ಕುವೆಂಪು ಕೇವಲ ಮಹಾ ಕವಿಯಲ್ಲ ದಾರ್ಶನಿಕರು

| Published : Jan 09 2025, 12:48 AM IST

ಸಾರಾಂಶ

ಕುವೆಂಪು ಅವರ ಕೆಲವೊಂದು ಘೋಷವಾಕ್ಯಗಳನ್ನು ಹೆಕ್ಕಿ, ಪ್ರಸ್ತುತ ಸಂದರ್ಭಕ್ಕೆ ಹೊಲಿಕೆ ಮಾಡಿ, ಆ ರೀತಿ ಹೇಳಿದ್ದರು. ಈ ರೀತಿ ಹೇಳಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಕುವೆಂಪು ಕೇವಲ ಮಹಾ ಕವಿಯಲ್ಲ, ದಾರ್ಶನಿಕರು ಅಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಬೈರಿ ಹೇಳಿದರು.ಅಲಯನ್ಸ್ ಕ್ಲಬ್ ನಾಲ್ವಡಿ ವತಿಯಿಂದ ಹೆಬ್ಬಾಳು ವರ್ತುಲ ರಸ್ತೆಯ ಕಲ್ಯಾಣಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುವೆಂಪು ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗ ನಾಡಗೀತೆಯಾಗಿರುವ ಜೈ ಭಾರತ ಜನನಿಯ ತನುಜಾತೆ..ಯನ್ನು ಕುವೆಂಪು ಅವರು ಇನ್ನೂ ಯುವಕರಿದ್ದಾಗಲೇ ಬರೆದಿದ್ದರು. ಆಗಿನ್ನೂ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರು ರಾಜ್ಯ ಮಾತ್ರ ಇತ್ತು. ಕನ್ನಡ ಮಾತನಾಡುವ ಪ್ರದೇಶಗಳು ಹೈದ್ರಾಬಾದ್, ಮುಂಬೈ, ಮುದ್ರಾಸ್ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದವು. ಹೀಗಿರುವಾಗ ಕುವೆಂಪು ಅವರು ತಮ್ಮ ಒಬ್ಬ ದಾರ್ಶನಿಕರಾಗಿ. ದೂರದೃಷ್ಟಿಯಿಂದ ಈ ಗೀತೆಯನ್ನು ರಚಿಸಿದ್ದಾರೆ ಎಂದರು.ಕುವೆಂಪು ಅವರ ಕೆಲವೊಂದು ಘೋಷವಾಕ್ಯಗಳನ್ನು ಹೆಕ್ಕಿ, ಪ್ರಸ್ತುತ ಸಂದರ್ಭಕ್ಕೆ ಹೊಲಿಕೆ ಮಾಡಿ, ಆ ರೀತಿ ಹೇಳಿದ್ದರು. ಈ ರೀತಿ ಹೇಳಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಈ ರೀತಿ ಮಾಡುವವರು ಕುವೆಂಪು ಅವರನ್ನು ಹಾಗೂ ಅವರ ಸಾಹಿತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ ಎಂದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಹಾಗೂ ಅಲಯನ್ಸ್ ನಾಲ್ವಡಿ ಕ್ಲಬ್ ಅಧ್ಯಕ್ಷ ಎನ್. ಬೆಟ್ಟೇಗೌಡ ಅವರು ತಾವು ಚಿಕ್ಕವರಿದ್ದಾಗ ಕುವೆಂಪು ಅವರನ್ನು ಕಂಡು ಮಾತನಾಡಿದ್ದು, ತಮ್ಮ ಕುಟುಂಬದವರೊಡನೆ ಇದ್ದ ಸಂಬಂಧವನ್ನು ವಿವರಿಸಿದರು.ಡಾ.ರಘುನಂದನ್, ಚಂದ್ರಶೇಖರ್, ಶ್ರೀಲತಾ ಮನೋಹರ್, ಸಿ.ಎಸ್. ವಾಣಿ, ಡಾ.ಎ.ಎಸ್. ಪೂರ್ಣಿಮಾ, ಡಾ.ದೇವಿ ಆನಂದ್, ಪಾರ್ಥಸಾರಥಿ, ವೈರಮುಡಿ, ನರಸಿಂಹ, ರೂಪಾ, ಸುಜಾತಾ, ಲತಾ. ಜಯರಾಮ್ ಮೊದಲಾದವರು ಇದ್ದರು. ಚಂದ್ರಕಲಾ ನಿರೂಪಿಸಿದರು.