ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮಗ್ರ ಯಕೃತ್ತಿನ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಯಕೃತ್ತು ಕಸಿ ಚಿಕಿತ್ಸಾಲಯ ಆರಂಭಿಸಲಾಗಿದೆ. ಈ ಮೂಲಕ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಕೃತ್ತು ಕಸಿ ಮಾಡುವ ಚಿಕಿತ್ಸೆ ಪರಿಚಯಿಸಲಾಗಿದೆ.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮಗ್ರ ಯಕೃತ್ತಿನ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಯಕೃತ್ತು ಕಸಿ ಚಿಕಿತ್ಸಾಲಯ ಆರಂಭಿಸಲಾಗಿದೆ. ಈ ಮೂಲಕ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಕೃತ್ತು ಕಸಿ ಮಾಡುವ ಚಿಕಿತ್ಸೆ ಪರಿಚಯಿಸಲಾಗಿದೆ.ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್‌ಪ್ಲಾಂಟ್‌ (ಯಕೃತ್ತು ಮತ್ತು ಮೆದೋಜ್ಜಿರಕ ಗ್ರಂಥಿ ಕಸಿ) ವಿಭಾಗದ ಪ್ರಮುಖ ಸಲಹೆಗಾರ ಡಾ. ಜಯಂತ್ ರೆಡ್ಡಿ ಮತ್ತು ಡಾ. ಶ್ರುತಿ ಎಚ್.ಎಸ್. ರೆಡ್ಡಿ ಈ ಚಿಕಿತ್ಸಾಲಯದಲ್ಲಿ ಸೇವೆಗೆ ಲಭ್ಯರಿರುತ್ತಾರೆ. ಮಂಗ‍ಳವಾರ ಈ ಚಿಕಿತ್ಸೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಮ್ಮ ದೇಶದಲ್ಲಿ ಯಕೃತ್ತು ರೋಗಿಗಳಲ್ಲಿ ಶೇ. 40 ಮದ್ಯಪಾನಿಗಳಾಗಿದ್ದಾರೆ. ಶೇ 20 ಮಂದಿ ಯಕೃತ್ತಿನ ಕೊಬ್ಬು ಸಮಸ್ಯೆಯಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿವರ್ಷ 35 ರಿಂದ 40 ಸಾವಿರ ಮಂದಿಗೆ ಬದಲಿ ಯಕೃತ್ತಿನ ಅಗತ್ಯವಾಗುತ್ತದೆ, ಆದರೆ ಕೇವಲ 7-9 ಸಾವಿರ ದಾನಿಗಳು ಮಾತ್ರ ಲಭ್ಯ ಇದ್ದಾರೆ, ಆದ್ದರಿಂದ ಈ ಕಾಯಿಲೆ ಮಾರಣಾಂತಿಕವಾಗಿದ್ದು, ಕಾಯಿಲೆಗೆ ಆರಂಭದಲ್ಲಿಯೇ ಚಿಕಿತ್ಸೆ ನೀಡುವುದು ಅಗತ್ಯ, ಆದರೆ ಯಕೃತ್ತಿನ ಕಾಯಿಲೆಗಳು ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ ಎಂದು ಜಯಂತ್ ರೆಡ್ಡಿ ಹೇಳಿದರು.ಡಾ. ಶ್ರುತಿ ರೆಡ್ಡಿ ಅವರು, ಯಕೃತ್‌ ಕಾಯಿಲೆಗಳಿಗೆ ಸಮರ್ಥ ಚಿಕಿತ್ಸೆ ಇದೆ, ಯಕೃತ್ತು ಸಂಪೂರ್ಣ ಕೆಟ್ಚಿದ್ದರೆ ಬೇರೆಯವರ ಯಕೃತ್ತನ್ನು ದಾನ ಪಡೆದು ಕಸಿ ಮಾಡುವುದೇ ಪರಿಹಾರ, ಕಸಿ ಮಾಡಿದ ರೋಗಿಗಳಲ್ಲಿ ಶೇ 90ಕ್ಕಿಂತ ಹೆಚ್ಚು ಮಂದಿಯಲ್ಲಿ ಚಿಕಿತ್ಸೆ ಯಶಸ್ವಿಯಾಗುತ್ತದೆ ಎಂದರು.ಯಕೃತ್ತು ದಾನದ ಬಗ್ಗೆ ಆನಗತ್ಯ ಭಯ ಬೇಡ, ಮೃತಪಟ್ಟ ವ್ಯಕ್ತಿಯಿಂದ ಸಕಾಲದಲ್ಲಿ ಯಕೃತ್ತನ್ನು ದಾನ ಪಡೆದು ಅಗತ್ಯ ಇರುವವರಿಗೆ ಕಸಿ ಮಾಡಬಹುದಾಗಿದೆ, ಅಥವಾ ರೋಗಿಯ ಕುಟುಂಬದ ವ್ಯಕ್ತಿಗಳು ತಮ್ಮ ಯಕೃತ್ತಿನ ಸ್ವಲ್ಪ ಭಾಗವನ್ನು ದಾನ ಮಾಡಿ ರೋಗಿಗೆ ಕಸಿ ಮಾಡಿಸಿ ಅವರ ಜೀವವನ್ನು ಉಳಿಸಬಹುದು., ಇದರಿಂದ ದಾನಿಗೆ ಯಾವುದೇ ತೊಂದರೆಯಾಗುವುದಿಲ್ಲ, ದಾನ ಮಾಡಿದ ನಂತರ ದಾನಿಯಲ್ಲಿ ಉಳಿದ ಯಕೃತ್ತು 6 ತಿಂಗಳಲ್ಲಿ ಸಂಪೂರ್ಣ ಬೆಳೆದು ಹಿಂದಿನಂತಾಗುತ್ತದೆ ಎಂದರು. ಮಣಿಪಾಲ ಕ್ಲಸ್ಟರ್‌ನ ಸಿಓಓ ಡಾ. ಸುಧಾಕರ್ ಕಂಟಿಪುಡಿ, ಯಕೃತ್ತಿನ ಶಸ್ತ್ರಚಿಕಿತ್ಸೆಗಳು ದುಬಾರಿ ಎಂಬ ಭಾವನೆಯಿಂದ ಸಾಕಷ್ಟು ರೋಗಿಗಳು ಸಕಾಲಿಕ ಚಿಕಿತ್ಸೆ ಪಡೆಯುವುದಕ್ಕೆ ಹಿಂಜರಿಯುತ್ತಾರೆ. ಆದರೆ ಬೋಧನಾ ಆಸ್ಪತ್ರೆಯಾಗಿರುವ , ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈ ಸುಧಾರಿತ ಮತ್ತು ಸಂಕೀರ್ಣ ಕಾರ್ಯವಿಧಾನಗಳನ್ನು ಗಮನಾರ್ಹವಾಗಿ ಕಡಿಮೆ ವೆಚ್ಚದಲ್ಲಿ ನೀಡಲು ಸಾಧ್ಯವಾಗುತ್ತದೆ, ಇದು ಯಕೃತ್ತು ಮತ್ತು ಕಸಿ ಆರೈಕೆಯನ್ನು ಸಮಾಜದ ಎಲ್ಲಾ ವರ್ಗದವರಿಗೆ ಕೈಗೆಟುಕುವಂತೆ ಮಾಡುತ್ತದೆ ಎಂದರು.ಬೆಂಗಳೂರಿನ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಭಟ್ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಶಿರನ್ ಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ., ಅವಿನಾಶ್ ಶೆಟ್ಟಿ ಇದ್ದರು.