ವೀರರಾಘವನಪಾಳ್ಯ ಶಾಲೆಗೆ ಪಿಎಂಶ್ರೀ ಪ್ರಶಸ್ತಿ ಪ್ರದಾನ ನೇರ ಪ್ರಸಾರ

| Published : Aug 05 2025, 11:45 PM IST

ವೀರರಾಘವನಪಾಳ್ಯ ಶಾಲೆಗೆ ಪಿಎಂಶ್ರೀ ಪ್ರಶಸ್ತಿ ಪ್ರದಾನ ನೇರ ಪ್ರಸಾರ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ವರ್ಚುವಲ್‌ನಲ್ಲಿ ವೀರರಾಘವನಪಾಳ್ಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಎಂಶ್ರೀ ಪ್ರದಾನ ಸಮಾರಂಭವನ್ನು ಪ್ರೋಜೆಕ್ಟರ್ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಆನ್‍ಲೈನ್‍ನಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಡಿವೈಪಿಸಿ ಕೆಂಪಯ್ಯ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9 ಶಾಲೆಗಳಲ್ಲಿ ವೀರರಾಘವನಪಾಳ್ಯ ಶಾಲೆ ಅತ್ಯುತ್ತಮ ಸ್ಥಾನ ಪಡೆದು ಪಿಎಂಶ್ರೀ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

ಶಾಲೆ ಮುಖ್ಯ ಶಿಕ್ಷಕ ಹೊನ್ನಹನುಮಯ್ಯ ಮಾತನಾಡಿ, ನಮ್ಮ ಶಾಲೆಗೆ ಪಿಎಂಶ್ರೀ ಜಿಲ್ಲಾ ಪ್ರಶಸ್ತಿ ನೀಡುತ್ತಿರುವುದು ಸಂತೋಷ. ನಮ್ಮ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳು, ಪೋಷಕರು, ದಾನಿಗಳ ಸಹಕಾರದಿಂದ ಈ ಸಾಧನೆಯಾಗಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದರು.

ಕೇಂದ್ರ ಸರ್ಕಾರದ ಪಿಎಂಶ್ರೀ ಮಾದರಿ ಶಾಲೆಗಳ ರಾಷ್ಟ್ರಕ್ಕೆ ಸಮರ್ಪಿತ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್, ಕೇಂದ್ರದ ಶಿಕ್ಷಣ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್, ರಾಜ್ಯ ಉಸ್ತವಾರಿ ಜಯಂತ್ ಚೌದರಿ, ಸಂಸದ ಡಾ.ಕೆ.ಸುಧಾಕರ್, ಶಾಸಕ ಎನ್.ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿದ್ದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಲಕ್ಷ್ಮಣ, ಶಿಕ್ಷಕರಾದ ರಾಜೇಶ್ವರಿ, ಲೀಲಾವತಿ, ಸರೋಜಮ್ಮ, ಶೀಲಾಕುಮಾರಿ, ಆನಂದ್, ಶ್ರೀನಿವಾಸ್, ಶ್ವೇತಾ, ಚಂದ್ರಿಕಾ, ದೀಪಿಕಾ ಹಾಗೂ ಎಸ್ ಡಿಎಂಸಿ ಸದಸ್ಯರು ಭಾಗವಹಿಸಿದ್ದರು.

ಪೋಟೋ 3 :

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಿಎಂ ಶ್ರೀ ಜಿಲ್ಲಾ ಪ್ರಶಸ್ತಿ ಪಡೆದ ನೆಲಮಂಗಲ ವೀರರಾಘವನಪಾಳ್ಯದ ಸರಕಾರಿ ಶಾಲೆಯಲ್ಲಿ ನೇರಪ್ರಸಾರದಲ್ಲಿ ಸಮಾರಂಭ ವೀಕ್ಷಿಸಿದರು.