ಸಾರಾಂಶ
ಸ್ವಚ್ಛ ಪರಿಸರದಲ್ಲಿ ಬದುಕುವುದೇ ಆನಂದವಾದುದು, ಪರಿಸರವನ್ನು ಸ್ವಚ್ಛವಾಗಿ ಆರೋಗ್ಯವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸ್ವಚ್ಛ ಪರಿಸರದಲ್ಲಿ ಬದುಕುವುದೇ ಆನಂದವಾದುದು, ಪರಿಸರವನ್ನು ಸ್ವಚ್ಛವಾಗಿ ಆರೋಗ್ಯವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಭಾರತದಲ್ಲಿ ಜ. 30ರಂದು ರಾಷ್ಟ್ರೀಯ ಸ್ವಚ್ಛತಾ ದಿನವನ್ನು ಆಚರಿಸುವ ಮೂಲಕ ಪರಿಸರದ ಸ್ವಚ್ಛತೆಯ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಮನೆ, ಕೆಲಸದ ಸ್ಥಳ, ರಸ್ತೆಗಳು, ಬೀದಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊರಗೆ ಶುಚಿತ್ವದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಈ ದಿನವೂ ಸಹಕಾರಿಯಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್ .ಆರ್. ಲೋಕಪ್ಪ ಹೇಳಿದರು.ಪಟ್ಟಣದ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ. ನಗರಸಭೆ ಕೊಳ್ಳೇಗಾಲ ಇವರ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಅಯೋಜಿಸಲಾಗಿದ್ದ ರಾಷ್ಟ್ರೀಯ ಸ್ವಚ್ಛತಾ ದಿನ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಪೂರ್ಣ ಯಶಸ್ವಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ ಎಂಬುದನ್ನು ನಾವೆಲ್ಲರೂ ಮನಗಾಣಬೇಕು. ಸಾರ್ವಜನಿಕರು ಸ್ವಚ್ಛತೆಗೆ ನಗರಸಭೆ ಮತ್ತು ಗ್ರಾಪಂಗಳ ಜೊತೆ ಕೈಜೋಡಿಸಬೇಕು. ತಮ್ಮ ಸುತ್ತಮುತ್ತಲ ಪರಿಸರ ಉತ್ತಮವಾಗಿ ಇಟ್ಟುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಮನೆಯ ಕಸವನ್ನು ಎಲ್ಲೂ ಬಿಸಾಡದೆ ಕಸ ಸಂಗ್ರಹ ವಾಹನಗಳು ಬಂದಾಗ ಅಲ್ಲಿಗೆ ಕೊಡಬೇಕು ಪ್ಲಾಸ್ಟಿಕ್ ಬಳಕೆ ಮಾಡುವುದನ್ನೂ ನಿಷೇಧ ಮಾಡಬೇಕು, ಆ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗೋಣ ಎಂದರು.
ಈ ವೇಳೆ ವಕೀಲ ಸಂಘದ ಅಧ್ಯಕ್ಷ ಡಿ ಎಸ್ ಬಸವರಾಜು, ಹಿರಿಯ ಸಿವಿನ್ ನ್ಯಾಯಾಧೀಶ ಎಂ. ಆನಂದ್, ಸಿವಿಲ್ ನ್ಯಾಯಾಧೀಶರಾದ ನಂದಿನಿ, ವಕೀಲರ ಸಂಘದ ಕಾರ್ಯದರ್ಶಿ ಮೋಹನ್ ಕುಮಾರ್, ಹಿರಿಯ ವಕೀಲ ನಾಗರಾಜು ಎಸ್. ಮಲ್ಲಿಕಾರ್ಜುನ. ಎಂ, ಪಿ ಮಹದೇವು. ಸಿ ರವಿ. ಎನ್. ರಾಧಾಕೃಷ್ಣ ಮತ್ತಿತರರಿದ್ದರು.