ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.ಮಂಡ್ಯ, ಧಾರವಾಡ, ವಿಜಯನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 4 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿ 21 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು18.20 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ.
ದಾಳಿಗೊಳಗಾದ ನಾಲ್ವರು ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ ಪತ್ತೆ?:
1.ವಿ.ಎಸ್.ಬೈರೇಶ್, ಮಂಡ್ಯ ಜಿಲ್ಲೆಯ ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಕಚೇರಿ ಅಧೀಕ್ಷಕ: 5 ಕಡೆ ಶೋಧ, 4 ಸೈಟ್, 1 ವಾಸದ ಮನೆ, 1 ಎಕರೆ 37 ಗುಂಟೆ ಕೃಷಿ ಜಮೀನು, ಇತರೆ ಆಸ್ತಿಗಳು ಸೇರಿ ಒಟ್ಟು ಮೌಲ್ಯ 2.14 ಕೋಟಿ ರು. ಮೌಲ್ಯದ ಸ್ಥಿರ ಆಸ್ತಿ. 42.000 ರು. ನಗದು, 15.70 ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣ, 70 ಲಕ್ಷ ರು. ಬೆಲೆಬಾಳುವ ವಾಹನಗಳು ಮತ್ತು ಇತರೆ ವಸ್ತುಗಳು ಎಲ್ಲಾ ಸೇರಿ 1.04 ಕೋಟಿ ಮೌಲ್ಯದ ಚರ ಆಸ್ತಿ. ಒಟ್ಟು 3.18 ಕೋಟಿ ರು.ಮೌಲ್ಯದ ಆಸ್ತಿ ಪತ್ತೆ.2.ರಾಜಶೇಖರ್ ಈರಪ್ಪ, ಧಾರವಾಡ ಜಿಲ್ಲೆ ಕೃಷಿ ಇಲಾಖೆ ವಿಜಿಲೆನ್ಸ್ ವಿಭಾಗದ ಜಂಟಿ ನಿರ್ದೇಶಕ: 6 ಕಡೆ ಶೋಧ, 3 ಸೈಟ್, 3 ವಾಸದ ಮನೆ, 6.30 ಎಕರೆ ಕೃಷಿ ಜಮೀನು ಸೇರಿ 5.34 ಸ್ಥಿರ ಆಸ್ತಿ. 80,530 ನಗದು, 18.19 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 38.80 ಲಕ್ಷ ರು. ಬೆಲೆ ಬಾಳುವ ವಾಹನಗಳು ಸೇರಿ 72.79 ಲಕ್ಷ ರು. ಚರ ಆಸ್ತಿ, ಒಟ್ಟು 6.07 ಕೋಟಿ ರು. ಆಸ್ತಿ ಪತ್ತೆ.3.ಎಲ್.ಆರ್.ಶಂಕರ್ ನಾಯ್ಕ್, ವಿಜಯನಗರ ಜಿಲ್ಲೆ, ಜಿಲ್ಲಾ ಆರೋಗ್ಯಾಧಿಕಾರಿ: 4 ಕಡೆ ಶೋಧ, 11 ಸೈಟ್, 5 ವಾಸದ ಮನೆ ಸೇರಿ 4.20 ಕೋಟಿ ಸ್ಥಿರ ಆಸ್ತಿ. 11.56 ಲಕ್ಷ ನಗದು, 16.75 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 9.60 ಲಕ್ಷ ರು. ಬೆಲೆಬಾಳುವ ವಾಹನಗಳು,31.90 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ 69.82 ಚರ ಆಸ್ತಿ, ಒಟ್ಟು 4.89 ಕೋಟಿ ರು. ಆಸ್ತಿ ಪತ್ತೆ.4. ಎಸ್.ರೂಪ್ಲಾ ನಾಯಕ್, ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಕಾರ್ಯಪಾಲಕ ಅಭಿಯಂತರ: 6 ಕಡೆ ಶೋಧ, 6 ನಿವೇಶನ, 2 ವಾಸದ ಮನೆಗಳು, 3.20 ಎಕರೆ ಕೃಷಿ ಜಮೀನು ಸೇರಿ 2.94 ಕೋಟಿ ರು.ಸ್ಥಿರ ಆಸ್ತಿ. 32,300 ನಗದು, 84.09 ಲಕ್ಷ ಮೌಲ್ಯದ ಚಿನ್ನಾಭರಣ, 18 ಲಕ್ಷ ಬೆಲೆ ಬಾಳುವ ವಾಹನಗಳು, 8 ಲಕ್ಷ ರು. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ 1.10 ಕೋಟಿ ರು. ಚರ ಆಸ್ತಿ, ಒಟ್ಟು 4.04 ಕೋಟಿ ರು. ಆಸ್ತಿ ಪತ್ತೆ. ಯಾವ ಅಧಿಕಾರಿಗಳ ಮೇಲೆ ದಾಳಿ?:ಮಂಡ್ಯ ಜಿಲ್ಲೆಯ ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಕಚೇರಿ ಅಧೀಕ್ಷಕ ವಿ.ಎಸ್.ಬೈರೇಶ್ಧಾರವಾಡ ಜಿಲ್ಲೆ ಕೃಷಿ ಇಲಾಖೆ ವಿಜಿಲೆನ್ಸ್ ವಿಭಾಗದ ಜಂಟಿ ನಿರ್ದೇಶಕ ರಾಜಶೇಖರ್ ಈರಪ್ಪವಿಜಯನಗರ ಜಿಲ್ಲೆ, ಜಿಲ್ಲಾ ಆರೋಗ್ಯಾಧಿಕಾರಿ ಎಲ್.ಆರ್.ಶಂಕರ್ ನಾಯ್ಕ್‌ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎಸ್.ರೂಪ್ಲಾ ನಾಯಕ್