ಕೇರಳ ಗುಡ್ಡ ಕುಸಿತ ದುರಂತ: ಆ್ಯಂಬುಲೆನ್ಸ್‌ಗಳಲ್ಲಿ ಬಂದ ಶವಗಳಿಗೆ ಕೊನೇ ನಮನ ಸಲ್ಲಿಸಿದ ಚಾಮರಾಜನಗರದ ಸ್ಥಳೀಯರು

| Published : Aug 01 2024, 12:17 AM IST

ಕೇರಳ ಗುಡ್ಡ ಕುಸಿತ ದುರಂತ: ಆ್ಯಂಬುಲೆನ್ಸ್‌ಗಳಲ್ಲಿ ಬಂದ ಶವಗಳಿಗೆ ಕೊನೇ ನಮನ ಸಲ್ಲಿಸಿದ ಚಾಮರಾಜನಗರದ ಸ್ಥಳೀಯರು
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದಲ್ಲಿ ಭೂ ಕುಸಿತದಿಂದ ಹತ್ತಾರು ಕಿ.ಮೀ. ದೂರದ ಚಾಲಿಯಾರ್ ನದಿಯಲ್ಲಿ ಸಿಲುಕಿದ್ದ ಶವಗಳನ್ನು ಹೊತ್ತುಬಂದ ಸಾಲು ಸಾಲು ಆ್ಯಂಬುಲೆನ್ಸ್‌ಗಳಿಗೆ ಚಾಮರಾನಗರದ ಸ್ಥಳೀಯರು ಸಾಲಾಗಿ ನಿಂತು ಪುಷ್ಪ ನಮನ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.

ಚಾಮರಾಜನಗರ: ಕೇರಳ ಭೂ ಕುಸಿತದಲ್ಲಿ ಮೃತಪಟ್ಟವರಿಗೆ ಮೇಪ್ಪಾಡಿಯಲ್ಲಿ ಸ್ಥಳೀಯರು ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಭೂ ಕುಸಿತದಿಂದ ಹತ್ತಾರು ಕಿಮೀ ದೂರದ ಚಾಲಿಯಾರ್ ನದಿಯಲ್ಲಿ ಸಿಲುಕಿದ್ದ ಶವಗಳನ್ನು ಹೊತ್ತುಬಂದ ಸಾಲು ಸಾಲು ಆ್ಯಂಬುಲೆನ್ಸ್‌ಗಳಿಗೆ ಸ್ಥಳೀಯರು ಸಾಲಾಗಿ ನಿಂತು ಪುಷ್ಪ ನಮನ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ. ಯಾರೂ ಊಹಿಸದಂತೆ ಜರುಗಿದ ದುರಂತದಲ್ಲಿ ಮಡಿದವರಿಗೆ ಮೇಪ್ಪಾಡಿ ವೃತ್ತದಲ್ಲಿ ಹೂವು ಹಿಡಿದು ನಿಂತ ಹತ್ತಾರು ಮಂದಿ ಆ್ಯಂಬುಲೆನ್ಸ್‌ಗಳು ತೆರಳುವಾಗ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸಿದರು. ಕೇರಳ ಭೂ ಕುಸಿತದಲ್ಲಿ ಕನ್ನಡಿಗರು ಕೂಡ ಸಾವನ್ನಪ್ಪಿದ್ದು ಪತ್ತೆ ಕಾರ್ಯ ಮುಂದುವರೆದಿದೆ. ಚಾಮರಾಜನಗರ ಅಧಿಕಾರಿಗಳ‌ ತಂಡ ಕೇರಳದಲ್ಲೆ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಾದಲ್ಲಿ ತೊಡಗಿಕೊಂಡಿದ್ದಾರೆ. ವರ್ಷದ ಆರಂಭ/ಕೊನೇಲಿ ವಯನಾಡಲ್ಲಿ

ಭೂಮಿ ಕುಸಿದಿದ್ರೆ ಭಾರೀ ಅನಾಹುತ ಆಗ್ತಿತ್ತು?

