ಸಾರಾಂಶ
ಕೋಲಾರ : ರೈತರು ವದಂತಿಗಳಿಗೆ ಕಿವಿಗೊಡದರೆ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು, ಜತೆಗೆ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಆರ್ಥಿಕವಾಗಿ ಸಬಲರಾಗಲು ಮುಂದಾಗಬೇಕು ಎಂದು ಕಡಗಟ್ಟೂರು ಎಸ್‌ಎಸಿಎಸ್ ಅಧ್ಯಕ್ಷ ಕೆ.ವಿ.ದಯಾನಂದ್ ಹೇಳಿದರು.ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವ ಸಹಕಾರ ಸಂಘದಿಂದ ಗುರುವಾರ ಸಂಘದ ಆವರಣದಲ್ಲಿ ೧೫೬ ಮಂದಿ ರೈತರಿಗೆ ೧,೪೧,೭೬೦೦೦ ರು.ಗಳ ಸಾಲ ವಿತರಣಾ ಸಮಾರಭದಲ್ಲಿ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.ಪಡೆದ ಸಾಲ ಮರುಪಾವಸಿ
ಸಂಘದಿಂದ ಪಡೆದುಕೊಂಡಿರುವ ಸಾಲ ರೈತರು, ಮಹಿಳೆಯರು ಪ್ರಾಮಾಣಿಕವಾಗಿ ಮರು ಪಾವತಿ ಮಾಡುತ್ತಿರುವುದರಿಂದ ವಿವಿಧ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ. ಸಂಘಗಳಿಂದ ಸಾಲ ನೀಡಲು ಸರ್ಕಾರ ಹಣ ನೀಡುತ್ತದೆ ಎಂಬುದು ತಪ್ಪು ಕಲ್ಪನೆ, ರಿಸಾರ್ವ್ ಬ್ಯಾಂಕಿನಿಂದ ನಬಾರ್ಡ್, ನಬಾರ್ಡ್‌ನಿಂದ ಅಫೆಕ್ಸ್ ಬ್ಯಾಂಕ್, ಅಫೆಕ್ಸ್‌ನಿಂದ ಡಿಸಿಸಿ ಬ್ಯಾಂಕಿಗೆ ಸಾಲ ಬರುತ್ತದೆ. ಡಿಸಿಸಿ ಬ್ಯಾಂಕಿನಿಂದ ಸಂಘಗಳು ಸಾಲ ಪಡೆದು ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತದೆ. ಡಿಸಿಸಿ ಬ್ಯಾಂಕಿಗೆ ಬಡ್ಡಿ ಪಾವತಿ ಮಾಡಬೇಕು ಎಂದು ತಿಳಿಸಿದರು.ಡಿಸಿಸಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಸಕಾಲಕ್ಕೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಆಡಳಿತಾಧಿಕಾರಿ ಇರುವುದರಿಂದ ಸಾಲ ನೀಡಲು ಆಸಕ್ತಿ ತೋರುತ್ತಿಲ್ಲ. ಅಧಿಕಾರಿಗಳು ಸಾಲ ವಸೂಲಿಗೆ ಮುಂದಾಗುತ್ತಿಲ್ಲ. ಸಂಬಂಳಕ್ಕೆ ಸಿಮೀತರಾಗಿದ್ದಾರೆ. ಅಧಿಕಾರಿಗಳು ಬೆಂಗಳೂರಿನಿಂದ ಬಂದು ಹೋಗುವುದರಿಂದ ರೈತರ ಬಗ್ಗೆ ಕಾಳಜಿಯಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡಿ
ಹಿಂದೆ ಕೋಲಾರದಲ್ಲಿ ಸಹಕಾರ ವ್ಯವಸ್ಥೆ ಸಂಪುರ್ಣವಾಗಿ ನಾಶವಾಗಿತ್ತು. ಪರಿಸ್ಥಿತಿ ಸುಧಾರಣೆಯಾದ ನಂತರ ಸೋಸೈಟಿಗಳು ಆರ್ಥಿಕವಾಗಿ ಸಬಲಗೊಂಡಿವೆ. ಚಿನ್ನದ ಮೇಲೆ ಸಾಲ ನೀಡಲಾಗುವುದು. ಖಾಸಗಿ ಬ್ಯಾಂಕ್, ಫೈನಾನ್ಸ್‌ಗಳವರು ನೀಡುವ ಮಾತುಗಳಿಗೆ ಮರುಳಾಗದೆ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡಲು ಮುಂದಾಗಬೇಕು ಎಂದು ಕೋರಿದರು. ಸಂಘದ ಉಪಾಧ್ಯಕ್ಷ ಡೇವಿಡ್, ನಿರ್ದೇಶಕ ರಾಜಣ್ಣ, ರಮೇಶ್, ರಾಮಾಂಜಿನಲ್ಲ, ಸುಬ್ರಮಣಿ ಮಂಜುನಾಥ್, ಸಿಇಒ ಮುನೀಶ್ವರಪ್ಪ ಇದ್ದರು.