ಇಳಕಲ್ಲ: ಸಾಹಿತ್ಯ ಲೋಕದ ದಿಗ್ಗಜರು ಹಾಗೂ ಹಿರಿಯ ಸಾಹಿತಿಗಳ ಹೆಸರು ಮತ್ತು ಅವರ ಭಾವಚಿತ್ರಗಳನ್ನು ಇಳಕಲ್ಲ ಬಸ್ ನಿಲ್ದಾಣದಲ್ಲಿ ಅಳವಡಿಸಿರುವುದು ಅಭಿನಂದನಾರ್ಹವಾಗಿದೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ ತಿಳಿಸಿದರು.
ಇಳಕಲ್ಲ: ಸಾಹಿತ್ಯ ಲೋಕದ ದಿಗ್ಗಜರು ಹಾಗೂ ಹಿರಿಯ ಸಾಹಿತಿಗಳ ಹೆಸರು ಮತ್ತು ಅವರ ಭಾವಚಿತ್ರಗಳನ್ನು ಇಳಕಲ್ಲ ಬಸ್ ನಿಲ್ದಾಣದಲ್ಲಿ ಅಳವಡಿಸಿರುವುದು ಅಭಿನಂದನಾರ್ಹವಾಗಿದೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ ತಿಳಿಸಿದರು.
ನಗರದ ಬಸ್ ನಿಲ್ದಾಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಇಳಕಲ್ಲ ತಾಲೂಕು ಘಟಕದಿಂದ 12 ಜನರ ಹಿರಿಯ ಸಾಹಿತಿಗಳ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು. ಕನ್ನಡ ನಾಡಿನ ಸಾಹಿತ್ಯ ಲೋಕದ ಹಿರಿಯರನ್ನು ಮರೆಯಬಾರದು ಎಂಬ ಉದ್ದೇಶದಿಂದ ಸಾರ್ವಜನಿಕರ ಸ್ಮರಣೆಗಾಗಿ ಬಸ್ ನಿಲ್ದಾಣದಲ್ಲಿ ಅಳವಡಿಸಿರುವುದು ಅತ್ಯುತ್ತಮ ಕಾರ್ಯ ಎಂದರು. ಸಮಾರಂಭದಲ್ಲಿ ಕಸಾಪ ಇಳಕಲ್ಲ ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ ಹಾಗೂ ಎಲ್ಲ ಸದಸ್ಯರು ಇದ್ದರು.