಿ ಬಡವರೊಂದಿಗೆ ಮುಖಾಮುಖಿ ಭೇಟಿ ಮೂಲಕ ಸಮೃದ್ಧ ನಾಡನ್ನು ಕಟ್ಟುವ ಕಾಯಕದಲ್ಲಿ ನಿರತರಾಗಬೇಕು ಎಂದು ಆಶಿಸಿದರು.

ಲಿಸಾ ಪೌಂಢೇಷನ್ ಸಂಸ್ಥಾಪಕಿ ಸಂಗೀತಾ ಪ್ರಸಾದ್ ಮಾತನಾಡಿ, ಜೀವನದಲ್ಲಿ ನಡೆದ ಕೆಲವು ಕಹಿ ಘಟನೆಗಳನ್ನು ಮರುಕಳಿ ಸದಂತೆ ನ್ಯಾಯಬದ್ಧವಾಗಿ ಸಿಗುವ ಸವಲತ್ತು ಒದಗಿಸಿಕೊಡುವುದಕ್ಕೆ ಲಿಸಾ ಸಂಸ್ಥೆ ಪ್ರಾರಂಭಿಸಿದ್ದು ಸರ್ಕಾರದ ಸೌಲಭ್ಯ, ನೊಂದವರ ಪಾಲಿಗೆ ಆಶಾದೀಪವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.


ಈಗಾಗಲೇ ಸಂಸ್ಥೆ ಹೊಸ ಆಶಯೊಂದಿಗೆ ಸ್ಥಾಪಿತಗೊಂಡು ಹಿಂದುಳಿದ ಮಕ್ಕಳಿಗೆ ಮರಳಿ ಶಾಲೆಗೆ ಕಳಿಸುವುದು. ಆಸ್ತಿ-ಅಂತಸ್ತು ವರ್ಗಾವಣೆ ಭ್ರಷ್ಟಾಚಾರ ತಡೆಗಟ್ಟಲು, ತಳಮಟ್ಟದ ಹೆಣ್ಣು ಹಾಗೂ ಸಮುದಾಯ ಮುಂಚೂಣಿಗೆ ತರುವುದು, ಪೋಕ್ಸೋ, ವರದಕ್ಷಣೆ ಕಿರುಕುಳ ಹಾಗೂ ಉಚಿತ ಕಾನೂನು ನೆರವು ಕಲ್ಪಿಸುವುದು ಮುಖ್ಯ ಧ್ಯೇಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲ ರಾಣೀ ರಾಜೀವ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಯುವಘಟಕದ ಅಧ್ಯಕ್ಷ ಕೆ.ಎಸ್.ಹೃತಿಕ್, ಗ್ರಾಮದ ಮುಖಂಡ ಎಚ್.ಕೆ. ಕೇಶವಮೂರ್ತಿ ಉಪಸ್ಥಿತರಿದ್ದರು.

ಫೋಟೋ

ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ಸ್ವಾಮಿ ಭವನದಲ್ಲಿ ಭಾನುವಾರ ನೂತನವಾಗಿ ಪ್ರಾರಂಭಗೊಂಡ ಲಿಸಾ ಫೌಂಡೇಷನ್ ಸಂಸ್ಥೆಯ ಲಾಂಛನವನ್ನು ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ಅನಾವರಣಗೊಳಿಸಿದರು. ಈ ವೇಳೆ ಪೌಂಢೇಷನ್ ಸಂಸ್ಥಾಪಕಿ ಸಂಗೀತಾ ಪ್ರಸಾದ್, ವಕೀಲ ರಾಣೀ ರಾಜೀವ್, ಸಂತೋಷ್ ಕೋಟ್ಯಾನ್, ಕೆ.ಎಸ್.ಹೃತಿಕ್, ಎಚ್.ಕೆ.ಕೇಶವಮೂರ್ತಿ ಇದ್ದರು.