ಸಾಹಿತ್ಯಿಕ ವಾತಾವರಣ ಕಲಿಕೆಗೆ ಸ್ಫೂರ್ತಿ ನೀಡುತ್ತದೆ: ಡಾ.ಆರ್.ಎಂ. ಕುಬೇರಪ್ಪ

| Published : Jun 04 2024, 12:32 AM IST

ಸಾಹಿತ್ಯಿಕ ವಾತಾವರಣ ಕಲಿಕೆಗೆ ಸ್ಫೂರ್ತಿ ನೀಡುತ್ತದೆ: ಡಾ.ಆರ್.ಎಂ. ಕುಬೇರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯಿಕ ವಾತಾವರಣ ಕಲಿಕೆಗೆ ಸ್ಫೂರ್ತಿ ನೀಡುತ್ತದೆ ಎಂದು ಬಿಎಜೆಎಸ್‌ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.

ರಾಣಿಬೆನ್ನೂರು: ಸಾಹಿತ್ಯಿಕ ವಾತಾವರಣ ಕಲಿಕೆಗೆ ಸ್ಫೂರ್ತಿ ನೀಡುತ್ತದೆ ಎಂದು ಬಿಎಜೆಎಸ್‌ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಹೇಳಿದರು. ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ಸೋಮವಾರ ಸಾಹಿತ್ಯ ಸೌರಭ ಕಾರ್ಯಕ್ರಮದಡಿ ಸಾಹಿತ್ಯಿಕ ಕೃತಿಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸತತ ಅಭ್ಯಾಸ, ನಿರಂತರ ಪರಿಶ್ರಮ, ಸಾಮಾಜಿಕ ಚಿಂತನೆ ಇದ್ದರೆ ಕಾವ್ಯ ರಚನೆಯಾಗುತ್ತದೆ. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ವಿಮರ್ಶಕ ಕಾಣುತ್ತಾನೆ ಎಂದರು. ಶೈಕ್ಷಣಿಕ ಸಲಹೆಗಾರ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿದರು. ಸಮಾರಂಭದಲ್ಲಿ ಡಾ.ಆರ್.ಎಂ. ಕುಬೇರಪ್ಪ ವಿರಚಿತ ಸ್ವರ ಮೇಳ ಹಾಗೂ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ವಿರಚಿತ ವಚನ ಸ್ಪಂದನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಾ.ಹೊನ್ನಪ್ಪ ಹೊನ್ನಕ್ಕಳವರ, ಡಾ. ಪ್ರೇಮಾನಂದ ಲಕ್ಕಣ್ಣನವರ ಕೃತಿ ಪರಿಚಯ ಮಾಡಿ ಮಾತನಾಡಿದರು. ಪ್ರಾ. ಡಾ.ಎಂ.ಎ.ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಬಿ.ಇಡಿ ಕಾಲೇಜಿನ ಉಪ ಪ್ರಾಚಾರ್ಯ ಪ್ರೊ. ಶಿವಕುಮಾರ ಬಿಸಲಳ್ಳಿ, ಪ್ರೊ. ಕೆ.ಕೆ. ಹಾವಿನಾಳ, ಭಾಗ್ಯ ದೇವಗಿರಿಮಠ, ಡಾ. ಎಚ್.ಐ. ಬ್ಯಾಡಗಿ, ಪ್ರೊ.ಎ. ಶಂಕರನಾಯ್ಕ, ಪ್ರೊ.ಪರಶುರಾಮ ಪವಾರ ಉಪಸ್ಥಿತರಿದ್ದರು.