ಪ್ರವಚನ ಆಲಿಕೆಯಿಂದ ಮಾನವ ಸಂಸ್ಕಾರವಂತನಾಗ್ತಾನೆ: ಯೋಗಗುರು ಶಿವಶಂಕರ ಮೆಡಿಕೇರಿ

| Published : Feb 29 2024, 02:07 AM IST

ಪ್ರವಚನ ಆಲಿಕೆಯಿಂದ ಮಾನವ ಸಂಸ್ಕಾರವಂತನಾಗ್ತಾನೆ: ಯೋಗಗುರು ಶಿವಶಂಕರ ಮೆಡಿಕೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಜ್ಜನರ ಪುರಾಣಗಳನ್ನು ಕೇಳುವುದರಿಂದ ಸರ್ವ ರೋಗಗಳು ಕಳೆಯುತ್ತವೆ. ದಿವ್ಯ ವಚನಗಳು ಮನುಷ್ಯರ ದುರ್ಗುಣಗಳನ್ನು ನಾಶಪಡಿಸುತ್ತವೆ.

ಹನುಮಸಾಗರ: ಪುರಾಣ ಪ್ರವಚನ ಕೇಳುವುದರಿಂದ ಮಾನವ ಸಂಸ್ಕಾರವಂತನಾಗುತ್ತನೆ ಎಂದು ಯೋಗಗುರು ಶಿವಶಂಕರ ಮೆಡಿಕೇರಿ ಹೇಳಿದರು.ಗ್ರಾಮದ 6ನೇ ವರ್ಷದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ, ಪವಾಡ ಪುರುಷ ಸಂತ ಬಾಳುಮಾಮ ಮಹಾಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಜ್ಜನರ ಪುರಾಣಗಳನ್ನು ಕೇಳುವುದರಿಂದ ಸರ್ವ ರೋಗಗಳು ಕಳೆಯುತ್ತವೆ. ದಿವ್ಯ ವಚನಗಳು ಮನುಷ್ಯರ ದುರ್ಗುಣಗಳನ್ನು ನಾಶಪಡಿಸುತ್ತವೆ ಎಂದರು.ಬಸವರಾಜ ಅಕ್ಕಿ ಪ್ರಾಸ್ತಾವಿಕ ಮಾತನಾಡಿ, ದಾಸರ ಜಯಂತಿಯಿಂದ ಆರಂಭವಾದ ಈ ಜಾಗೃತಿ ಒಂದು ಬಲಿಷ್ಠ ಸಂಘಟನಾತ್ಮಕ ಶಕ್ತಿಯಾಗಿ ಹನಮಸಾಗರದಲ್ಲಿ ಬೆಳೆಯಲು ಪ್ರೇರಣೆಯಾಯಿತು. ಎಲ್ಲರೂ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.ಸಿದ್ದಯ್ಯ ಶಿವಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಹಾಲುಮತ ಸಮಾಜದ ಅಧ್ಯಕ್ಷ ಭರಮಪ್ಪ ಬಿಂಗಿ, ಸಕ್ರಪ್ಪ ಹೊಳಿಯಪ್ಪ ಬಿಂಗಿ, ಭರಮಪ್ಪ ಕಂಡೇಕರ, ಹನಮಂತಪ್ಪ ಬಿಂಗಿ, ಮೈನುದ್ದೀನ ಖಾಜಿ, ನಾಗರಾಜ ಕಂದಗಲ್ಲ, ಮಾರುತಿಸಾ ರಂಗ್ರೇಜ, ನಾಗರಾಜ ಹಕ್ಕಿ, ದ್ಯಾಮಣ್ಣ ಬಿಂಗಿ, ಕಾಳಪ್ಪ ಕುಷ್ಟಗಿ, ಯಂಕನಗೌಡ ಪೊಲೀಸ್ ಪಾಟೀಲ, ಹನಮಂತಪ್ಪ ಹಕ್ಕಿ, ನಾಗರಾಜ ಶೆಬಿನಕಟ್ಟಿ, ಚೆನ್ನಬಸಪ್ಪ ಹಕ್ಕಿ, ಶಿವಪ್ಪ ಚೂರಿ, ಹುಲ್ಲಪ್ಪ ಗಡೇಕಾರ, ಮಲ್ಲಪ್ಪ ಕೋನಸಾಗರ, ಈರಗಪ್ಪ ಗಡೇಕಾರ, ಯಂಕಪ್ಪ ಗಡೇಕಾರ, ಕನಕಪ್ಪ ಗುರಿಕಾರ, ದ್ಯಾಮಣ್ಣನ ಬಿಂಗಿ, ಚಂದಮಣ್ಣ ಹುಲಿ, ಮಂದಮಣ್ಣ ಹುಲಿ, ಮಂದಮಣ್ಣ ಹುಲಿ,ನೀಲಪ್ಪ ಬಿಂಗಿ, ನಿಂಗಪ್ಪ ವಗ್ಗರ, ಚೆನ್ನಬಸಯ್ಯ ಹಿರೇಮಠ, ಪರಸಪ್ಪ ವಣಗೇರಿ, ಧರ್ಮಣ್ಣ ಬಿಂಗಿ ಇದ್ದರು.