ಬಾಕಿ ಪಾವತಿಸದ ಅಂಗಡಿಗೆ ಬೀಗ

| Published : Oct 21 2023, 12:30 AM IST

ಸಾರಾಂಶ

ಬಾಕಿ ಪಾವತಿಸದ ಅಂಗಡಿಗೆ ಬೀಗ
ನರಸಿಂಹರಾಜಪುರ; ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪ.ಪಂ.ಗೆ ಸೇರಿದ ಅಂಗಡಿ ಮಳಿಗೆ ಬಾಡಿಗೆದಾರರು ಬಾಡಿಗೆಯನ್ನು ಪಾವತಿಸದೇ ಬಾಕಿ ಇಟ್ಟುಕೊಂಡಿದ್ದು ಈ ಕೂಡಲೇ ಬಾಕಿ ಬಾಡಿಗೆ ಮೊತ್ತ ಪಾವತಿಸ ಬೇಕು. ಇಲ್ಲದಿದ್ದರೆ ಅ. 25 ರಂದು ಬಾಡಿಗೆ ಪಾವತಿಸದೇ ಇರುವ ಅಂಗಡಿ ಮಳಿಗೆಗಳಿಗೆ ಸಾಮೂಹಿಕವಾಗಿ ಬೀಗ ಹಾಕಲಾಗುವುದು ಎಂದು ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿ, ಹಲವಾರು ಬಾರಿ ಬಾಡಿಗೆದಾರರಿಗೆ ಬಾಕಿ ಬಾಡಿಗೆ ಬಾಬ್ತನ್ನು ಪಾವತಿಸುವಂತೆ ವಿನಂತಿಸಿಕೊಳ್ಳಲಾಗಿದೆ. ಧ್ವನಿ ವರ್ಧಕದ ಮೂಲಕವೂ ವ್ಯಾಪಕ ಪ್ರಚಾರ ಮಾಡಲಾಗಿದೆ. ಖುದ್ದು ಅಂಗಡಿ ಮಳಿಗೆಗೆ ಭೇಟಿ ನೀಡಿ ಬಾಡಿಗೆ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸು ವಂತೆ ಮನವಿ ಮಾಡಲಾಗಿದೆ. ಆದರೂ, ಅಂಗಡಿ ಮಳಿಗೆ ಬಾಡಿಗೆದಾರರು ಬಾಕಿ ಇರುವ ಬಾಡಿಗೆ ಹಣ ಪಾವತಿಸಿಲ್ಲ. ಈಗಾಗಲೇ ನಮಗೆ ನಗರಾಭಿವೃದ್ಧಿ ಸಚಿವರು, ಜಿಲ್ಲಾಧಿಕಾರಿಗಳು ಬಾಕಿ ಇರುವ ಅಂಗಡಿ ಮಳಿಗೆ ಬಾಡಿಗೆ ಪಾವತಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಆದ್ದರಿಂದ ಎಲ್ಲಾ ಮಳಿಗೆ ಬಾಡಿಗೆದಾರರು ಕೂಡಲೇ ಬಾಕಿ ಇರುವ ಬಾಡಿಗೆ ಪಾವತಿಸುವಂತೆ ಕೋರಿದ್ದಾರೆ. ಇಲ್ಲವಾದಲ್ಲಿ ಅ.25 ರಂದು ಬಾಕಿ ಇಟ್ಟುಕೊಂಡ ಬಾಡಿಗೆದಾರರ ಮಳಿಗೆಗಳಿಗೆ ಬೀಗ ಹಾಕಲಾಗುವುದು ಎಂದು ತಿಳಿಸಿದ್ದಾರೆ.