ಶಿಕ್ಷಣ ಇಲಾಖೆ ನೌಕರರ ಸಹಕಾರ ಸಂಘಕ್ಕೆ ನಿವೇಶನ: ಶಾಸಕ ಎನ್‌. ಶ್ರೀನಿವಾಸ್‌

| Published : Sep 24 2024, 01:58 AM IST

ಶಿಕ್ಷಣ ಇಲಾಖೆ ನೌಕರರ ಸಹಕಾರ ಸಂಘಕ್ಕೆ ನಿವೇಶನ: ಶಾಸಕ ಎನ್‌. ಶ್ರೀನಿವಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ನೀತಿ ನಿಯಮಗಳನುಸಾರ ಮತ್ತು ಸರ್ಕಾರಿ ಶುಲ್ಕ ಪಾವತಿಗೆ ಶಿಕ್ಷಣ ಇಲಾಖಾ ನೌಕರರ ಸಹಕಾರ ಸಂಘ ಸಿದ್ದವಿದ್ದಲ್ಲಿ ಕೂಡಲೇ ಕಚೇರಿ ಸ್ವಂತ ಕಟ್ಟಡಕ್ಕೆ ಸೂಕ್ತ ನಿವೇಶನ ಕೊಡಿಸಿಕೊಡುತ್ತೇನೆಂದು ಶಾಸಕ ಎನ್.ಶ್ರೀನಿವಾಸ್ ಭರವಸೆ ನೀಡಿದರು. ನೆಲಮಂಗಲದಲ್ಲಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕನ್ನಡಪ್ರಭ ವಾರ್ತೆ ನೆಲಮಂಗಲ

ಸರ್ಕಾರದ ನೀತಿ ನಿಯಮಗಳನುಸಾರ ಮತ್ತು ಸರ್ಕಾರಿ ಶುಲ್ಕ ಪಾವತಿಗೆ ಶಿಕ್ಷಣ ಇಲಾಖಾ ನೌಕರರ ಸಹಕಾರ ಸಂಘ ಸಿದ್ದವಿದ್ದಲ್ಲಿ ಕೂಡಲೇ ಕಚೇರಿ ಸ್ವಂತ ಕಟ್ಟಡಕ್ಕೆ ಸೂಕ್ತ ನಿವೇಶನ ಕೊಡಿಸಿಕೊಡುತ್ತೇನೆಂದು ಶಾಸಕ ಎನ್.ಶ್ರೀನಿವಾಸ್ ಭರವಸೆ ನೀಡಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರಮಠದ ಆವರಣದಲ್ಲಿ ಶಿಕ್ಷಣ ಇಲಾಖೆ ನೌಕರರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘ ಶಿಕ್ಷಕರಿಗೆ ಕನಿಷ್ಟ ದಾಖಲೆಗಳನ್ನು ಪಡೆದುಕೊಂಡು ೫ ಲಕ್ಷ ರು. ಸಾಲ ಸೌಲಭ್ಯ ನೀಡುತ್ತಿರುವುದು ಹೆಮ್ಮೆಯ ಸಂಗತಿ, ಶಿಕ್ಷಕರರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಸಂಘದ ಕಾರ್ಯ ಚಟುವಟಿಕೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ತಾಲೂಕಿನ ಪ್ರತಿಯೊಬ್ಬ ಶಿಕ್ಷಕರು ಸಂಘದ ಸದಸ್ಯತ್ವ ಪಡೆದುಕೊಂಡು ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಹಕಾರ ಸಂಘ ತನ್ನ ವಹಿವಾಟಿನಲ್ಲಿ 33 ಲಕ್ಷ ರುಪಾಯಿಗಳ ಲಾಭ ಹೊಂದಿದ್ದು ಲಾಭಾಂಶದಲ್ಲಿ ಸಂಘದ ಸರ್ವ ಸದಸ್ಯರಿಗೂ ಶೇ.೧೫ರಷ್ಟನ್ನು ಹಂಚಿಕೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು.

