ಸಮಾಜದಲ್ಲಿ ಕ್ರಾಂತಿ ತರುವ ಶಕ್ತಿ ಸಾಹಿತ್ಯಕ್ಕಿದೆ

| Published : Oct 08 2024, 01:12 AM IST

ಸಮಾಜದಲ್ಲಿ ಕ್ರಾಂತಿ ತರುವ ಶಕ್ತಿ ಸಾಹಿತ್ಯಕ್ಕಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಜಿಲ್ಲೆಯ ಉದಯೋನ್ಮುಖ ಕವಿಗಳಾದ ಅಜೇಯ ಪಿ.ಸಂಗಣ್ಣೋರ ಅವರ ಮೊಗ್ಗು (ಕವನ ಸಂಕಲನ) ಹಾಗೂ ರಾಜು ಮಾರುತಿ ಪವಾರ ಅವರ ವಸಂತದೂತ (ಮಕ್ಕಳ ಗೀತ ನಾಟಕ) ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಸಮಾಜದಲ್ಲಿ ಕ್ರಾಂತಿಯನ್ನು ತರುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದು ಕಲಾವಿದ ಬಕ್ಕಪ್ಪ ದಂಡಿನ್ ತಿಳಿಸಿದರು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಜಿಲ್ಲೆಯ ಉದಯೋನ್ಮುಖ ಕವಿಗಳಾದ ಅಜೇಯ ಪಿ.ಸಂಗಣ್ಣೋರ ಅವರ ಮೊಗ್ಗು (ಕವನ ಸಂಕಲನ) ಹಾಗೂ ರಾಜು ಮಾರುತಿ ಪವಾರ ಅವರ ವಸಂತದೂತ (ಮಕ್ಕಳ ಗೀತ ನಾಟಕ) ಭಾನುವಾರ ಮಹಾಲಕ್ಷಿ ಸಭಾಂಗಣದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ ಅನಕ್ಷರಸ್ಥರು ಜನಪದದ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದರು. ಸಾಹಿತಿಗಳಿಗೆ ಸಮಾಜದ ಜವಾಬ್ದಾರಿಯೂ ಇದೆ. ವಸಂತದೂತ ಕೃತಿ ಪರಿಸರ ಕಾಳಜಿಯಿಂದ ಮತ್ತು ಮೊಗ್ಗು ಕೃತಿಯಲ್ಲಿ ತಾಯಿತನದ ಚೆಲುವು ಎದ್ದು ಕಾಣುತ್ತಿದ್ದು, ಬಂಡಾಯ ಚಳುವಳಿಯ ಲಕ್ಷಣಗಳನ್ನು ಒಳಗೊಂಡಿದೆ ಎಂದು ನುಡಿದರು.

ಡಾ.ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಜಿಲ್ಲೆಯ ಉದಯೋನ್ಮುಖ ಕವಿಗಳಾದ ರಾಜು ಹಾಗೂ ಅಜೇಯ ಪಿ.ಸಂಗಣ್ಣೋರ ಅವರ ಕೃತಿಗಳು ನಮ್ಮ ಸಂಸ್ಥೆಯಿಂದ ಲೋಕಾರ್ಪಣೆಗೊಂಡಿದ್ದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ನಮ್ಮ ಪ್ರತಿಷ್ಠಾನದಿಂದ ಹಲವಾರು ಕಮ್ಮಟ್ಟಗಳನ್ನು ಏರ್ಪಡಿಸಿ ಎಲೆಮೆರೆಕಾಯಿಗಳಂತಿರುವ ಹಲವಾರು ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಗೆ ತರುವ ಕಾರ್ಯವನ್ನು ಮಾಡಲಾಗುವುದು, ಅದಕ್ಕಾಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸದಸ್ಯನಾಗಿ ವಿವಿಧ ಅಕಾಡೆಮಿಗಳೊಂದಿಗೆ ಚರ್ಚಿಸುತ್ತಿದ್ದೇನೆ ಎಂದು ಹೇಳಿದರು.

ಕೃತಿಗಳ ಲೋಕಾರ್ಪಣೆಯನ್ನು ಕನ್ಯಾಕುಮಾರಿ ಮೂಲಗೆ ನೆರವೇರಿಸಿ, ಎರಡು ಭಿನ್ನ ಆಯಾಮದಿಂದ ಕೂಡಿದ ಕೃತಿಗಳು ಇಂದು ಪ್ರಕಟಣೆಗೊಂಡಿದ್ದು, ವಸಂತದೂತ ಮತ್ತು ಮೊಗ್ಗು ಎರಡು ಪ್ರಭುದ್ಧತೆಯಿಂದ ಕೂಡಿದ ಕೃತಿಗಳು. ಕೃತಿಕಾರರ ಸಾಹಿತ್ಯ ಕೃಷಿ ಹೀಗೆ ಮುಂದುವರಿಯಲೆಂದು ಶುಭ ಹಾರೈಸಿದರು.

ವಸಂತದೂತ (ಮಕ್ಕಳ ಗೀತನಾಟಕ) ಕೃತಿಯ ಕುರಿತು ಡಾ.ರಾಮಚಂದ್ರ ಗಣಾಪೂರ ಪರಿಚಯಿಸಿದರು. ಮೊಗ್ಗು (ಕವನ ಸಂಕಲನ)ರಾಜೇಶ್ ಶಿಂಧೆ ಪರಿಚಯಿಸಿದರು.

ಹಿರಿಯ ಪತ್ರಕರ್ತ ಗಂಧರ್ವಸೇನಾ, ಸಂತೋಷ ಮಣಗೇರೆ, ಸುನೀತಾ ಪಾಟೀಲ್, ಚಿತ್ರಸೇನ್ ಫುಲೆ ಕೃತಿಕಾರರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಜನಪದ ಹಾಡುಗಾರರಾದ ಶುಂಭುಲಿಂಗ ವಾಲ್ದೊಡ್ಡಿ, ಹಿರಿಯ ಸಾಹಿತಿ ಶಿವಕುಮಾರ ನಾಗವಾರ, ಕುಪೇಂದ್ರ ಶಾಸ್ತ್ರಿ, ಗಗನ ಫುಲೆ, ಪತ್ರಕರ್ತ ಬಾಲಾಜಿ ಕುಂಬಾರ ಸೇರಿ ಮತ್ತಿತರರು ಉಪಸ್ಥಿತರಿದ್ದರು.