ಸಾರಾಂಶ
ಪಟ್ಟಣದ ಪಶು ವೈದ್ಯಕೀಯ ಇಲಾಖೆ ಕಾಲುಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ
ಕನ್ನಡ ಪ್ರಭ ವಾರ್ತೆ,ಕಡೂರುಕುರಿ, ಸೇರಿದಂತೆ ಇನ್ನಿತರ ಜಾನುವಾರುಗಳಿಗೆ ಯಾವುದೇ ರೋಗ ಬರದಂತೆ ಮುಂಜಾಗ್ರತೆವಹಿಸಲು ನೀಡಲಾಗುವ ಲಸಿಕೆ ಕಾರ್ಯಕ್ರಮವೂ ಅತ್ಯಗತ್ಯ ಸೇವೆಗಳಲ್ಲಿ ಒಂದಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಪಶು ವೈದ್ಯಕೀಯ ಇಲಾಖೆ ಕಾಲುಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯುತ್ತಿದ್ದು ಬಹುಮುಖ್ಯವಾಗಿ ಪಶು ಸಂಪತ್ತಿಗೆ ಯಾವುದೇ ರೋಗ ಬರದಂತೆ ಮುಂಜಾಗ್ರತೆಯಾಗಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಭಿನಂದನೀಯ. ರೈತರು ಆರ್ಥಿಕವಾಗಿ ಬೆಳೆಯಲು ಅಭಿಯಾನವನ್ನು ಯಶಸ್ವಿಗೊಳಿಸುವ ಮೂಲಕ ಪಶುಗಳ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.ಭಾರತದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದ್ದು, ಹಾಲಿನ ಉತ್ಪಾದನೆಗಳ ಗುಣಮಟ್ಟ ಕಾಪಾಡಿ ರೈತರನ್ನು ಪೋಷಿಸುವ ಜೊತೆ ಉತ್ತಮ ಬೆಲೆ ಸಿಗುವಂತೆ ಮಾಡಲು ಪಶುಗಳ ಆರೈಕೆ ಬಹುಮುಖ್ಯ. ಹಾಗಾಗಿ ಇಲಾಖೆ ಈ ರಾಷ್ಟ್ರೀಯ ಅಭಿಯಾನವನ್ನು ಜವಾಬ್ದಾರಿಯಿಂದ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಸಲಹೆ ಮಾಡಿದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸರಕಾರ ಮನುಷ್ಯನಂತೆ ಪಶುಗಳ ಸಂರಕ್ಷಣೆಗೂ ಆದ್ಯತೆ ನೀಡುತ್ತಿರುವುದು ಅಭಿನಂದನೀಯ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ ನಿರ್ಲಕ್ಷ್ಯಿಸದೆ ಪಶು ಸಂಪತ್ತನ್ನು ಕಾಪಾಡಬೇಕು.ಇದರಿಂದ ರೈತ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿ ಆಗಲು ಸಾಧ್ಯಎಂದರು.ಜಿಲ್ಲಾ ಜಂಟಿ ನಿರ್ದೇಶಕ ಡಾ.ಮೋಹನ್ ಮಾತನಾಡಿ, ಈ ಅಭಿಯಾನವು ತಾಲೂಕಿನಾದ್ಯಂತ ನಡೆಯಲಿದೆ. ಏಳು ತಂಡಗಳನ್ನು ಮಾಡಿಕೊಂಡು ಮನೆಮನೆಗಳಿಗೆ ತೆರಳಿ ಲಸಿಕೆ ಹಾಕಲಾಗುವುದು. ಆ ಮೂಲಕ ಪಶುಗಳನ್ನು ಸಂರಕ್ಷಿಸುವ ಕಾರ್ಯವನ್ನು ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ತಾಲೂಕು ಪಂಚಾಯಿತಿ ಇಒ ಸಿಆರ್ ಪ್ರವೀಣ್, ತಹಸೀಲ್ದಾರ್ ಪೂರ್ಣಿಮಾ, ಕಿರಣ್ ಸೇರಿದಂತೆ ಇಲಾಖೆ ವಿವಿಧ ಅಧಿಕಾರಿಗಳು ಹಾಜರಿದ್ದರು.-- ಬಾಕ್ಸ್ ಸುದ್ದಿಗೆ--
ಪಶು ಸಾಕಾಣಿಕೆ ನಿರ್ಲಕ್ಷ್ಯ: ಆತಂಕದ ಸ್ಥಿತಿಇತ್ತೀಚಿನ ದಿನಗಳಲ್ಲಿ ಪಶು ಸಾಕಾಣಿಕೆಯಿಂದ ರೈತರು ದೂರ ಸರಿಯುತ್ತಿರುವುದು ಆತಂಕದ ಸಂಗತಿ. ಹೈನುಗಾರಿಕೆ ಬಡವರಿಂದ ದೂರಾಗಿ ದೊಡ್ಡವರ ವೃತ್ತಿಯಾಗುತ್ತಿದೆ. ನಮ್ಮ ಈ ಭಾಗದಲ್ಲಿ ಹೈನುಗಾರಿಕೆ ಇಲ್ಲದಿದ್ದರೆ ರೈತರ ಸ್ಥಿತಿ ಏನಾಗುತಿತ್ತು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ -ಶಾಸಕ ಕೆ.ಎಸ್.ಆನಂದ್.
.24ಕೆಕೆಡಿಯು3.ಕಡೂರು ಪಟ್ಟಣದ ಪಶು ವೈದ್ಯಕೀಯ ಇಲಾಖೆಯ ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು.