ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಾಕಷ್ಟು ಸಾರ್ವಜನಿಕರು ಕಾಮಗಾರಿ ಆರಂಭಕ್ಕೆ ಆಗ್ರಹಿಸಿದ್ದರು. ಸಾರ್ವಜನಿಕರ ಆಕ್ರೋಶದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಯಿಂದಲೂ ಕಾಮಗಾರಿಗೆ ಅನುಮತಿ ದೊರೆಯದಿರುವುದನ್ನು ಗಮನಿಸಿದ ನಾಗರಿಕರು ಸ್ವಂತ ಹಣದಿಂದ ಟಾರ್ಪಲ್ ಖರೀದಿಸಿ ಬಸ್ ತಂಗುದಾಣಕ್ಕೆ ಮುಚ್ಚುವ ಮೂಲಕ ಬಸ್ ಪ್ರಯಾಣಿಕರು ಮಳೆಯಿಂದ ಸಂಕಷ್ಟಪಡುವುದನ್ನು ತಪ್ಪಿಸುವುದರ ಜೊತೆಗೆ ಜಿಲ್ಲಾಡಳಿತಕ್ಕೆ ಮುಜುಗರವಾಗುವಂತೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಸಕಲೇಶಪುರತಾಂತ್ರಿಕ ಕಾರಣದಿಂದ ನನೆಗುದಿಗೆ ಬಿದ್ದಿದ್ದ ಹಳೇಬಸ್ ನಿಲ್ದಾಣ ಸಮೀಪದ ಬಸ್ ತಂಗುದಾಣವನ್ನು ನಾಗರಿಕರೇ ಟಾರ್ಪಲ್ ಹಾಕಿ ಬಸ್ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದರು.ಹಳೇ ಬಸ್ ನಿಲ್ದಾಣ ಸಮೀಪ ಬಸ್ ಪ್ರಯಾಣಿಕರ ಸಂಖ್ಯೆ ಅತಿ ಹೆಚ್ಚಿದ್ದು ನಿತ್ಯ ಸಾವಿರಾರು ಜನರು ಬಸ್ ತಂಗುದಾಣವಿಲ್ಲದೆ ಈ ಪ್ರದೇಶದಲ್ಲಿ ಮಳೆಬಿಸಿಲಿನಲ್ಲೇ ಬಸ್‌ಗಾಗಿ ಕಾಯಬೇಕಿತ್ತು. ಇದನ್ನು ಗಮನಿಸಿದ ಶಾಸಕ ಸೀಮೆಂಟ್ ಮಂಜು ಶಾಸಕರ ವಿವೇಚನ ಕೋಟದಡಿ ೨೦ ಲಕ್ಷ ರು. ವೆಚ್ಚದಲ್ಲಿ ಬಸ್ ತಂಗುದಾಣ, ಪುರಸಭೆ ಎದುರು ಆಟೋ ತಂಗುದಾಣ ಹಾಗೂ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಇನ್ನೇನು ಬಸ್ ತಂಗುದಾಣ ಕಾಮಗಾರಿ ಮುಕ್ತಾಯವಾಯಿತು ಎನ್ನುವ ಸಮಯದಲ್ಲಿ ಕಾಮಗಾರಿ ವಿರೋಧಿಸಿ ಕೆಲವು ವ್ಯಕ್ತಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಾಕಷ್ಟು ಸಾರ್ವಜನಿಕರು ಕಾಮಗಾರಿ ಆರಂಭಕ್ಕೆ ಆಗ್ರಹಿಸಿದ್ದರು. ಸಾರ್ವಜನಿಕರ ಆಕ್ರೋಶದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಯಿಂದಲೂ ಕಾಮಗಾರಿಗೆ ಅನುಮತಿ ದೊರೆಯದಿರುವುದನ್ನು ಗಮನಿಸಿದ ನಾಗರಿಕರು ಸ್ವಂತ ಹಣದಿಂದ ಟಾರ್ಪಲ್ ಖರೀದಿಸಿ ಬಸ್ ತಂಗುದಾಣಕ್ಕೆ ಮುಚ್ಚುವ ಮೂಲಕ ಬಸ್ ಪ್ರಯಾಣಿಕರು ಮಳೆಯಿಂದ ಸಂಕಷ್ಟಪಡುವುದನ್ನು ತಪ್ಪಿಸುವುದರ ಜೊತೆಗೆ ಜಿಲ್ಲಾಡಳಿತಕ್ಕೆ ಮುಜುಗರವಾಗುವಂತೆ ಮಾಡಿದ್ದಾರೆ. ಈ ವೇಳೆ ಮುಖಂಡರಾದ ಬಾಗೆ ನೀಲಕಂಠ, ಕಿರೇಹಳ್ಳಿ ಶಿವಕುಮಾರ್, ನಾರಾಯಣ ಆಳ್ವ, ಶ್ರೀರಾಮಸೇನೆಯ ಉಮೇಶ್, ಹೆತ್ತೂರು ದೇವರಾಜ್, ಧರ್ಮ ಸೇರಿದಂತೆ ಹಲವರು ಈ ಕಾರ್ಯದ ಮುಂದಾಳತ್ವ ವಹಿಸಿದ್ದರು.