ಲೋಕಸಭಾ ಚುನಾವಣೆ ಸಾಮಾನ್ಯ ವೀಕ್ಷಕ ಎಂ.ಲಶ್ಮಿ: ವಾರ್‌ ರೂಂ ಪರಿಶೀಲನೆ

| Published : Apr 22 2024, 02:03 AM IST

ಲೋಕಸಭಾ ಚುನಾವಣೆ ಸಾಮಾನ್ಯ ವೀಕ್ಷಕ ಎಂ.ಲಶ್ಮಿ: ವಾರ್‌ ರೂಂ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಕ್ಷೇತ್ರಕ್ಕೆ ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಎಂ.ಲಶ್ಮಿ ಅವರು ನೇಮಕವಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ವೀಕ್ಷಣಾ ಕರ್ತವ್ಯದಲ್ಲಿ ತೊಡಗಿದ್ದಾರೆ.

- ವಿವಿಧ ತಂಡಗಳ ರಚನೆ, 24 ತಾಸು 3 ಪಾಳಿ ಕೆಲಸ - - - ದಾವಣಗೆರೆ: ಲೋಕಸಭಾ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಕ್ಷೇತ್ರಕ್ಕೆ ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಎಂ.ಲಶ್ಮಿ ಅವರು ನೇಮಕವಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ವೀಕ್ಷಣಾ ಕರ್ತವ್ಯದಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುವ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಎಂ.ಸಿ.ಸಿ.ಗೆ ಸಂಬಂಧಿಸಿದಂತೆ ವೀಕ್ಷಣೆಗಾಗಿ ಚುನಾವಣಾ ವಾರ್ ರೂಂ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ದೂರುಗಳ ನಿರ್ವಹಣೆ, ಸಹಾಯವಾಣಿಗೆ ಬರುವ ಕರೆಗಳ ನಿರ್ವಹಣೆ, ಚೆಕ್‌ಪೋಸ್ಟ್‌ಗಳ ನೇರ ದೃಶ್ಯಾವಳಿ ವೀಕ್ಷಣೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ವೀಕ್ಷಣೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾ ವಹಿಸಲು ವಿವಿಧ ತಂಡಗಳು ದಿನದ 24 ಗಂಟೆಗಳ ಕಾಲ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿವೆ.

ಪರಿಶೀಲನೆ:

ಚುನಾವಣಾ ವಾರ್ ರೂಂನಲ್ಲಿ ಕೈಗೊಳ್ಳಲಾಗುತ್ತಿರುವ ಕೆಲಸಗಳು ಮತ್ತು ನಿಯಂತ್ರಣದ ಬಗ್ಗೆ ಕೈಗೊಂಡಿರುವ ಮೇಲ್ವಿಚಾರಣೆಯನ್ನು ವೀಕ್ಷಕರು ಎಲ್ಲ ದಾಖಲೆ ಮತ್ತು ಕಡತಗಳನ್ನು ಪರಿಶೀಲನೆ ನಡೆಸಿದರು.

ಸಂಪರ್ಕಿಸಬಹುದು:

ಜಿಲ್ಲೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದು, ಚುನಾವಣಾ ಎಂಸಿಸಿ ಉಲ್ಲಂಘನೆ ಮತ್ತು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಇವರನ್ನು ಭೇಟಿ ಮಾಡಿ ಅಥವಾ ದೂರವಾಣಿಗೆ ಕರೆ ಮಾಡಿ ನೀಡಬಹುದು. ಅಥವಾ ಅವರ ಇ-ಮೇಲ್ ವಿಳಾಸಕ್ಕೆ ವಿವರದೊಂದಿಗೆ ಕಳಿಸಬಹುದು.

ಸಾಮಾನ್ಯ ವೀಕ್ಷಕರು:

ಎಂ.ಲಶ್ಮಿ, ಐಎಎಸ್, ಮೊ.7618745524. ವೆಚ್ಚ ವೀಕ್ಷಕರು: ಪ್ರತಿಭಾ ಸಿಂಗ್ ಐಆರ್‌ಎಸ್, ಮೊ: 7795492549 ಇಲ್ಲಿಗೆ ಸಂಪರ್ಕಿಸಬಹುದಾಗಿದೆ. ವೆಚ್ಚ ವೀಕ್ಷಕರು ವಾರ್ ರೂಂ ವೀಕ್ಷಣೆ ಮಾಡಿದಾಗ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಸ್ಮಾರ್ಟ್‌ ಸಿಟಿ ಎಂ.ಡಿ ವೀರೇಶ್, ವಾರ್ ರೂಂ ನೋಡಲ್ ಅಧಿಕಾರಿ ಉದಯಕುಮಾರ್, ಮಾಧ್ಯಮ ವೀಕ್ಷಣಾ ನೋಡಲ್ ಅಧಿಕಾರಿ ಶಿವಾಜಿ, ವೀಕ್ಷಕರ ಲಯಜನ್ ಅಧಿಕಾರಿ ನಜ್ಮಾ ಉಪಸ್ಥಿತರಿದ್ದು ಮಾಹಿತಿ ನೀಡಿದರು.

- - - -20ಕೆಡಿವಿಜಿ40ಃ:

ದಾವಣಗೆರೆಯಲ್ಲಿ ಸಾಮಾನ್ಯ ಚುನಾವಣಾ ವೀಕ್ಷಕ ಎಂ.ಲಶ್ಮಿ ಮತ್ತಿತರರು ಅಧಿಕಾರಿಗಳ ತಂಡದವರು ವಾರ್ ರೂಂ ವೀಕ್ಷಿಸಿದರು.