ಸಂಘದ ಅಧ್ಯಕ್ಷ ಎಸ್.ದೇವರಾಜು ಮಾತನಾಡಿ, ಸಂಘದಲ್ಲಿ ೭೪೨ ಸದಸ್ಯರಿದ್ದು ಸಂಘದ ಆರ್ಥಿಕ ಚಟುವಟಿಕೆ ಉತ್ತಮವಾಗಿದೆ. 2023-24ರಲ್ಲಿ ಎ ಶ್ರೇಣಿ ಪಡೆದುಕೊಂಡಿದೆ, ಸಮಾಜದ ಅಭಿವೃದ್ಧಿಗೆ ಶಿಕ್ಷಕರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಅದರೊಂದಿಗೆ ತಾಲೂಕಿನ ಶಿಕ್ಷಕರ ಆರ್ಥಿಕ ಸಮಸ್ಯೆಗಳಿಗೆ ಬಗೆಹರಿಸುವ ನಿಟ್ಟಿನಲ್ಲಿ 1967ರಲ್ಲಿಯೇ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು ಪರಸ್ಪರರ ಆರ್ಥಿಕ ಸಮಸ್ಯೆಗಳಿಗೆ ಕೈ ಜೋಡಿಸಿರುವುದು ಅಭಿನಂದನಾರ್ಹ ಎಂದರು.

೫೦೦ರು. ಸಾಲ ವಿತರಣೆಯಿಂದ ಪ್ರಾರಂಭವಾದ ಶಿಕ್ಷಕರ ಸಹಕಾರ ಸಂಘ ಪ್ರಸ್ತುತ ೫ಲಕ್ಷ ರೂಗಳ ಸಾಲಸೌಲಭ್ಯವನ್ನು ನೀಡುವಂತೆ ಬೆಳೆದಿದ್ದು ಸಂಘದ ಚಟುವಟಿಕೆ ಆಶಾದಾಯಕವಾಗಿವೆ, ಕಾಲ ಕಾಲಕ್ಕೆ ಬದಲಾಗುವ ನೀತಿನಿಯಮಗಳನ್ನು ಸಂಘವು ಅಳವಡಿಕೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಇಲಾಖೆ ಅಧಿಕಾರಿಗಳು ಮತ್ತು ಈ ಹಿಂದಿನ ಆಡಳಿತ ಮಂಡಳಿಗಳ ಪರಿಶ್ರಮ ಕಾರಣವಾಗಿದೆ. ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮನೋಭಾವನೆಯಿಂದ ಕೆಲಸ ಮಾಡಬೇಕೆ ಹೊರತಾಗಿ ರಾಜಕೀಯ ಗುಂಪುಗಾರಿಕೆಗಳು ಸಂಘದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ಜಾಗರೂಕತೆ ವಹಿಸಬೇಕೆಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಸಂಘದ ಸದಸ್ಯರ ಮಕ್ಕಳು ಶೈಕ್ಷಣಿಕವಾಗಿ ಸಾಧನೆಗೈದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಿವಕುಮಾರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಾಸುದೇವಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರುದ್ರಾರಾದ್ಯ, ಮಾಜಿಅಧ್ಯಕ್ಷರಾದ ಜಿ.ವಿ.ಕುಮಾರ್, ಶಿವಕುಮಾರ್ ಪರಮೇಶ್ವರಯ್ಯ, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್.ಮಲ್ಲಿಕಾರ್ಜುನ್, ಎಸ್‌ಸಿ ಎಸ್‌ಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಮಾಂಜಿನಪ್ಪ, ಸಹಕಾರ ಸಂಘದ ಉಪಾಧ್ಯಕ್ಷ ಚಂದ್ರಶೇಖರಯ್ಯ, ನಿರ್ದೇಶಕರಾದ ಎನ್.ಗಿರೀಶ್, ಹೆಚ್.ಆರ್.ಸತೀಶ್, ರೇಣುಕಾಸ್ವಾಮಿ, ಎನ್.ವಿ.ಸಿದ್ದಗಂಗಯ್ಯ, ಪ್ರಕಾಶ್, ಜಿ.ನಂಜುಂಡಯ್ಯ, ಟಿ.ಆರ್.ಸೌಭಾಗ್ಯ, ಗಂಗಮಹಿಮಕ್ಕ ಗಂಗಮಲ್ಲಯ್ಯ.ಯೋಗಾನಂದ್, ಕಾರ್ಯದರ್ಶಿ ಕೊಟ್ರೇಶ್. ಆರ್,ಜಿ.ಬಸವರಾಜಪ್ಪ ಉಪಸ್ಥಿತರಿದ್ದರು.