ಯುವ ಸಮುದಾಯ ರಾಷ್ಟ್ರದ ಆಸ್ತಿ ಇದ್ದಂತೆ. ಸ್ವಾಮಿ ವಿವೇಕಾನಂದರು ಯುವಕರ ಪ್ರೇರಕ ಶಕ್ತಿಯಾಗಿ, ಭಾರತದ ಹಿಂದೂ ಧರ್ಮದ ಪ್ರಾಮುಖ್ಯತೆ, ದೇಶದ ಏಕತೆ, ಸಮಗ್ರತೆಯ ಭವ್ಯ ಪರಂಪರೆಯ ಬಗ್ಗೆ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ತಿಳಿಸುವ ಮೂಲಕ ಭರತಖಂಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ಗುರಿಯೊಂದಿಗೆ ಸಾರ್ಥಕ ಜೀವನ ನಡೆಸಬಹುದು ಎಂದು ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್.ಶಿಲ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ, ಪಿಯು ಕಾಲೇಜು ಹಾಗೂ ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ಸಮುದಾಯ ರಾಷ್ಟ್ರದ ಆಸ್ತಿ ಇದ್ದಂತೆ. ಸ್ವಾಮಿ ವಿವೇಕಾನಂದರು ಯುವಕರ ಪ್ರೇರಕ ಶಕ್ತಿಯಾಗಿ, ಭಾರತದ ಹಿಂದೂ ಧರ್ಮದ ಪ್ರಾಮುಖ್ಯತೆ, ದೇಶದ ಏಕತೆ, ಸಮಗ್ರತೆಯ ಭವ್ಯ ಪರಂಪರೆಯ ಬಗ್ಗೆ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ತಿಳಿಸುವ ಮೂಲಕ ಭರತಖಂಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದರು ಎಂದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜಿ.ಬೊಮ್ಮನಹಳ್ಳಿ ವಿಜಯಕುಮಾರ್ ಮಾತನಾಡಿ, ವಿಶ್ವ ಮಾನ್ಯ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಘೋಷಿಸಿವೆ ಎಂದರು.

ಕೇವಲ 39 ವರ್ಷ ಬದುಕಿದ ಈ ಸಂತ ಸಾವಿರ ತಲೆಮಾರು ಕಳೆದರೂ ಅಜರಾಮರ. ಇಡೀ ವಿಶ್ವವೇ ಸ್ಮರಿಸುವ ಆದರ್ಶಪ್ರಾಯ ಜೀವನ ಇವರದು ಎಂದರು.

ಸಹಾಯಕ ಪ್ರಾಧ್ಯಾಪಕ ಬಿ.ಎನ್.ದೇವರಾಜು ಪ್ರಾಸ್ತಾವಿಕ ನುಡಿಯನ್ನಾಡಿದರು. ಬಿ.ಇಡಿ ಪ್ರಶಿಕ್ಷಣಾರ್ಥಿ ಡಿ.ಆರ್.ವರ್ಷಿತ ಮತ್ತು 5 ನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಅವರು ಸ್ವಾಮಿ ವಿವೇಕಾನಂದ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ, ಸಹಾಯಕ ಪ್ರಾಧ್ಯಾಪಕ ಎ.ಎಚ್.ಗೋಪಾಲ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸಿ.ಎಲ್. ಶಿವಣ್ಣ, ವಿ.ಲೋಕೇಶ್ ಕುಮಾರ್, ಡಾ.ಎನ್.ಎಸ್.ಸೌಮ್ಯ, ಡಾ. ಎ.ಸಿ.ದೇವಾನಂದ್, ಮಾಡೆಲ್ ಪಬ್ಲಿಕ್ ಶಾಲೆ ಹೇಮಾ, ಗೀತಾಮಣಿ, ರೇಣುಕಾ ಕಲಾ, ಚೇತನ್, ಪಿಯು ಕಾಲೇಜಿನ ಅಜಯ್ ಸೇರಿದಂತೆ ಹಲವರು ಇದ್ದರು.