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮಳೆ ಹೆಚ್ಚಾಗಿ ದೇವರ ನಾಡಾದ ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಮಿ ಕುಸಿತದಿಂದ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ವರ್ಷದ ಕೊನೆ ಮಾಸ ಅಥವಾ ಆರಂಭದಲ್ಲೇನಾದರೂ ವಯನಾಡು ಜಿಲ್ಲೇಲಿ ಇದೇ ಭೂಕುಸಿತ ಉಂಟಾಗಿದ್ದರೇ ತಾಲೂಕಿನ ನೂರಾರು ಮಂದಿ ಕೂಲಿ ಕಾರ್ಮಿಕರು ಬಲಿಯಾಗುತ್ತಿದ್ದರು. ನೆರೆಯ ಕೇರಳಕ್ಕೂ ರಾಜ್ಯದ ಗಡಿ ಗುಂಡ್ಲುಪೇಟೆ ತಾಲೂಕಿನ ಕೂಲಿ ಕಾರ್ಮಿಕರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಕೇರಳಕ್ಕೆ ಪ್ರತಿ ವರ್ಷದ ಕೊನೆಯಲ್ಲಿ ತಾಲೂಕಿನ ಭೀಮನಬೀಡು, ಕೂತನೂರು, ಬನ್ನಿತಾಳಪುರ, ಕೋಡಹಳ್ಳಿ, ಇಂಗಲವಾಡಿ ಸೇರಿದಂತೆ ಹಿಂದುಳಿದ ವರ್ಗದ ಕೂಲಿ ಕಾರ್ಮಿಕರು ವರ್ಷದ ಕೊನೆಯಲ್ಲಿ ಗುಳೆ ಹೋಗ್ತಾರೆ!ಈಗಲೂ ಕೇರಳದ ಮೀನಾಂಗಡಿ, ಸುಲ್ತಾನ್‌ ಬತ್ತೇರಿ ಸುತ್ತ ಮುತ್ತ ನೂರಾರು ಮಂದಿ ಕೂಲಿಗೆ ಹೋಗಿ ಬರುವುದನ್ನು ಕಾಣಬಹುದು. ವರ್ಷದ ಡಿಸೆಂಬರ್‌ನಿಂದ ಮುಂಗಾರು ಮಳೆ ಬೀಳುವ ತನಕ ಹೆಂಡತಿ ಹಾಗೂ ಮಕ್ಕಳೊಂದಿಗೆ ಈಗ ಭೂ ಕುಸಿತ ಉಂಟಾಗಿರುವ ಚೂರಲ್‌ ಮಾಲ, ಮುಂಡಕ್ಕಾಯ್‌, ಗುಡ, ವಡುವಂಜಲ್‌ ಕಡೆ ಕಾಫಿ ಬಿಡಿಸಲು ಹೋಗುತ್ತಾರೆ. ಕೇರಳಕ್ಕೆ ತೆರಳುವ ರೈತ, ಕೃಷಿ ಕೂಲಿ ಕಾರ್ಮಿಕರು ಈಗ ತಮ್ಮ ಸ್ವಗ್ರಾಮದ ಅವರವರ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಫಸಲು ಬಂದು ಒಕ್ಕಣೆ ಬಳಿಕ ಇಲ್ಲಿ ಕೆಲಸ ಇಲ್ಲದ ಕಾರಣ ಮನೆಯಲ್ಲಿ ಕೂರುವ ಬದಲು ಕೇರಳದ ವಯನಾಡು ಜಿಲ್ಲೆಯಲ್ಲಿ ಕಾಫಿ ಬಿಡಿಸಲು ಕೆಲಸಕ್ಕೆ ತೆರಳುವುದು ಹಲವು ದಶಕಗಳಿಂದಲೂ ನಡೆದು ಕೊಂಡು ಬಂದಿದೆ.ಕೇರಳಕ್ಕೆ ಕೂಲಿಗೆ ಹೋದವರು ಅಲ್ಲೇ ಮೊಕ್ಕಾಂ ಹೂಡಿ ನೆಲೆಸಿದ್ದಾರೆ. ಆದರೆ ಮಂಗಳವಾರ ನಸುಕಿನ ಜಾವ ಭೂಮಿ ಕುಸಿತ ದುರಂತದಲ್ಲಿ ಅವರು ಸಿಕ್ಕಿಲ್ಲ ಇದು ಸಮಾಧಾನಕರ ವಿಚಾರವಾಗಿದೆ ಎಂದು ಹೆಸರೇಳಲಿಚ್ಚಿಸಿದ ಕೂತನೂರು ಗ್ರಾಮದ ಕೂಲಿ ಕಾರ್ಮಿಕನೊಬ್ಬ ಹೇಳಿದ್ದಾರೆ. ಕೇರಳದ ವಯನಾಡು ಜಿಲ್ಲೆಯಲ್ಲಿ ಭೂ ಕುಸಿತಗೊಂಡ ಪ್ರಕರಣದಲ್ಲಿ ಗುಂಡ್ಲುಪೇಟೆ ತಾಲೂಕಿನ ಕೂಲಿ ಕಾರ್ಮಿಕರು/ ಪ್ರವಾಸಿಗರು ಸಿಕ್ಕಿರುವ ಮಾಹಿತಿ ಸಿಕ್ಕಿಲ್ಲ.ಟಿ.ರಮೇಶ್‌ ಬಾಬು, ತಹಸೀಲ್ದಾರ್‌ ಕೇರಳದಲ್ಲೀಗ ಮಳೆ ಬೀಳುತ್ತಿದೆ. ಈಗ ಕಾಫಿ ಗಿಡಕ್ಕೆ ಗೊಬ್ಬರ ಹಾಕುವ ಸಮಯ. ಈಗಲೂ ನೂರಾರು ಮಂದಿ ಸುಲ್ತಾನ್‌ ಬತ್ತೇರಿ ಸುತ್ತ ಮುತ್ತ ಕೆಲಸಕ್ಕೆ ಹೋಗಿದ್ದಾರೆ.-ಮಂಜು, ಭೀಮನಬೀಡು ಗ್ರಾಮಸ್ಥ