ಸಾರಾಂಶ
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮೂಡಲಗಿಯ ಜ್ಞಾನಧಾಮ ಫೌಂಡೇಶನ್ ಅವರ ಪಬ್ಲಿಷ್ ಮಾಡಿರುವ ಎಂಬಿಎ ವಿಭಾಗದ ವಿದ್ಯಾರ್ಥಿ ಚಂದನ್ ಬೋಹರಾ ಬರೆದ ಲಿವಿಂಗ್ ಟು ಸೂನ್ ಇಮೇಜಿನಿಂಗ್ ಲೈಫ್ ವಿಥೌಟ್ ಯು ಪುಸ್ತಕವನ್ನು ವಿಟಿಯುನ ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮೂಡಲಗಿಯ ಜ್ಞಾನಧಾಮ ಫೌಂಡೇಶನ್ ಅವರ ಪಬ್ಲಿಷ್ ಮಾಡಿರುವ ಎಂಬಿಎ ವಿಭಾಗದ ವಿದ್ಯಾರ್ಥಿ ಚಂದನ್ ಬೋಹರಾ ಬರೆದ ಲಿವಿಂಗ್ ಟು ಸೂನ್ ಇಮೇಜಿನಿಂಗ್ ಲೈಫ್ ವಿಥೌಟ್ ಯು ಪುಸ್ತಕವನ್ನು ವಿಟಿಯುನ ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಕುಲಸಚಿವರಾದ ಡಾ.ರಂಗಸ್ವಾಮಿ, ಕುಲಸಚಿವರು ಮೌಲ್ಯಮಾಪನರಾದ ಡಾ.ಶ್ರೀನಿವಾಸ್, ಹಣಕಾಸು ಅಧಿಕಾರಿಗಳಾದ ಡಾ.ಪ್ರಶಾಂತ್ ನಾಯಕ ಹಾಗೂ ವಿತಾವಿಯ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಪುಸ್ತಕದ ಲೇಖಕ ಚಂದನ್ ಬೋಹರಾ ಪುಸ್ತಕದ ಬಗ್ಗೆ ಮಾಹಿತಿ ನೀಡಿದರು. ಪುಸ್ತಕದ ಮುನ್ನುಡಿಯನ್ನು ಕುಲಪತಿಗಳಾದ ಪ್ರೊ.ವಿದ್ಯಾಶಂಕರ್.ಎಸ್, ಕುಲಸಚಿವರಾದ ಡಾಕ್ಟರ್ ರಂಗಸ್ವಾಮಿ, ಸಹಾಯಕ ಗ್ರಂಥಪಾಲಕರಾದ ಸಮಿನ್ ಆಫ್ರಿನ್ ಹಾಗೂ ಹಿನ್ನುಡಿಯನ್ನು ಸಹಾಯಕ ಗ್ರಂಥ ಪಾಲಕರಾದ ಡಾ.ಭೀಮಪ್ಪ ಎಸ್.ಎಚ್ ಬರೆದಿದ್ದು, ಈ ಪುಸ್ತಕವು ಯುವಕರಿಗೆ ಹಾಗೂ ಪಾಲಕರಿಗೆ ಉಪಯುಕ್ತ ಪುಸ್ತಕವಾಗಿದೆ.ವಿದ್ಯಾರ್ಥಿಗಳು ಪಾಲಕರ ಕಠಿಣಶ್ರಮವನ್ನು ಮರೆತು ದಾರಿತಪ್ಪಿ ಮಾಡುವ ಕೆಲಸ ಮತ್ತು ಅದರ ಪರಿಣಾಮಗಳನ್ನು ಕಥೆಯ ಮೂಲಕ ವಿವರಿಸಲಾಗಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸೂತ್ರಗಳು ಇಲ್ಲಿ ಉಲ್ಲೇಖಿಸಲಾಗಿದೆ. ಪಾಲಕರ ಕಠಿಣ ಪರಿಶ್ರಮವನ್ನು ಮರೆತ ಮೇಲೆ ಆಗುವ ಘಟನೆಯಿಂದ ಪಾಲಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಥೆಯ ರೂಪಾಂತರದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ.
-ಚಂದನ್ ಬೋಹರಾ, ಪುಸ್ತಕ ಲೇಖಕರು.