ಸಾರಾಂಶ
ಗುಳೇದಗುಡ್ಡ: ಪ್ರತಿಯೊಬ್ಬರ ಬದುಕಿನಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗಾಗಿ ಗುರುವಿನ ಸ್ಮರಣೆಗೆ ಮುಂದಾಗಬೇಕು. ಗುರುವಿನ ಸ್ಮರಣೆ ಮಾಡುವುದರಿಂದ ಬದುಕು ಪಾವನವಾಗುತ್ತದೆ ಎಂದು ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀ ಹೇಳಿದರು.
ಗುಳೇದಗುಡ್ಡ: ಪ್ರತಿಯೊಬ್ಬರ ಬದುಕಿನಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗಾಗಿ ಗುರುವಿನ ಸ್ಮರಣೆಗೆ ಮುಂದಾಗಬೇಕು. ಗುರುವಿನ ಸ್ಮರಣೆ ಮಾಡುವುದರಿಂದ ಬದುಕು ಪಾವನವಾಗುತ್ತದೆ ಎಂದು ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀ ಹೇಳಿದರು.
ಪಟ್ಟಣದ ಚೌ ಬಜಾರದಲ್ಲಿ ಗೆಳೆಯರ ಬಳಗದ ವತಿಯಿಂದ ಮರಡಿಮಠದ ಕಾಡಸಿದ್ದೇಶ್ವರ ಶ್ರೀಗಳ 4ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ಕಾಡಸಿದ್ದೇಶ್ವರ ಶ್ರೀಗಳು ಮೌನಯೋಗಿಗಳಾಗಿದ್ದರು. ಮೌನವಾಗಿದ್ದು ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದರು. ಮುಂದಿನ ವರ್ಷ ಶ್ರೀಮಠದಲ್ಲಿ 5ನೇ ಪುಣ್ಯಸ್ಮರಣೆ ನಡೆಯಲಿದೆ. ಅಲ್ಲದೇ ನೂತನ ರಥವು ಸಹ ಸಿದ್ಧಗೊಂಡಿದ್ದು, 5 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಎಲ್ಲ ಭಕ್ತರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.ಪುಣ್ಯಸ್ಮರಣೆ ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕರಿಗೆ ಅನ್ನಪ್ರಸಾದ ಏರ್ಪಡಿಸಲಾಗಿತ್ತು. ಚಂದ್ರಶೇಖರ ಹರವಿ, ಸಂಗಣ್ಣ ಪಟ್ಟಣಶೆಟ್ಟಿ, ಮುತ್ತು ಮೊರಬದ, ಯಳಮೇಳಿ, ಸಿದ್ದು ನಾಯನೇಗಲಿ, ಮಹಾಂತೇಶ ಚಿಕ್ಕನರಗುಂದ, ಪ್ರದೀಪ ಕಂಚ್ಯಾಣಿ, ಪ್ರವೀಣ ದೇವಗಿರಿಕರ, ಮಲ್ಲು ಹಡಗಲಿ, ಮಹಾಲಿಂಗಪ್ಪ ರೋಣದ, ಮಲ್ಲಿಕಾರ್ಜುನ ಬಾಚನಹಳ್ಳಿ, ಶಿವು ತುಪ್ಪದ, ಹಿರೇಮಠ, ಜ್ಞಾನೇಶ್ವರ ಬೊಂಬಲೇಕರ ಸೇರಿದಂತೆ ಇತರರು ಇದ್ದರು.